ಬೆಂಗಳೂರು: ಕೋವಿಡ್ ಸಂಕಷ್ಟದ ಸಮಯದಲ್ಲಿಯೂ ನವೆಂಬರ್ 17ರಿಂದ ಪದವಿ ತರಗತಿಗಳನ್ನು ನಡೆಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಮೂಲಕ ಕೊನೆಗೂ ನವೆಂಬರ್ 17ರಿಂದ ರಾಜ್ಯದಲ್ಲಿ ಡಿಗ್ರಿ, ಇಂಜಿನಿಯರಿಂಗ್, ಡಿಪ್ಲೊಮಾ ತರಗತಿಗಳು ಆರಂಭಗೊಳ್ಳಲು ಸರ್ಕಾರ ಹಸಿರು ನಿಶಾನೆ ನೀಡಿದೆ.


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ಕಾಲೇಜುಗಳನ್ನು ತೆರೆಯುವ ಕುರಿತಂತೆ ಇಂದು ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಕರೋನಾ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಿಗಾ ವಹಿಸುವ ಮೂಲಕ ನವೆಂಬರ್ 17ರಿಂದ ಡಿಗ್ರಿ ಕಾಲೇಜುಗಳನ್ನು ತೆಗೆಯಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರೂ ಆಗಿರುವ ಡಾ. ಸಿ. ಎನ್. ಅಶ್ವಥ್ ನಾರಾಯಣ (Dr CN Ashwathnarayana) ಮಾಹಿತಿ ನೀಡಿದ್ದಾರೆ.


ಈ ರಾಜ್ಯದಲ್ಲಿ ನವೆಂಬರ್‌ನಿಂದ ತೆರೆಯಲಿವೆಯಂತೆ ಪ್ರಾಥಮಿಕ ಶಾಲೆಗಳು


ಆದಾಗ್ಯೂ ವಿದ್ಯಾರ್ಥಿಗಳು ಕಾಲೇಜಿಗೆ (College) ಹೋಗಬೇಕೋ? ಅಥವಾ ಬೇಡವೋ? ಎಂಬ ಬಗ್ಗೆ ಅಂತಿಮ ತೀರ್ಮಾನ ಅವರ ಪೋಷಕರದ್ದೇ ಆಗಿರುತ್ತದೆ ಎಂದು ಸ್ಪಷ್ಟಪಡಿಸಿರುವ ಸಚಿವರು ವಿದ್ಯಾರ್ಥಿಗಳು ತರಗತಿಯಲ್ಲಿ ಹಾಜರಾಗಿಯಾದರೂ ಕಲಿಯಬಹುದು ಅಥವಾ ಆನ್ಲೈನ್ ಮೂಲಕವಾದರೂ ತಮ್ಮ ಕಲಿಕೆ ಮುಂದುವರೆಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.


ಆನ್ ಲೈನ್ ಶಿಕ್ಷಣ ಪಡೆಯಲು ಕಷ್ಟವಾಗಿರುವ ಮಕ್ಕಳ ನೆರವಿಗೆ ಬಂದ ಪೋಲಿಸ್!


ರಾಜ್ಯದಲ್ಲಿ ಕಾಲೇಜು ಆರಂಭದ ಬಗ್ಗೆ ಈಗಾಗಲೇ ಸಕಲ ಸಿದ್ಧತೆ ನಡೆದಿದೆ. ಕಾಲೇಜುಗಳಲ್ಲಿ ಥಿಯೇರಿ ತರಗತಿಗಳ ಜೊತೆಗೆ ಲೈಬ್ರರಿ, ಪ್ರಾಕ್ಟಿಕಲ್ ತರಗತಿ ಕೂಡ ಆರಂಭಗೊಳ್ಳಲಿವೆ. ಈ ವೇಳೆ ಹಾಸ್ಟೆಲ್ ಗಳನ್ನು ತೆರೆಯಲು ಕೂಡ ಸಿದ್ಧತೆ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಕಾಲೇಜುಗಳಿಗೆ ತೆರಳಲು ತೊಂದರೆಯಾಗದಂತೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.