Bike Taxi Ban In Karnataka: ಬೆಂಗಳೂರು ಸೇರಿ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಬ್ಯಾನ್ ಆಗಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021ಕ್ಕೆ ರಾಜ್ಯ ಸರ್ಕಾರ ರದ್ದು ಮಾಡಿದೆ. ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪರಿಂದ ಈ ಆದೇಶ ಹೊರಬಿದ್ದಿದೆ.‌


COMMERCIAL BREAK
SCROLL TO CONTINUE READING

14-7-21ರಲ್ಲಿ ಅಂದಿನ ಬಿಜೆಪಿ ಸರ್ಕಾರ ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ ಜಾರಿಗೆ ತಂದಿತ್ತು. ಜನರಿಗೆ ಸಾರಿಗೆ ಸಂಪರ್ಕ ಕಲ್ಪಿಸಲು ಹಾಗೂ ಸ್ವಯಂ ಉದ್ಯೋಗ ಅವಕಾಶ ಕಲ್ಪಿಸಲು ಈ ಯೋಜ‌ನೆ ಪರಿಚಯಿಸಿತ್ತು.‌ ಆದರೆ ಖಾಸಗಿ ಸಾರಿಗೆ ಒಕ್ಕೂಟ ವಿರೋಧಿಸಿ ಯೋಜನೆ ರದ್ದು ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದವು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ಸಾರಿಗೆ ಸಚಿವರ ಭೇಟಿ ಮಾಡಿ ಮನವಿ ಮಾಡಿದ್ದವು. ಅಲ್ಲದೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಮಾಡುವಂತೆ ಬೆಂಗಳೂರು ಬಂದ್ ಕೂಡ ಮಾಡಲಾಗಿತ್ತು. 


ಖಾಸಗಿ ಸಾರಿಗೆ ಸಂಸ್ಥೆ ಮನವಿಗೆ ಸ್ವಂದಿಸಿದ ರಾಜ್ಯ ಸರ್ಕಾರದ ವರದಿ‌ ನೀಡಲು ಸಮಿತಿ‌ ರಚನೆ ಮಾಡಿತ್ತು.‌ ಬಿಎಂಆರ್ ಸಿಎಲ್ ಎಂಡಿ ನೇತೃತ್ವದಲ್ಲಿ ಸಮಿತಿಗೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ ಅಗತ್ಯತೆ ಹಾಗೂ ಜಾರಿ ಬಗ್ಗೆ ವರದಿ ನೀಡಲು ಸರ್ಕಾರದ ಸೂಚನೆ ನೀಡಿತ್ತು. ಅದರಂತೆ ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021 ಪೂರಕವಾಗಿಲ್ಲ‌ ಅಂತ ಸಮಿತಿ ಅಂತ ವರದಿ‌ ನೀಡಿತ್ತು.‌ ಅದರಂತೆ ರಾಜ್ಯ ಸರ್ಕಾರ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧಿಸಿ ಆದೇಶ ಹೊರಡಿಸಿದೆ. ಸರ್ಕಾರ ಈ‌ ನಿರ್ಧಾರ ಖಾಸಗಿ ಸಾರಿಗೆ ಒಕ್ಕೂಟದ ಸಂತಸಕ್ಕೆ ಕಾರಣವಾಗಿದೆ.


ಇದನ್ನೂ ಓದಿ- ವಿಧಾನಸಭಾ ಚುನಾವಣೆಯ ಅಫಿಡವಿಟ್ ನಲ್ಲಿ ಆಸ್ತಿ ಬಗ್ಗೆ ತಪ್ಪು ಮಾಹಿತಿ ನೀಡಿದ ಆರೋಪ - ಅರುಣಾ ಲಕ್ಷ್ಮಿ ವಿರುದ್ಧ ಎಫ್ ಐ ಆರ್ :ತನಿಖೆಗೆ ಕೋರ್ಟ್ ಆದೇಶ


ರಾಜ್ಯ ಸರ್ಕಾರ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಕೊಡ್ತಿರುವ ಕಾರಣವೇನು?
ಬೈಕ್ ಟ್ಯಾಕ್ಸಿಯಿಂದ ಆಟೋ ಚಾಲಕರು, ಕ್ಯಾಬ್ ಚಾಲಕರು ಹಾಗೂ ಬೈಕ್ ಟ್ಯಾಕ್ಸಿ ಚಾಲಕರ ನಡುವೆ ಸಂಘರ್ಷಕ್ಕೂ ಕಾರಣವಾಗಿದೆ. ಈ ಸಂಘರ್ಷಗಳು ನಡೆದು ಮೊಕದ್ದಮೆಗಳು ದಾಖಲಾಗಿ, ಕಾನೂನು ಸುವ್ಯವಸ್ಥೆ ಹದಗೆಡ್ತಿದೆ.‌ ಜೊತೆಗೆ ಮಹಿಳೆಯರಿಗೆ ಅಸುರಕ್ಷಿತ ಹಾಗೂ ಸಾರಿಗೆ ಇಲಾಖೆ ರಾಜಸ್ವ ಸಂಗ್ರಹಕ್ಕೆ ಹಿನ್ನಡೆಯಾಗಿದೆ.‌ ಅಲ್ಲದೆ ಕೆಲ‌ ಅಗ್ರಿಗೇಟರ್ಸ್ ಗಳಿಂದ ಮೋಟಾರ್ ವಾಹನ ಕಾಯ್ದೆ ನಿಯಮ ಉಲ್ಲಂಘನೆ ಆಗ್ತಿದೆ.‌ ಸಾರಿಗೇತರ ವಾಹನ ಸಾರಿಗೆ ವಾಹನವಾಗಿ ಉಪಯೋಗಿಸಿ ನಿಯಮ ಉಲ್ಲಂಘನೆ ಮಾಡ್ತಿದ್ದಾರೆ ಅಂತ ಕಾರಣ ನೀಡಿ ಸರ್ಕಾರ  ಇ ಬೈಕ್ ಟ್ಯಾಕ್ಸಿ ನಿಷೇಧ ಮಾಡಿದೆ. 


ಇದನ್ನೂ ಓದಿ- Bengaluru Water Crisis: ಅನ್ಯ ಉದ್ದೇಶಕ್ಕೆ ಕುಡಿಯುವ ನೀರಿನ ಬಳಕೆ ನಿಷೇಧ:ನಿಯಮ ಉಲ್ಲಂಘಿಸಿದರೆ ಬೀಳುವುದು ಭಾರೀ ದಂಡ


ರಾಜ್ಯ ಸರ್ಕಾರ ಈ ಹಿಂದೆ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ರದ್ದು ಮಾಡಿ ಆದೇಶ ಹೊರಡಿಸಿತ್ತು. ಆದರೆ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ಸ್ ಹೈಕೋರ್ಟ್ ಮೆಟ್ಟಿಲೇರಿ ಆದೇಶಕ್ಕೆ ತಡೆತಂದಿದ್ದರು. ಆ ಪ್ರಕರಣ ಇನ್ನೂ ಕೋರ್ಟ್ ನಲ್ಲಿ ಇದೆ.‌ ಈಗ ಇವಿ ಬೈಕ್ ಟ್ಯಾಕ್ಸಿ ಸರ್ಕಾರ ನಿಷೇಧ ಮಾಡಿದೆ ಆದೇಶಿಸಿದೆ.‌ ಈಗ ಇವಿ ಬೈಕ್ ಟ್ಯಾಕ್ಸಿ ಸೇವೆ ನೀಡ್ತಿರುವ ಆ್ಯಪ್ ಆಧಾರಿತ ಅಗ್ರಿಗೇಟರ್ಸ್ ಮತ್ತೆ ಕೋರ್ಟ್ ಮೊರೆ‌ ಹೋಗ್ತಾರ ಅಥಾವ ಸರ್ಕಾರದ ಆದೇಶ ಒಪ್ಪಿಕೊಳ್ತಾರಾ ಎಂಬುದನ್ನೂ ಕಾದುನೋಡಬೇಕಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.