ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾಗಿರುವ ಬೃಹತ್ ಡ್ರಗ್ಸ್ ಮಾಫಿಯಾ (Drugs Mafia)ಕ್ಕೆ ಆಡಳಿತಾರೂಢ ಬಿಜೆಪಿಯ ಕುಮ್ಮಕ್ಕು ಇದೆಯಾ ಎಂಬ ಅನುಮಾನ ಶುರುವಾಗಿದೆ. ಏಕೆಂದರೆ 


COMMERCIAL BREAK
SCROLL TO CONTINUE READING

ಕನ್ನಡ ಚಿತ್ರರಂಗದ 15 ಮಂದಿ ನಟ-ನಟಿಯರು ಭಾಗಿಯಾಗಿದ್ದಾರೆಂದು ಭಾರೀ ಸದ್ದು ಮಾಡುತ್ತಿರುವ ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಕಾರ್ತಿಕ್ ರಾಜ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಅವರು ಆಡಳಿತಾರೂಢ ಬಿಜೆಪಿ ಪಕ್ಷದ ಕಾರ್ಯಕರ್ತರಾಗಿದ್ದಾರೆ.


ಬೆಂಗಳೂರಿನ ಬೃಹತ್ ಡ್ರಗ್ಸ್ ಮಾಫಿಯಾ (Benglore Drugs Mafia)ಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಬಿ ಪೊಲೀಸರು ಚಿತ್ರನಟಿ ರಾಗಿಣಿ ದ್ವಿವೇದಿ (Ragini Dwivedi) ಗೆಳೆಯ ರವಿಶಂಕರ್ ವಿಚಾರಣೆ ನಡೆಸುತ್ತಿದ್ದಾರೆ. ರಾಗಿಣಿಗೂ ಇಂದು (ಸೆಪ್ಟೆಂಬರ್ 4) ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದಾರೆ. ಜೊತೆಗೆ ಕಾರ್ತಿಕ್ ರಾಜ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.


ಕಾರ್ತಿಕ್ ರಾಜ್ ಅವರಿಗೂ 'ಶಿಸ್ತಿನ ಪಕ್ಷ, ಸಂಸ್ಕೃತಿ ಪ್ರತಿಪಾದಕರು' ಎಂದು ಪೋಸು ನೀಡುವ ಬಿಜೆಪಿಗೂ ಸಂಬಂಧ ಇರುವುದು ತಿಳಿದುಬಂದಿದೆ. ಈ ಮೂಲಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೂ ಡ್ರಗ್ಸ್ ಕಿಂಗ್ ಪಿನ್ ಅಥವಾ ಡ್ರಗ್ಸ್ ಪೆಡಲರ್ ಗಳಿಗೂ ಗಾಢವಾದ ಸಂಬಂಧ ಇರಬಹುದು ಎಂಬ ಶಂಕೆ ಶುರುವಾಗಿದೆ.


ಡ್ರಗ್ಸ್ ಧಂಧೆಯಿಂದ ಸಮ್ಮಿಶ್ರ ಸರ್ಕಾರ ಕೆಡವಿದ ವಿಚಾರ: ಮಾಜಿ ಸಿಎಂ ಎಚ್‌ಡಿಕೆಗೆ ಸಚಿವ ಸುಧಾಕರ್ ಸವಾಲು


ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವ ಕಾರ್ತಿಕ್ ರಾಜ್ ಎಂಬ ವ್ಯಕ್ತಿಯ ಹೆಸರು ಬಿಜೆಪಿ ಅಧಿಕೃತ ಲೆಟರ್ ಹೆಡ್ ನಲ್ಲಿ ಮುದ್ರಿತವಾಗಿದೆ‌. ಬಿಜೆಪಿಯ ಅಧಿಕೃತ ಲೆಟರ್ ಹೆಡ್ ನಿಂದ ಕಾರ್ತಿಕ್ ರಾಜ್ ಗೆ ಪತ್ರ ಬರೆಯಲಾಗಿದೆ. ಇವರು ಬಿಜೆಪಿಯ ಗಾಲಿ ಜನಾರ್ಧನ ರೆಡ್ಡಿ, ನಟ ಸಾಯಿಕುಮಾರ್ ಮತ್ತಿತರರ ಜೊತೆ ಗುರುತಿಸಿಕೊಂಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಾಜಿನಗರದಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದಾರೆ. ಶಿವಾಜಿನಗರದಲ್ಲಿ ಚುನಾವಣೆ ಕೆಲಸ ಮಾಡುವಂತೆ ಬಿಜೆಪಿಯ ಯುವಮೋರ್ಚಾ ಕಾರ್ತಿಕ್ ರಾಜ್ ಗೆ ಪತ್ರ ಬರೆದಿದೆ.


ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumarswamy) ಮೊನ್ನೆ  'ಡ್ರಗ್ಸ್ ಧಂಧೆಯ ಹಣದಿಂದಲೇ ಬಿಜೆಪಿ ನಾಯಕರು ರಾಜ್ಯದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಕೆಡವಿದರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಡ್ರಗ್ಸ್ ಧಂಧೆಯ ಹಣವೇ ಕಾರಣ' ಎಂಬರ್ಥದಲ್ಲಿ ಮಾತನ್ನಾಡಿದ್ದರು. ಈಗ ಸಿಸಿಬಿ ಪೊಲೀಸರು ಬಿಜೆಪಿ ಕಾರ್ಯಕರ್ತ ಕಾರ್ತಿಕ್ ರಾಜ್ ಅವರನ್ನು ವಶಕ್ಕೆ ಪಡೆದಿರುವುದು ಕುಮಾರಸ್ವಾಮಿ ಅವರ ಮಾತಿಗೆ ಪುರಾವೆ ಒದಗಿಸಿದಂತಾಗಿದೆ.