11 ವರ್ಷಗಳ ಬಳಿಕ ಹಕ್ಕಿ ಗಣತಿ- ಬಿಳಿಗಿರಿ ಬನದಲ್ಲಿ 274 ಪ್ರಬೇಧದ ಪಕ್ಷಿ ಪತ್ತೆ
ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 11 ವರ್ಷಗಳ ಬಳಿಕ ನಡೆದ ಪಕ್ಷಿ ಗಣತಿಯಲ್ಲಿ ಒಟ್ಟು 274 ಪ್ರಬೇಧ ಪಕ್ಷಿಗಳನ್ನು ಗುರುತು ಮಾಡಿದ್ದು ಇವುಗಳಲ್ಲಿ ಹೊಸದಾಗಿ ಎರಡು ಜಾತಿ ಹಕ್ಕಿಗಳು ಕಾಣಸಿಕ್ಕಿವೆ. ಬಹಳ ವರ್ಷಗಳ ಬಳಿಕ ಗ್ರೇಟ್ ಹಾರ್ನ್ ಬಿಲ್ ಕೂಡ ಅರಣ್ಯದಲ್ಲಿ ಕಾಣಿಸಿಕೊಂಡಿದೆ.
ಚಾಮರಾಜನಗರ: ರಾಜ್ಯದ ಪ್ರಮುಖ ಹಾಗೂ ಪೂರ್ವ- ಪಶ್ಚಿಮ ಘಟ್ಟಗಳ ಸಂಗಮ ಸೇತುವಾಗಿರುವ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ 274 ಪ್ರಬೇಧದ ಪಕ್ಷಿಗಳನ್ನು ಗುರುತು ಮಾಡಲಾಗಿದೆ.
ಹೌದು..., ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 11 ವರ್ಷಗಳ ಬಳಿಕ ನಡೆದ ಪಕ್ಷಿ ಗಣತಿಯಲ್ಲಿ ಒಟ್ಟು 274 ಪ್ರಬೇಧ ಪಕ್ಷಿಗಳನ್ನು ಗುರುತು ಮಾಡಿದ್ದು ಇವುಗಳಲ್ಲಿ ಹೊಸದಾಗಿ ಎರಡು ಜಾತಿ ಹಕ್ಕಿಗಳು ಕಾಣಸಿಕ್ಕಿವೆ. ಬಹಳ ವರ್ಷಗಳ ಬಳಿಕ ಗ್ರೇಟ್ ಹಾರ್ನ್ ಬಿಲ್ ಕೂಡ ಅರಣ್ಯದಲ್ಲಿ ಕಾಣಿಸಿಕೊಂಡಿದೆ.
1939 ರಲ್ಲಿ ಪಕ್ಷಿ ಪ್ರೇಮಿ ಸಲೀಂ ಅಲಿ ಬಿಆರ್ ಟಿ ಅರಣ್ಯಕ್ಕೆ ಆಗಮಿಸಿ ಸಮೀಕ್ಷೆ ನಡೆಸಿ 139 ಪಕ್ಷಿಗಳನ್ನು ಗುರುತು ಮಾಡಿದ್ದರು. 2012 ರಲ್ಲಿ ನಡೆದ ಪಕ್ಷಿ ಸಮೀಕ್ಷೆಯಲ್ಲಿ 272 ಪಕ್ಷಿಗಳು ಕಂಡುಬಂದಿದ್ದವು. ಅದಾದ ನಂತರ ಈಗ ನಾಲ್ಕು ದಿನಗಳ ಕಾಲ ನಡೆದ ಹಕ್ಕಿ ಗಣತಿಯಲ್ಲಿ 274 ಪಕ್ಷಿಗಳನ್ನು ಗುರುತು ಮಾಡಲಾಗಿದೆ.
ಇದನ್ನೂ ಓದಿ- Viral Video: ಮತ್ತೆ ಕಾಡಿನಿಂದ ನಾಡಿನತ್ತ ಗಜಪಡೆ ಪಯಾಣ, ಆತಂಕದಲ್ಲಿ ಗ್ರಾಮಸ್ಥರು
ಪಕ್ಷಿ ಗಣತಿ ಕಾರ್ಯವನ್ನು ಹೇಗೆ ನಡೆಸಲಾಗುತ್ತದೆ?
ಬಿಆರ್ಟಿ ಅಧಿಕಾರಿಗಳು ಇಕೋ ವಾಲೆಂಟಿಯಯರ್ಸ್ ಗ್ರೂಪ್ ಆಫ್ ಇಂಡಿಯಾದ ಸಹಕಾರದೊಟ್ಟಿಗೆ ಈ ಬಾರಿ ಪಕ್ಷಿ ಗಣತಿ ನಡೆಸಿದ್ದಾರೆ. ಈ ಪಕ್ಷಿ ಗಣತಿ ಕಾರ್ಯದಲ್ಲಿ 50 ಸ್ವಯಂ ಸೇವಕರನ್ನು 25 ತಂಡಗಳಾಗಿ ಪರಿವರ್ತಿಸಿ 4 ದಿನಗಳ ಕಾಲ ಬೈನಾಕುಲರ್ ಮತ್ತು ಕ್ಯಾಮರಾದ ಸಹಾಯದಿಂದ ಪಕ್ಷಿಗಳನ್ನು ಕಂಡು ಚಿತ್ರ ಸೆರೆಹಿಡಿದು ವೈಜ್ಞಾನಿಕವಾಗಿ ಗಣತಿ ಕಾರ್ಯ ನಡೆಸಿದ್ದಾರೆ. ಈ ಗಣತಿ ಕಾರ್ಯದಲ್ಲಿ ಪಕ್ಷಿ ಕಾಣಿಸಿಕೊಂಡ ಸ್ಥಳ, ಪರಿಸರವನ್ನು ಕೂಡ ದಾಖಲು ಮಾಡಲಾಗಿದೆ. ಮೊದಲಿಗೆ ಅರಣ್ಯ ಇಲಾಖೆಯ ಗೇಮ್ ರಸ್ತೆ ಹಾಗೂ ಮುಖ್ಯರಸ್ತೆಗಳಲ್ಲಿ ಸಮೀಕ್ಷೆ ಮಾಡಲಾಗಿತ್ತು. ನಂತರ, ನೀರು ಇರುವ ಕಡೆಗಳಲ್ಲಿ, ಕಾಡಿನೊಳಗೆ ಸಮೀಕ್ಷಾ ಕಾರ್ಯ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಹೊಸ ಪಕ್ಷಿಗಳು:
ಇನ್ನು ಈ ಬಾರಿಯ ಪಕ್ಷಿ ಗಣತಿಯಲ್ಲಿ ದಾಂಡೇಲಿ ಅರಣ್ಯ ಭಾಗದಲ್ಲಿ ಹೆಚ್ಚಾಗಿ ಕಾಣಸಿಗುವ ದಿ ಗ್ರೇಟ್ ಹಾರ್ನ್ ಬಿಲ್ ಬಹಳ ವರ್ಷಗಳ ಬಳಿಕ ಬಿಳಿಗಿರಿ ಬನದಲ್ಲಿ ಕಂಡಿದೆ. ವಲಸೆ ಪಕ್ಷಿಗಳಾದ ನಾದರ್ನ್ ಶೆವೆಲರ್ { Northern Shoveler} ಹಾಗೂ ನಾದರ್ನ್ ಪಿನ್ಟೇಲ್ {Nothren Pintail} ಪಕ್ಷಿಗಳು ಇದೇ ಮೊದಲ ಬಾರಿ ಗಣತಿಯಲ್ಲಿ ಕಂಡು ಬಂದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ- ಸಪೋಟ ಮರಕ್ಕೆ ಕಟ್ಟಿದ್ದ ತಂತಿಗೆ ಸಿಲುಕಿ ಗಾಯಗೊಂಡಿದ್ದ ಕರಡಿ ರಕ್ಷಣೆ
ಭಾನುವಾರ ನಡೆದ ಹಕ್ಕಿ ಗಣತಿ ಸಮಾರೋಪ ಸಮಾರಂಭದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್, ವನ್ಯಜೀವಿ ಮಂಡಲಿ ಸದಸ್ಯ ಮಲ್ಲೇಶಪ್ಪ ಪಾಲ್ಗೊಂಡು ಸ್ವಯಂ ಸೇವಕರಿಗೆ ಪ್ರಮಾಣ ಪತ್ರ ವಿತರಿಸಿ, ಬಿಳಿಗಿರಿ ಬನದ ವೈವಿಧ್ಯತೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.