Brims Hospital : ಆಸ್ಪತ್ರೆಯಲ್ಲಿ ಮಾರಾಮಾರಿ : ನಾಲ್ವರಿಗೆ ಗಾಯ, ಒಬ್ಬನ ಸ್ಥಿತಿ ಚಿಂತಾಜನಕ
ಪ್ರಕರಣ ಕುರಿತಂತೆ ನ್ಯೂ ಟೌನ್ ಹಾಗೂ ಟೌನ್ ಪೋಲಿಸ್ ಠಾಣೆಯಲ್ಲಿ ಸೆಕ್ಷನ್ಬ 307,353 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೀದರ್ : ಆಸ್ಪತ್ರೆಯಲ್ಲಿ ಐವರು ವ್ಯಕ್ತಿಗಳು ಖಾರದ ಪುಡಿ ಎರಚಿ ಮಾರಾಮಾರಿ ಮಾಡಿಕೊಂಡ ಘಟನೆ ನಗರದ ಬ್ರಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ನಡೆದಿದೆ.
ದಾಳಿಯಲ್ಲಿ ನಾಲ್ವರಿಗೆ ಗಾಯಗೊಂಡಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಹಲ್ಲೆಗೆ(Fight) ಒಳಗಾಗದವರು ರೌಫ್, ಫಿರೋಜ್ ಖಾನ್, ಅಫಸರ್ ಖಾನ್, ಅರಬಾಜ್ ಖಾನ್, ಅಜ್ಜು ಗಂಭಿರ ಗಾಯಗೊಂಡ ವ್ಯಕ್ತಿ. ಹೆಚ್ಚಿನ ಚಿಕಿತ್ಸೆ ಗಾಗಿ ಮಹ್ಮದ್ ರೌಭ್ ಹೈದರಾಬಾದ್ ಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ : Hijab Row: ಪರೀಕ್ಷೆಗೆ ಗೈರಾದ ಹಿಜಾಬ್ ಐಕಾನ್ ಮುಸ್ಕಾನ್
ಪ್ರಕರಣ ಕುರಿತಂತೆ ನ್ಯೂ ಟೌನ್ ಹಾಗೂ ಟೌನ್ ಪೋಲಿಸ್ ಠಾಣೆ(Police Station)ಯಲ್ಲಿ ಸೆಕ್ಷನ್ಬ 307,353 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾರಾಮಾರಿಗೆ ಕಾರಣ :
ಕಳೆದ ವರ್ಷ ಕಾಂಗ್ರೆಸ್ ಪಕ್ಷ(Congress)ದ ಮುಖಂಡನ ಪುತ್ರ ಹಾಗೂ ರೌಫ್ ಮಧ್ಯ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದಿತ್ತು. ನಗರದ ಮನಿಯಾರ ತಾಲಿಮ್ ನಲ್ಲಿ ರೌಫ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡನ ಮಕ್ಕಳ ಮಧ್ಯ ಮಾರಾಮಾರಿ ನಡೆದಿತ್ತು.ಚಿಕಿತ್ಸೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ರೌಫ್ ಮತ್ತು ಕೈ ಮುಖಂಡ ಹಾಗೂ ಮಕ್ಕಳಿಂದ ರೌಫ್ ಮೇಲೆ ಹಲ್ಲೆ ಮಾಡಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.