ಗೋಕಾಕ್: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಎದ್ದು, ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾಗಿರುವ ರಮೇಶ್ ಜಾರಿಕಿಹೊಳಿ(Ramesh Jarakiholi) ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.


COMMERCIAL BREAK
SCROLL TO CONTINUE READING

ರಮೇಶ್ ಜಾರಕಿಹೊಳಿ ಡಿಎನ್ಎ ಅಲ್ಲಿಯೇ ಕಾಂಗ್ರೆಸ್ ಇದೆ: ದಿನೇಶ್ ಗುಂಡೂರಾವ್


ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಕೈಗೊಂಡಿರುವ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಕಾಂಗ್ರೆಸ್‌ಗೆ ಮತ ನೀಡುವಂತೆ ಕೇಳಿ ಯಡವಟ್ಟು ಮಾಡಿಕೊಂಡಿದ್ದಾರೆ. ಹೀಗೆ ಎಲ್ಲರೆದುರು ಅಪಹಾಸ್ಯಕ್ಕೆ ಗುರಿಯಾದ ರಮೇಶ್ ಜಾರಕಿಹೊಳಿ, ಬಳಿಕ ತಾವೂ ನಕ್ಕು, ಕಾಂಗ್ರೆಸ್‌ನಲ್ಲೇ ಇದ್ದದ್ದರಿಂದ ಮಾನಸಿಕವಾಗಿ ಹೀಗೆ ಹೇಳಿದ್ದೇನೆ. ತಾವೆಲ್ಲರೂ ಬಿಜೆಪಿಗೆ ಮತ ಹಾಕಿ ಎಂದು ಹೇಳುವ ಮೂಲಕ ತಮ್ಮ ತಪ್ಪನ್ನು ಸರಿಪಡಿಸಿಕೊಂಡರು.


ರಮೇಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಪಟ್ಟವೇ ಬೇಕಂತೆ!


ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿಯನ್ನು ಉಪಚುನಾವಣೆಯಲ್ಲಿ ಹಣೆಯಲು ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಪಣತೊಟ್ಟಿವೆ. ಈ ಉಪ ಕದನದಲ್ಲಿ ರಮೇಶ್ ಜಾರಕಿಹೊಳಿಯನ್ನು ಸೋಲಿಸಲು ಉಭಯ ಪಕ್ಷಗಳು ಕಾರ್ಯತಂತ್ರ ರೂಪಿಸುತ್ತಿವೆ. 


ಇವೆಲ್ಲದರ ಮಧ್ಯೆ, ಸಹೋದರನ ಮೇಲೆ ಕಿಡಿಕಾರಿರುವ ಸತೀಶ್ ಜಾರಕಿಹೊಳಿ, ಮೈತ್ರಿ ಸರ್ಕಾರದಲ್ಲಿ ರಮೇಶ್ ಜಾರಕಿಹೊಳಿ ಮಂತ್ರಿಯಾಗಿದ್ದು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕೃಪಾಕಟಾಕ್ಷದಿಂದ, ಆಕೆಯ ಕಾಲಿಗೆ ಬಿದ್ದು, ಅತ್ತು ಕರೆದು ಈತ ಮಂತ್ರಿಯಾಗಿದ್ದ ಎಂದು ಲೇವಡಿ ಮಾಡಿದ್ದರು.