ಬೆಂಗಳೂರು :  ಜೆಡಿಎಸ್ ಸಭೆಗೂ ಮುನ್ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (Kumaraswamy) ಮಹತ್ವದ ಹೇಳಿಕೆಯೊಂದನ್ನು ನೀಡಿದ್ದು, ಸಂಕ್ರಾಂತಿ ಬಳಿ ಪಕ್ಷದಲ್ಲಿ  ಭಾರೀ ಬದಲಾವಣೆ ಆಗಲಿದೆ ಎಂಬುದರ ಮುನ್ಸೂಚನೆ ಕೊಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ಯಾವ ಪಕ್ಷದೊಂದಿಗೂ ವಿಲೀನ  ಇಲ್ಲ : ಹೆಚ್ ಡಿಕೆ
ಸಂಕ್ರಾಂತಿಯ ಬಳಿಕ ಪಕ್ಷದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಲು ನಿರ್ಧರಿಸಿದ್ದೇವೆ.  ಈ ಹಿನ್ನೆಲೆಯಲ್ಲಿ ಮೊದಲ ಸಭೆ ನಡೆಸಿದ್ದೇವೆ. ಯಾವುದೇ ಪಕ್ಷದೊಂದಿಗೆ ವಿಲೀನ ಅಥವಾ ಸೀಟು ಹೊಂದಾಣಿಕೆ ಇಲ್ಲ ಎಂಬುದನ್ನು  ಕುಮಾರಸ್ವಾಮಿ (H D Kumaraswamy)ಸ್ಪಷ್ಟ ಪಡಿಸಿದ್ದಾರೆ. 


ALSO READ : ಜೆಡಿಎಸ್ ಬಲ‌ಪಡಿಸಲು ಅಖಾಡಕ್ಕಿಳಿದ Nikhil Kumaraswamy!


“ಪಾಪದ ಹಣ ಚೆಲ್ಲಿ ಅಧಿಕಾರ ಹಿಡಿಯಲು ಹೊರಟಿದೆ ಬಿಜೆಪಿ” :
ಜೆಡಿಎಸ್ (JDS) ಸ್ವಾಭಿಮಾನವನ್ನು ಬೇರೆ ಪಕ್ಷಕ್ಕೆ ಅಡ ಇಡಲು ಸಾಧ್ಯವಿಲ್ಲ. 2023ರಲ್ಲಿ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ. ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ (Election) ನಿಜವಾದ ರಾಜಕೀಯ ಅಖಾಡ ಸಿದ್ದವಾಗಲಿದೆ. ಬಿಜೆಪಿ (BJP) ಪಾಪದ ಹಣ ಚೆಲ್ಲಿ ಗ್ರಾಮ ಪಂಚಾಯತ್ ಅಧಿಕಾರ ಹಿಡಿಯಲು ಹೊರಟಿದೆ ಎಂದು ಕುಮಾರಸ್ವಾಮಿ ಅಪಾದಿಸಿದ್ದಾರೆ. 


ಆಂಧ್ರದ ಜಗನ್ ಮಾದರಿಯಲ್ಲಿ ಹೊರಹೊಮ್ಮುತ್ತಾರಾ ನಿಖಿಲ್ ? :
ಇದೇ ವೇಳೆ ಜೆಡಿಎಸ್ ಸಂಘಟನೆಯಲ್ಲಿ ನಿಖಿಲ್ ಕುಮಾರಸ್ವಾಮಿಗೆ (Nikhil Kumaraswamy) ಮಹತ್ವದ ಪಾತ್ರ ಸಿಗಲಿದೆ.  ಜಾತ್ಯತೀತ ಜನತಾದಳವನ್ನು ತಳಮಟ್ಟದಿಂದ ಸಂಘಟಿಸಲು ಮೆಗಾ ಪ್ಲಾನ್ ರೂಪಿಸಿದ್ದಾರೆ ನಿಖಿಲ್. ಇದಕ್ಕೆ ತಾತ ದೇವೇಗೌಡರು (Devegowda) ಹಾಗೂ ತಂದೆ ಕುಮಾರಸ್ವಾಮಿಯವರ ಮಾರ್ಗದರ್ಶನ ಕೂಡಾ ಇದೆ.  ಆಂಧ್ರದಲ್ಲಿ ಜಗನ್ ಮಾದರಿಯಲ್ಲಿ ಜೆಡಿಎಸ್ ಪ್ರಾದೇಶಿಕತೆಯ ಅಸ್ಮಿತೆ ಉಳಿಸಲು ಪಣ ತೊಟ್ಟಿದ್ದಾರೆ ದಳಪತಿಗಳು. 


ಸೋಷಿಯಲ್ ಮೀಡಿಯಾವನ್ನು ಪ್ರಬಲವಾಗಿ ಬಳಸುತ್ತಿರುವ ಯುವ ಸಮುದಾಯವನ್ನು ಪಕ್ಷಕ್ಕೆ ಆಕರ್ಷಿಸಲು ಸಂಘಟನೆಯಲ್ಲಿ ಬದಲಾವಣೆಗೆ ರೆಡಿಯಾಗಿದ್ದಾರೆ  ನಿಖಿಲ್. ಜೆಡಿಎಸ್ ಮುನ್ನಡೆಸಲು ದೇವೇಗೌಡರ ನಂತರ ಹೊಸ ತಲೆಮಾರು ಇದೀಗ ಸಜ್ಜಾಗುತ್ತಿದ್ದು, ಕಾರ್ಯಕರ್ತರಲ್ಲಿ ರಣೋತ್ಸಾಹ ಮೂಡಿಸುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.