covid-19 3rd Wave : ರಾಜ್ಯದಲ್ಲಿ ಕೋವಿಡ್ 3ನೇ ಅಲೆ ತಡೆಯಲು ಸರ್ಕಾರದಿಂದ `ಬಿಗ್ ಪ್ಲಾನ್ ರೆಡಿ`!
ಇನ್ನು ಮುಂದೆ ಬೆಂಗಳೂರು ಸೇರಿ ರಾಜ್ಯದಲ್ಲಿ ಕ್ಲಸ್ಟರ್ ಮತ್ತು ಬಿಗ್ ಕ್ಲಸ್ಟರ್ ಜೋನ್ ಗಳು ಜಾರಿಗೆ ಬರಲಿವೆ. 5 ಕ್ಕಿಂತ ಹೆಚ್ಚು ಕೇಸ್ ಗಳು ವರದಿಯಾದ್ರೆ ಕ್ಲಸ್ಟರ್ ಜೋನ್ ಎಂದು ಪರಿಗಣಿಸಲು ಆದೇಶ ನೀಡಲಾಗಿದೆ.
ಬೆಂಗಳೂರು : ವೇಗವಾಗಿ ಹರಡುತ್ತಿರುವ ಸೋಂಕು ನಿಯಂತ್ರಣಕ್ಕೆ ಕ್ಲಸ್ಟರ್ ಜೋನ್ ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಮುಂದೆ ಬೆಂಗಳೂರು ಸೇರಿ ರಾಜ್ಯದಲ್ಲಿ ಕ್ಲಸ್ಟರ್ ಮತ್ತು ಬಿಗ್ ಕ್ಲಸ್ಟರ್ ಜೋನ್ ಗಳು ಜಾರಿಗೆ ಬರಲಿವೆ. 5 ಕ್ಕಿಂತ ಹೆಚ್ಚು ಕೇಸ್ ಗಳು ವರದಿಯಾದ್ರೆ ಕ್ಲಸ್ಟರ್ ಜೋನ್ ಎಂದು ಪರಿಗಣಿಸಲು ಆದೇಶ ನೀಡಲಾಗಿದೆ.
ನಗರ ಪ್ರದೇಶಗಳಲ್ಲಿ
- ಒಂದು ಅಥವಾ ಅದಕ್ಕಿಂತ ಹೆಚ್ಚು ಮನೆಗಳಲ್ಲಿ (50 ಮೀಟರ್ ರೇಡಿಯಸ್) 5 ಕ್ಕಿಂತ ಹೆಚ್ಚು ಕೇಸ್ ಕಾಣಿಸಿಕೊಂಡ್ರೆ ಕ್ಲಸ್ಟರ್ ಜೋನ್(Cluster Zone) ಆಗಿ ರಚನೆ ಮಾಡಲಾಗುತ್ತದೆ.
- ಕಾರ್ಯಾಚರಣೆಗೆ ಸಾಧ್ಯವಾಗುವಂತೆ ಕ್ಲಸ್ಟರ್ ಜೋನ್ ರಚನೆ
- ವಸತಿ ಸಮುಚ್ಚಯಗಳಲ್ಲಿ ಕಾಣಿಸಿಕೊಂಡ್ರ ಸ್ಥಳೀಯ ಆರೋಗ್ಯಾಧಿಕಾರಿಗಳ ನಿರ್ಧಾರವೆ ಅಂತಿಮ
- ಕ್ಲಸ್ಟರ್ ಜೋನ್ ಅಥವಾ ಕಂಟೈನ್ಮೆಂಟ್ ಜೋನ್ ಎಂದು ಗುರುತಿಸಬೇಕು
ಇದನ್ನೂ ಓದಿ : Covid-19 Guidelines : ಬೆಂಗಳೂರಿಗರೇ ಎಚ್ಚರ..! ಕೋವಿಡ್ ನಿಯಮ ಉಲ್ಲಂಘಿಸಿದ್ರೆ ದಂಡ ಫಿಕ್ಸ್!
ಗ್ರಾಮೀಣ ಪ್ರದೇಶಗಳಲ್ಲಿ
- ಒಂದು ಅಥವಾ ಅದಕ್ಕಿಂತ ಹೆಚ್ಚು ಮನೆಗಳಲ್ಲಿ ಸೋಂಕು ಕಾಣಿಸಿಕೊಂಡ್ರೆ ಮೈಕ್ರೋ ಕಂಟೈನ್ಮೆಂಟ್ ಜೋನ್(Micro Containment Zone) ಎಂದು ಘೋಷಿಸಬೇಕು
15 ಆಥವಾ ಅದಕ್ಕಿಂತ ಹೆಚ್ಚು ಕೇಸ್ ಗಳು ವರದಿಯಾದ್ರೆ ದೊಡ್ಡ ಕ್ಲಸ್ಟರ್ ಎಂದು ಪರಿಗಣಿಸಲು ಆದೇಶ
ನಗರ ಪ್ರದೇಶಗಳಲ್ಲಿ
- ಒಂದು ಅಥವಾ 100 ಮೀಟರ್ ನಲ್ಲಿರುವ ಹೆಚ್ಚು ಮನೆಗಳಲ್ಲಿ 15ಕ್ಕೂ ಹೆಚ್ಚು ಸೋಂಕು ಕಾಣಿಸಿಕೊಂಡ್ರೆ ದೊಡ್ಡ ಕ್ಲಸ್ಟರ್ ಜೋನ್ ಎಂದು ಘೋಷಿಸಬೇಕು
- ಅಪಾರ್ಟ್ಮೆಂಟ್ ಗಳಲ್ಲಿ ಆಯಾ ಮಹಡಿಗಳನ್ನ ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.