ಬೈಕ್‌ಗೆ ಗುದ್ದಿ ರಸ್ತೆ ಬದಿ ಶೆಡ್‌ಗೆ ನುಗ್ಗಿದ ಕಾರು : ಓರ್ವ ಸಾವು, ಇಬ್ಬರಿಗೆ ಗಾಯ
ಕಾರು ಭೀಮನಬೀಡು ಕಡೆಯಿಂದ ಗುಂಡ್ಲುಪೇಟೆ ಕಡೆಗೆ ಹೋಗುತ್ತಿತ್ತು. ಚಾಲಕ ಮದ್ಯಪಾನ ಮಾಡಿದ್ದ ಕಾರಣ ರಸ್ತೆಯ ಬಲಭಾಗದಲ್ಲಿ ನಿಂತಿದ್ದವರಿಗೆ ಡಿಕ್ಕಿಯಾಗಿ ಶೆಡ್‌ಗೆ ನುಗ್ಗಿದ ಕಾರು ಜಮೀನೊಳಗೆ ಬಂದು ನಿಂತಿದೆ. ಇದರಿಂದ ಶೆಡ್ ಸಂಪೂರ್ಣ ಹಾನಿಯಾಗಿದ್ದು, ಬೈಕ್ ಕೂಡ ನಜ್ಜುಗುಜ್ಜಾಗಿದೆ.
ಚಾಮರಾಜನಗರ: ಬೈಕ್ ಗೆ ಗುದ್ದಿ ಬಳಿಕ ರಸ್ತೆಬದಿ ಶೆಡ್ ಗೆ ಕಾರು ನುಗ್ಗಿದ ಪರಿಣಾಮ ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕೂತನೂರು ಸಮೀಪ ಶುಕ್ರವಾರ ನಡೆದಿದೆ.
ಕೂತನೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಬಳಿಕ ಶೆಡ್ ಗೆ ನುಗ್ಗಿದ ಪರಿಣಾಮ ಕೂತನೂರು ಗ್ರಾಮದವ ನಿಂಗಶೆಟ್ಟಿ(46) ಮೃತರು. ಮಹದೇವ ಮತ್ತು ಭೀಮನಬೀಡು ಗ್ರಾಮದ ಮಾದಶೆಟ್ಟಿ ಮೂವರು ತೀವ್ರವಾಗಿ ಗಾಯಗೊಂಡು ಮೈಸೂರಿಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ:ಪ್ರವೀರ್ ಶೆಟ್ಟಿ ಸಿನಿಮಾಗೆ 'ಬಘೀರ' ಬಲ : ನಿದ್ರಾದೇವಿ Next door ಟೀಸರ್ ರಿಲೀಸ್
ಮೂವರು ಎಲೆಕೋಸು ಕಟಾವಿಗೆ ಹೋಗಿದ್ದು, ಮನೆಗೆ ಬೈಕ್‌ನಲ್ಲಿ ತೆರಳಲು ರಸ್ತೆ ಬದಿ ನಿಂತಿದ್ದರು. ಈ ವೇಳೆ ಭೀಮನಬೀಡು ಕಡೆಯಿಂದ ಬಂದ ಕಾರು ಡಿಕ್ಕಿಯಾಗಿ ಮೂವರು ತೀವ್ರಗೊಂಡು ಸುತ್ತಲಿದ್ದವರು ರಕ್ಷಣೆಗೆ ಧಾವಿಸಿದ್ದು, ತುರ್ತುಚಿಕಿತ್ಸಾ ವಾಹನದಲ್ಲಿ ಮೂವರನ್ನು ಮೈಸೂರಿಗೆ ಕರೆದುಕೊಂಡು ಹೋಗುವಾಗ ತೀವ್ರವಾಗಿ ಗಾಯಗೊಂಡಿದ್ದ ನಿಂಗಶೆಟ್ಟಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕಾರು ಚಾಲಕ, ಕಾರು ಮತ್ತು ಬೈಕ್ ನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಭೀಮನಬೀಡು ಕಡೆಯಿಂದ ಗುಂಡ್ಲುಪೇಟೆ ಕಡೆಗೆ ಹೋಗುತ್ತಿತ್ತು. ಚಾಲಕ ಮದ್ಯಪಾನ ಮಾಡಿದ್ದ ಕಾರಣ ರಸ್ತೆಯ ಬಲಭಾಗದಲ್ಲಿ ನಿಂತಿದ್ದವರಿಗೆ ಡಿಕ್ಕಿಯಾಗಿ ಶೆಡ್‌ಗೆ ನುಗ್ಗಿದ ಕಾರು ಜಮೀನೊಳಗೆ ಬಂದು ನಿಂತಿದೆ. ಇದರಿಂದ ಶೆಡ್ ಸಂಪೂರ್ಣ ಹಾನಿಯಾಗಿದ್ದು, ಬೈಕ್ ಕೂಡ ನಜ್ಜುಗುಜ್ಜಾಗಿದೆ. ಆದ್ದರಿಂದ ಕಾರು ಚಾಲಕನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕೂತನೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮದ್ಯಪಾನ ಮಾಡಿ ಕಾರು ಚಲಾಯಿಸಿದ್ದ ಬಗ್ಗೆ ತನಿಖೆಯಿಂದ ತಿಳಿದುಬರಬೇಕಿದ್ದು ಸದ್ಯ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ