ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಉಳಿವೋ, ಅಳಿವೋ ಎಂಬ ಪ್ರಶ್ನೆ ಮಧ್ಯೆಯೇ ಗುರುವಾರ ವಿಶ್ವಾಸಮತಯಾಚನೆ ಮಾಡದೆ, ಕಲಾಪ ಮುಂದೂಡಿದ ಕಾರಣ ಬಿಜೆಪಿ ನಾಯಕರು ಸದನದಲ್ಲೇ ನಿದ್ದೆ ಮಾಡಿ ಅಹೋರಾತ್ರಿ ಧರಣಿ ನಡೆಸಿದರು. 


COMMERCIAL BREAK
SCROLL TO CONTINUE READING

ಸದನದಲ್ಲಿ ಧರಣಿ ನಿರತರಾದ ಸದಸ್ಯರಿಗೆ ಸರ್ಕಾರದ ವತಿಯಿಂದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಅವರಿಗೆ ಊಟ, ತಿಂಡಿ, ಕಾಫಿ, ಟೀ ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಇಂದು ಬೆಳಿಗ್ಗೆ ಸದನಕ್ಕೆ ಆಗಮಿಸಿದ ಡಿಸಿಎಂ ಜಿ.ಪರಮೇಶ್ವರ್ ಅವರು ಬಿಜೆಪಿ ಶಾಸಕರ ಕುಶಲೋಪರಿ ವಿಚಾರಿಸಿದರು. ಸರ್ಕಾರದ ವಿರುದ್ಧ ಹೋರಾಟ ನಡೆಸಿದರೂ ಸಹ ಬೆಳಗಿನ ಉಪಹಾರವನ್ನು ವಿಪಕ್ಷ ಸದಸ್ಯರೊಂದಿಗೇ ಪರಮೇಶ್ವರ್ ಸೇವಿಸಿದರು.


ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿ ಶಾಸಕರು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಅವರಿಗೆ ಅಗತ್ಯವಾದ ಆಹಾರ ಹಾಗೂ ಇತರ ಸೌಲಭ್ಯಗಳನ್ನು ಒದಗಿಸುವದು ನಮ್ಮ ಕರ್ತವ್ಯ. ಇವರಲ್ಲಿ ಕೆಲವರಿಗೆ ಡಯಾಬಿಟೀಸ್, ಬಿಪಿ ಇದೆ. ಹಾಗಾಗಿ ಅವರಿಗೆ ಅಗತ್ಯವಾದ ಆಹಾರ ತಿನಿಸುಗಳನ್ನು ನಾವು ವ್ಯವಸ್ಥೆ ಮಾಡಿದ್ದೇವೆ. ರಾಜಕೀಯಕ್ಕಿಂತಲೂ ಸ್ನೇಹ ಮುಖ್ಯ. ಅದೇ ಸುಂದರವಾದ ಪ್ರಜಾಪ್ರಭುತ್ವ" ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ಹೇಳಿದರು.