2022ನೇ ಸಾಲಿನ ಕರ್ನಾಟಕ ಅತ್ಯುತ್ತಮ ಪೊಲೀಸ್ ಠಾಣೆ ಪ್ರಶಸ್ತಿಯನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ಮುಡಿಗೆರಿಸಿಕೊಂಡಿದೆ. ಈ ಪ್ರಶಸ್ತಿಯನ್ನು ಕೇಂದ್ರ ಗೃಹ ಇಲಾಖೆ ನೀಡುತ್ತದೆ. 


COMMERCIAL BREAK
SCROLL TO CONTINUE READING

ಕೇಂದ್ರ ಗೃಹ ಇಲಾಖೆಯ ಸಲಹಾ ಸಂಸ್ಥೆ ತಂಡವು 2022ನೇ ಸಾಲಿನ ಅತ್ಯುತ್ತಮ ಪೊಲೀಸ್ ಠಾಣೆ ಪ್ರಶಸ್ತಿಗಾಗಿ ನಿಪ್ಪಾಣಿ ಹಾಗೂ ಕಿತ್ತೂರು ಪೊಲೀಸ್ ಠಾಣೆಗಳ ಮೌಲ್ಯಮಾಪನ ಕೈಗೊಂಡಿತ್ತು. ಈ ವೇಳೆ ತಂಡವು ಠಾಣೆಯ ಒಳಾಂಗಣ, ಹೊರಾಂಗಣ ಸ್ವಚ್ಚತೆ, ಕುಡಿಯುವ ನೀರು, ಕಾಂಪೌಡ್ ವ್ಯವಸ್ಥೆ, ಠಾಣೆಯ ಕಟ್ಟಡ, ಲಾಕ್ ಅಪ್ ಕೋಣೆ, ಪುರುಷ ಮತ್ತು ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ದಾಖಲಾತಿಗಳ ಸಂಗ್ರಹ, ಸುರಕ್ಷತೆ, ಭದ್ರತೆ, ಶೌಚಗೃಹಗಳ ಸೌಲಭ್ಯ, ಅಪರಾಧ ಪ್ರಕರಣಗಳು, ತನಿಖಾ ವಿಧಾನ, ಅಪರಾಧ ಪತ್ತೆ ಕಾರ್ಯವಿಧಾನ, ಹಳೆಯ ಪ್ರಕರಣಗಳ ವಿಲೇವಾರಿ, ಪ್ರಕರಣಗಳಲ್ಲಿ ಶಿಕ್ಷೆ, ಕಾನೂನು ವ್ಯವಸ್ಥೆ ಸೇರಿ ಹಲವು ವಿಷಯಗಳ ಕುರಿತು ಮೌಲ್ಯಮಾಪನ ಮಾಡಿತ್ತು.


ಇದನ್ನೂ ಓದಿ - ಆಳ ಸಮುದ್ರದಲ್ಲಿ ಕರ್ನಾಟಕದ ಮೀನುಗಾರರೊಂದಿಗೆ ತಮಿಳುನಾಡು ಮೀನುಗಾರರ ಪುಂಡಾಟ


ಅಲ್ಲದೇ, ಪೊಲೀಸ್ ಠಾಣೆಯ ಬಗ್ಗೆ ಸಾರ್ವಜನಿಕ ಅಭಿಪ್ರಾಯ, ಲಭ್ಯತೆ, ನಡವಳಿಕೆ, ದೂರುದಾರರ ಬಗ್ಗೆ ಕಾಳಜಿ, ಜಾತಿ, ಧರ್ಮ, ಲಿಂಗ ತಾರತಮ್ಯತೆ ಹೀಗೆ ಠಾಣೆಯ ಕುರಿತು ಸಾರ್ವಜನಿಕರಿಂದ ನೇರವಾಗಿ ಮೌಲ್ಯಮಾಪನ ಮಾಡಿತ್ತು. 


ಇಷ್ಟೇ ಅಲ್ಲದೆ, ಠಾಣೆಯ ಅಧಿಕಾರಿಗಳಿಗೆ 200 ರಿಂದ 250 ಪ್ರಶ್ನೆಗಳನ್ನು ಕೇಳಿ ಆ ಉತ್ತರಗಳಿಂದ ಮೌಲ್ಯಮಾಪನ ಮಾಡಿ ಕೊನೆಗೆ ಕರ್ನಾಟಕ ಅತ್ಯುತ್ತಮ ಪೊಲೀಸ್ ಠಾಣೆ ಆಯ್ಕೆ ಪ್ರಶಸ್ತಿಗೆ ನಿಪ್ಪಾಣಿ ಪೊಲೀಸ್ ಠಾಣೆಯನ್ನು ಆಯ್ಕೆ ಮಾಡಲಾಗಿದೆ ಎಂದು ಎಸ್‌ಪಿ ಡಾ.ಸಂಜೀವ ಪಾಟೀಲ್ ತಿಳಿಸಿದ್ದಾರೆ. 


ಇದನ್ನೂ ಓದಿ - ನಾನು ಸದಾ ರಿಲವೆಂಟ್ ರಾಜಕಾರಣಿ:ಸದನದಲ್ಲಿ ಸಿದ್ದು ಗುಡುಗು!


ಈ ಪ್ರಶಸ್ತಿಗೆ ಕಾರಣರಾದ ಡಿವೈಎಸ್‌ಪಿ ಬಸವರಾಜ ಯಲಿಗಾರ, ಸಿಪಿಐ ಸಂಗಮೇಶ ಶಿವಯೋಗಿ, ಪಿಎಸ್ಐ ಅನಿಲ ಕುಂಬಾರ ಹಾಗೂ ಸಿಬ್ಬಂದಿಯನ್ನು ಎಸ್‌ಪಿ ಸಂಜೀವ ಪಾಟೀಲ್ ಅಭಿನಂದಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.