ಬೆಂಗಳೂರು: ಬಿಜೆಪಿಗೆ ರೈತರ ಹಾಗೂ ಬಡವರ ಬಗ್ಗೆ ಕಾಳಜಿ ಇಲ್ಲವೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ‘ಭಾರತ್ ಜೋಡೋ ಯಾತ್ರೆ’ಯಲ್ಲಿ ರಾಹುಲ್ ಮಾತನಾಡಿರುವ ವಿಡಿಯೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಕಾಂಗ್ರೆಸ್ ಹಂಚಿಕೊಂಡಿದೆ.


COMMERCIAL BREAK
SCROLL TO CONTINUE READING

‘ನಾನು ಯಾತ್ರೆಯುದ್ದಕ್ಕೂ ರೈತರೊಂದಿಗೆ ಸಂವಾದ ನಡೆಸುತ್ತಾ ಬಂದಿದ್ದೇನೆ. ರೈತರನ್ನು ಎಲ್ಲೂ ಕಡೆಯಿಂದಲೂ ಹಿಂಡಿ ಹಾಕಲಾಗಿದೆ. ರೈತರಿಗೆ ನೀಡಬೇಕಾದ ಬೆಂಬಲ ಬೆಲೆ ನೀಡುತ್ತಿಲ್ಲ.‌ ಇನ್ನೊಂದೆಡೆ ಇದೇ ಮೊದಲ ಬಾರಿಗೆ ಕೃಷಿಗೂ GST ಹಾಕಲಾಗಿದೆ. ಟ್ರಾಕ್ಟರ್, ಕೀಟನಾಶಕ, ರಸಗೊಬ್ಬರಕ್ಕೂ GST ಕಟ್ಟಬೇಕಾಗಿದೆ’ ಅಂತಾ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.


ಟಿಪ್ಪು, ತಾಳಗುಪ್ಪ ರೈಲುಗಳಿಗೆ ಮರುನಾಮಕರಣ: ಸಿದ್ದರಾಮಯ್ಯ ಹೇಳಿದ್ದೇನು..?


‘ಹಣ ಎಂದೂ ಮಾಯವಾಗುವುದಿಲ್ಲ. ಅದು ನಿಮ್ಮ ಜೇಬಿನಿಂದ ಹೋಗುತ್ತಿದ್ದರೆ ಮತ್ತೊಬ್ಬರ ಜೇಬು ಸೇರುತ್ತಿದೆ ಎಂದೇ ಅರ್ಥ. ಪ್ರಪಂಚದ 2ನೇ ಶ್ರೀಮಂತ ವ್ಯಕ್ತಿ ನಮ್ಮ ಪ್ರಧಾನಿಗಳ ಆತ್ಮೀಯ ಗೆಳೆಯ. ನಿಮ್ಮ ಹಣ ಆ ಉದ್ಯಮಿಯ ಜೇಬು ಸೇರುತ್ತಿದೆ.‌ ಆತ ಜಗತ್ತಿನ 2 ನೇ ಶ್ರೀಮಂತನಾಗಿದ್ದು ನಿಮ್ಮ ಹಣದಿಂದ. ದೇಶದ ಜನರ ಹಣ ಕಸಿದು ಪ್ರಧಾನಿ ಮೋದಿಯವರ ನೆಚ್ಚಿನ ಉದ್ಯಮಿಗಳಿಗೆ ನೀಡಲಾಗುತ್ತಿದೆ’ ಎಂದು ರಾಹುಲ್ ಟೀಕಿಸಿದ್ದಾರೆ.


ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: PFI ಜೊತೆ ಪೊಲೀಸರ ನಂಟು.? ರಾಜ್ಯದ‌ ಮೇಲೂ NIA ಕಣ್ಣು.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.