ತುಮಕೂರು: ಅನುದಾನದ ವಿಚಾರವಾಗಿ ಜನಪ್ರತಿನಿಧಿಗಳಿಬ್ಬರು ಬಾಯಿಗೆ ಬಂದಂತೆ ಬೈದಾಡಿಕೊಂಡಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಿ.ನಂದಿಹಳ್ಳಿಯಲ್ಲಿ ಏರ್ಪಡಿಸಿದ್ದ ಬೆಸ್ಕಾಂ(Bescom)ವಿದ್ಯುತ್ ಎಂಎಸ್‌ಎಸ್(MSS) ಘಟಕ ಉದ್ಘಾಟನಾ ಸಮಾರಂಭದ ವೇಳೆ ಈ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

550 ಕೋಟಿ ರೂ. ಅನುದಾನ ವಿಚಾರವಾಗಿ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ  ಎಸ್.ಆರ್.ಶ್ರೀನಿವಾಸ್(SR Srinivas)ಮತ್ತು ಬಿಜೆಪಿ ಸಂಸದ ಜಿ.ಎಸ್.ಬಸವರಾಜ್(GS Basavaraj) ನಡುವೆ ಮಾತಿನ ಜಟಾಪಟಿಯೇ ನಡೆದಿದೆ. ಕಾರ್ಯಕ್ರಮದಲ್ಲಿಯೇ ಇಬ್ಬರು ನಾಯಕರು ಪರಸ್ಪರ ಕೈ ಕೈ ತೋರಿಸಿಕೊಂಡು ಜಗಳಾಡಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.


ಇದನ್ನೂ ಓದಿ: COVID-19 3rd Wave : ಕೊರೋನಾ 3ನೇ ಅಲೆ ಭೀತಿ: ಆ.15 ರ ನಂತರ ರಾಜ್ಯದಲ್ಲಿ ಕಠಿಣ ನಿಯಮ ಜಾರಿ


ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದ ಸಂಸದ ಜಿ.ಎಸ್.ಬಸವರಾಜು(GS Basavaraj), ಚೇಳೂರು ಹೋಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ 550 ಕೋಟಿ ರೂ. ಅನುದಾನ ತಂದಿದ್ದೇನೆ ಎಂದಿದ್ದಾರೆ. ಈ ಹೇಳಿಕೆಗೆ ಕೋಪಿಸಿಕೊಂಡ ಜೆಡಿಎಸ್ ಶಾಸಕ(JDS MLA) ಶ್ರೀನಿವಾಸ್, ಯಾಕ್ರಿ ರೈತರಿಗೆ ಸುಳ್ಳು ಹೇಳುತ್ತೀರಿ..? ನಿಮಗೆ ವಯಸ್ಸಾಗಿದೆ, ಇನ್ನಾದರೂ ಸುಳ್ಳು ಹೇಳುವುದನ್ನು ನಿಲ್ಲಿಸಿ ಅಂತಾ ರೇಗಾಡಿದ್ದಾರೆ.    


ಶ್ರೀನಿವಾಸ್(SR Srinivas) ಮಾತಿಗೆ ಕೋಪಗೊಂಡ ಸಂಸದ ಬಸವರಾಜು, ನಾನು ಜೀವನದಲ್ಲಿಯೇ ಸುಳ್ಳು ಹೇಳಿಲ್ಲ. ಇವರ ಮಾತನ್ನು ಯಾರೂ ನಂಬಬೇಡಿ, ನಾನು ಹಲವು ಯೋಜನೆಗಳನ್ನು ತಂದಿದ್ದೇನೆ. 550 ಕೋಟಿ ರೂ.ಅನುದಾನ ತಂದಿದ್ದೇನೆ ಅಂತಾ ಹೇಳಿದ್ದಾರೆ. ಈ ವೇಳೆ ಇಬ್ಬರು ನಾಯಕರ ನಡುವೆ ಮಾತಿನ ಸಮರವೇ ನಡೆದಿದೆ. ಇಲ್ಲದ ವಿಚಾರವನ್ನು ಇಲ್ಲಿ ಮಾತನಾಡಬೇಡ, ನೀನು ಅಯೋಗ್ಯ ನನ್ಮಗ ಎಂದು ನಾಯಕರು ಪರಸ್ಪರ ಬೈದಾಡಿಕೊಂಡಿದ್ದಾರೆ.


ಇದನ್ನೂ ಓದಿ: ಬಿಜೆಪಿ ನಾಯಕರ ಹೆಸರಲ್ಲಿಯೇ ಹುಕ್ಕಾ ಬಾರ್ ತೆರೆಯಲಿ: ಸಿ.ಟಿ.ರವಿಗೆ ಸಿದ್ದರಾಮಯ್ಯ ಇತಿಹಾಸ ಪಾಠ!


‘ನಿನ್ನ ಯೋಗ್ಯತೆಗೆ ಬೆಂಕಿ ಹಾಕಾ..! ಬರಿ ಸುಳ್ಳು ಹೇಳಿಕೊಂಡೇ ಕಾಲ ಕಳೆಯುತ್ತಿದ್ದೀಯಾ. ಇಷ್ಟು ವಯಸ್ಸಾಗಿದೆ  ನಿನಗೆ, ಇನ್ನಾದರೂ ಮಾನ ಮರ್ಯಾದೆಯಿಂದ ಇರಬಾರದೇ..? 550 ಕೋಟಿ ರೂ. ಯಾರು ನಿಮ್ಮ ತಾತ ತಂದಿದ್ದಾನಾ..? 550 ಕೋಟಿ ರೂ. ಎಲ್ಲಿ ತಂದಿದ್ದೀರಿ ತೋರಿಸಿ ಅಂತಾ ಶ್ರೀನಿವಾಸ್ ಅವರು ಸಂಸದ ಬಸವರಾಜು ಅವರಿಗೆ ಪ್ರಶ್ನಿಸಿದ್ದಾರೆಂದು ವರದಿಯಾಗಿದೆ.   


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ