`KSRTC` ಪ್ರಯಾಣಿಕರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್!
ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಹೇಳಿದ್ದಾರೆ
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಹಿನ್ನೆಲೆ ಲಾಕ್ ಡೌನ್ ಜಾರಿ ಮಾಡಲಾಗಿದ್ದು, ಈ ಕಾರಣದಿಂದ ಬಸ್ ಸಂಚಾರ ಬಂದ್ ಮಾಡಲಾಗಿದೆ. ಇದರಿಂದ ಸರ್ಕಾರಿ ರಾಜ್ಯ ಸಾರಿಗೆ ಸಂಸ್ಥೆಗೆ ಭಾರೀ ನಷ್ಟವಾಗಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಬಸ್ ಪ್ರಯಾಣದ ದರವನ್ನ ಏರಿಸಲು ಚಿಂತನೆ ನಡೆಸಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿವಯೋಗಿ ಕಳಸದ್(Shivayogi Kalasad), ಬಸ್ ಓಡಿಸದೇ ಇದ್ದರೆ ಪ್ರತಿನಿತ್ಯ ನಮಗೆ 20 ಕೋಟಿ ನಷ್ಟವಾಗುತ್ತದೆ. ಒಂದು ತಿಂಗಳು ಬಸ್ ನಿಂತರೆ ನಮಗೆ 500-600 ಕೋಟಿ ನಷ್ಟವಾಗುತ್ತದೆ. ಲಾಕ್ ಡೌನ್ ಹಿನ್ನೆಲೆ ಕಳೆದ ಒಂದು ತಿಂಗಳಿನಿಂದ ನಾವು ಬಸ್ ಸಂಚಾರ ಬಂದ್ ಮಾಡಿದ್ದೇವೆ, ಮುಂದಿನ ವಾರ ಕೂಡ ಸಂಚಾರ ಇರಲ್ಲ, ಮುಂದೆ ಸರ್ಕಾರದ ಸೂಚನೆಯಂತೆ ಹಂತ ಹಂತವಾಗಿ ಸಾರಿಗೆ ಸಂಚಾರ ಆರಂಭಿಸಲಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : SSLC ಯಾವ ವಿದ್ಯಾರ್ಥಿಯನ್ನು ಫೇಲ್ ಮಾಡಲ್ಲ, ಆದ್ರೆ, ಕನಿಷ್ಠ ಅಂಕ ನಿಗದಿ ಮಾಡಿಲ್ಲ!
ನಮಗೆ ಆಗಿರುವ ನಷ್ಟದ ಪ್ರಮಾಣವನ್ನು ನೋಡಿದರೆ ಶೇ.50 ರಷ್ಟು ದರ ಏರಿಕೆ(Bus Fare Hike) ಆಗಬೇಕು, ಆದರೆ ಅಷ್ಟು ಮಾಡುವುದಕ್ಕೆ ಆಗುವುದಿಲ್ಲ, ಶೇ. 10 ಅಥವಾ 15 ರಷ್ಟು ಪ್ರಯಾಣ ದರ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಅಂದುಕೊಂಡಿದ್ದೇವೆ, ಅದು ಈಗ ಸರ್ಕಾರದ ಪರಿಶೀಲನೆ ಹಂತದಲ್ಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Mansoon: ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ, ಈ ಭಾಗಗಳಲ್ಲಿ ಜೂ.16ರವರೆಗೆ ಆರೆಂಜ್ ಅಲರ್ಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.