`ಸುಳ್ಳು ಹೇಳದೇ ಬಿಜೆಪಿಯವರು ಬದುಕಲು ಸಾಧ್ಯವಿಲ್ಲ`
ನೀವು ಬಿಜೆಪಿ ಸುಳ್ಳಿಗೆ ಬಲಿಯಾಗಬೇಡಿ. ಬಿಜೆಪಿಗೆ ಸುಳ್ಳೇ ಮನೆ ದೇವರು. ಸುಳ್ಳು ಹೇಳದೇ ಬಿಜೆಪಿಯವರು ಬದುಕಲು ಸಾಧ್ಯವಿಲ್ಲ. ಅವರು ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ನುಡಿದಂತೆ ನಡೆಯಲಿಲ್ಲ. ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು. ಆದರೆ ಅದು ಸಾಧ್ಯವಾಗಿಲ್ಲ ಎಂದು ಡಿಕೆ ಶಿವಕುಮಾರ್ ಕಿಡಿ ಕಾರಿದರು.
ಚಿತ್ರದುರ್ಗ: ನೀವು ಬಿಜೆಪಿ ಸುಳ್ಳಿಗೆ ಬಲಿಯಾಗಬೇಡಿ. ಬಿಜೆಪಿಗೆ ಸುಳ್ಳೇ ಮನೆ ದೇವರು. ಸುಳ್ಳು ಹೇಳದೇ ಬಿಜೆಪಿಯವರು ಬದುಕಲು ಸಾಧ್ಯವಿಲ್ಲ. ಅವರು ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ನುಡಿದಂತೆ ನಡೆಯಲಿಲ್ಲ. ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು. ಆದರೆ ಅದು ಸಾಧ್ಯವಾಗಿಲ್ಲ ಎಂದು ಡಿಕೆ ಶಿವಕುಮಾರ್ ಕಿಡಿ ಕಾರಿದರು.
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಸಮಾಜದವರು ಅಧಿಕಾರಕ್ಕೆ ಬಂದಂತೆ. ಈ ಐಕ್ಯತಾ ಸಮಾವೇಶ ಇಡೀ ದೇಶಕ್ಕೆ ಸಂದೇಶ ರವಾನಿಸುತ್ತಿದೆ
ರಾಹುಲ್ ಗಾಂಧಿ ಅವರು ಈ ನೆಲದಲ್ಲಿ ಭಾರತ ಜೋಡೋ ಯಾತ್ರೆ ಮಾಡಿದರು. ಆಗ ನೀವು ತೋರಿದ ಪ್ರೀತಿ, ವಿಶ್ವಾಸ ದೇಶಾದ್ಯಂತ ಶಕ್ತಿ ತುಂಬಿದೆ. ಈ ಐಕ್ಯತಾ ಸಮಾವೇಶ ಭಾರತ ಜೋಡೋ ಯಾತ್ರೆ ಜತೆಯಲ್ಲಿ ಹೆಜ್ಜೆ ಹಾಕುತ್ತಿದೆ.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ದಲಿತ ಶಕ್ತಿ ಕಾಂಗ್ರೆಸ್ ಶಕ್ತಿಯಾಗಿದೆ. ದಲಿತರೆಲ್ಲರೂ ಈ ಬೃಹತ್ ಆಂದೋಲನದಲ್ಲಿ ದೊಡ್ಡ ಶಕ್ತಿಯಾಗಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಕಾಂಗ್ರೆಸ್ ಪಾಲಿಸಿಕೊಂಡು, ರಕ್ಷಿಸಿಕೊಂಡು ಬಂದಿದೆ. ಸಂವಿಧಾನ ಈ ದೇಶದ ಆಸ್ತಿ.
ಇಂದು ಖರ್ಗೆ ಸಾಹೇಬರ ಮುಖಂಡತ್ವದಲ್ಲಿ ಕಾಂಗ್ರೆಸ್ ಮುಂದೆ ಸಾಗುತ್ತಿದೆ. ಖರ್ಗೆ ಅವರು ಅಲಂಕರಿಸಿರುವ ಸ್ಥಾನ ಸಾಮಾನ್ಯದ್ದಲ್ಲ. ಈ ದೇಶದ ಇತಿಹಾಸದಲ್ಲಿ ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಇಂದಿರಾ ಗಾಂಧಿ, ಬಾಬು ಜಗಜೀವನ್ ರಾಮ್, ಸೋನಿಯಾ ಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ಅವರು ಅಲಂಕರಿಸಿದ ಸ್ಥಾನವನ್ನು ಖರ್ಗೆ ಅವರು ಅಲಂಕರಿಸಿದ್ದಾರೆ. 50 ವರ್ಷಗಳ ಕಾಲ ಶಾಸಕರಾಗಿ, ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸಿ, ಕಾಂಗ್ರೆಸ್ ಪಕ್ಷಕ್ಕೆ ಪ್ರಾಮಾಣಿಕರಾಗಿ, ದೇಶದ ಐಕ್ಯತೆ, ಸಮಗ್ರತೆಯಲ್ಲಿ ಹೆಜ್ಜೆ ಹಾಕಿದ ಖರ್ಗೆ ಅವರನ್ನು ದೇಶದುದ್ದಗಲಕ್ಕೂ ಆಶೀರ್ವಾದ ಮಾಡಿ ಈ ಸ್ಥಾನಕ್ಕೆ ಆರಿಸಲಾಗಿದೆ. ಅವರ ಮುಖಂಡತ್ವದಲ್ಲಿ ಕಾಂಗ್ರೆಸ್ ಸಾಗುತ್ತಿದೆ.
ಇದನ್ನೂ ಓದಿ : Ind Vs SL : ಇಶಾನ್ ಕಿಶನ್ ಮೇಲೆ ಮುನಿಸಿಕೊಂಡ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ!
ಇಂದು ನಾವೆಲ್ಲ ಒಂದು ಪ್ರತಿಜ್ಞೆ ಮಾಡಬೇಕು. ಖರ್ಗೆ ಅವರ ಮುಖಂಡತ್ವದಲ್ಲಿ ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವಂತೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು.ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 136 ಸೀಟುಗಳನ್ನು ಗಳಿಸಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ನನಗಿದೆ. ಪ್ರತಿ ಹಳ್ಳಿ, ಬೂತ್ ಮಟ್ಟದಲ್ಲಿ ಪಕ್ಷ ಶಕ್ತಿಯಾಗಿ ಉಳಿದಿದೆ. ನಾವು ಸಂವಿಧಾನ ಉಳಿಸಿಕೊಂಡು ದೇಶದ ಒಗ್ಗಟ್ಟು ರಕ್ಷಿಸಬೇಕು.
ಬಿಜೆಪಿಯವರು ಭಾವನಾತ್ಮಕ ವಿಚಾರಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಜನರ ಬದುಕಿನ ಮೇಲೆ ದೇಶ ಕಟ್ಟಲು ಮುಂದಾಗಿದೆ.ಪರಮೇಶ್ವರ್ ಅವರು ಇಂದು ದಶ ಘೋಷಣೆ ಮಾಡಿದ್ದು, ಪಕ್ಷದ ಅಧ್ಯಕ್ಷನಾಗಿ ಈ ಘೋಷಣೆಗಳಿಗೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಹೇಳ ಬಯಸುತ್ತೇನೆ.
ನೀವು ಬಿಜೆಪಿ ಸುಳ್ಳಿಗೆ ಬಲಿಯಾಗಬೇಡಿ. ಬಿಜೆಪಿಗೆ ಸುಳ್ಳೇ ಮನೆ ದೇವರು. ಸುಳ್ಳು ಹೇಳದೇ ಬಿಜೆಪಿಯವರು ಬದುಕಲು ಸಾಧ್ಯವಿಲ್ಲ. ಅವರು ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ನುಡಿದಂತೆ ನಡೆಯಲಿಲ್ಲ. ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು. ಆದರೆ ಅದು ಸಾಧ್ಯವಾಗಿಲ್ಲ.
ಈಗ ಮೀಸಲಾತಿ ವಿಚಾರದಲ್ಲಿ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ. ಸ್ವಾಮೀಜಿಯೊಬ್ಬರು ಸರ್ಕಾರದ ಮೀಸಲಾತಿ ನಿರ್ಧಾರದ ಬಗ್ಗೆ ಒಂದು ಮಾತು ಹಳಿದ್ದಾರೆ. ಬಿಜೆಪಿಯವರು ತಲೆ ಮೇಲೆ ತುಪ್ಪ ಹಾಕಿದ್ದು, ಅದರ ರುಚಿ, ಸುವಾಸನೆ ಸವಿಯಲು ಆಗುತ್ತಿಲ್ಲ ಎಂದಿದ್ದಾರೆ. ಈ ರೀತಿ ಬಿಜೆಪಿ ಸರ್ಕಾರ ಸುಳ್ಳಿನ ಸರಮಾಲೆ ಎಣೆದಿದೆ. ಇದು ಜನಾದೇಶದ ಸರ್ಕಾರವಲ್ಲ. ಆಪರೇಷನ್ ಕಮಲದ ಸರ್ಕಾರ.
ಕೊಟ್ಟಿರುವ ವಚನಕ್ಕೆ ನಾವು ಬದ್ಧರಾಗಿರುತ್ತೇವೆ. ನೀವು ನಮಗೆ ಆಶೀರ್ವಾದ ಮಾಡಬೇಕು. ಒಂದು ವರ್ಷದ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರ ಕೈಯಲ್ಲಿ ಮೇಕೆದಾಟು ಪಾದಯಾತ್ರೆ ಉದ್ಘಾಟನೆ ಮಾಡಿದ್ದೆವು. ನಂತರ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ, ನಂತರ ದೇಶದ 75ನೇ ಸ್ವಾತಂತ್ರ್ಯ ಮಹೋತ್ಸವ, ನಂತರ ಎಂ.ಬಿ. ಪಾಟೀಲ್ ಅವರ ನೇತೃತ್ವದಲ್ಲಿ ಕೃಷ್ಣಾ ನದಿ ನೀರಿನ ವಿಚಾರವಾಗಿ ಹೋರಾಟ ಮಾಡಿದ್ದೆವು. ಹೆಚ್.ಕೆ ಪಾಟೀಲ್ ಅವರ ನೇತೃತ್ವದಲ್ಲಿ ಮಹದಾಯಿ ನೀರು ವಿಚಾರವಾಗಿ ಹೋರಾಟ ಮಾಡಿದ್ದೆವು. ಇಂದು ಪರಮೇಶ್ವರ್ ಅವರ ನೇತೃತ್ವದಲ್ಲಿ ಐಕ್ಯತಾ ಸಮಾವೇಶ ಮಾಡುತ್ತಿದ್ದೇವೆ. ಈ ಸಭೆ ನೋಡಿದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನ ಬೇಡ.
ಇದೇ 16 ರಂದು ಹೆಣ್ಣುಮಕ್ಕಳಿಗೆ ಶಕ್ತಿ ತುಂಬಲು ಕಾರ್ಯಕ್ರಮ ಆಯೋಜಿಸಿದ್ದೇವೆ. ಪ್ರತಿ ಪಂಚಾಯ್ತಿಯಿಂದ ಮಹಿಳೆಯರು ಬಂದು ತಮ್ಮ ನೋವು, ಅಭಿಪ್ರಾಯವನ್ನು ತಿಳಿಸಬೇಕು. ಅದನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು.
ಇದನ್ನೂ ಓದಿ : ಮಂಗಳೂರಿಗೆ ಎಂ.ಎಸ್.ಧೋನಿ ಭೇಟಿ; ಕೂಲ್ ಕ್ಯಾಪ್ಟನ್ ನೋಡಲು ಮುಗಿಬಿದ್ದ ಫ್ಯಾನ್ಸ್!
ಪರಿಶಿಷ್ಟ ಜಾತಿ, ಪಂಗಡದವರು, ಎಲ್ಲ ಜಾತಿಯವರಿಗೂ ಸಮಬಾಳು, ಸಮಪಾಲು ಎಂಬ ತತ್ವದ ಮೇಲೆ ನಾವು ನಡೆಯುತ್ತಿದ್ದೇವೆ. ನೀವು ತೋರುತ್ತಿರುವ ಪ್ರೀತಿ ಅಭಿಮಾನ ನಮಗೆ ದೊಡ್ಡ ಶಕ್ತಿ ನೀಡಿದೆ.
ಭಾರತ ಜೋಡೋ ಯಾತ್ರೆ ಚಿತ್ರದುರ್ಗದಲ್ಲಿ ಸಾಗುವಾಗ ದಲಿತ ಮಹಿಳೆಯೊಬ್ಬರು ರಾಹುಲ್ ಗಾಂಧಿ ಅವರಿಗೆ ಸೌತೇಕಾಯಿ ಕೊಟ್ಟರು. ಈ ಸೌತೇಕಾಯಿಯನ್ನು ನಿಮ್ಮ ಅಜ್ಜಿ ಕೊಟ್ಟ ಜಮೀನಿನಲ್ಲಿ ಬೆಳೆದದ್ದು ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಬಡವರಿಗೆ ಭೂಮಿ, ನಿವೇಶನ, ಶಕ್ತಿ ನೀಡಿದೆ. ದಲಿತರ ಕಲ್ಯಾಣಕ್ಕೆ ಹತ್ತು ಹಲವು ಕಾರ್ಯಕ್ರಮಗಳನ್ನು ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ನೀಡಲಾಗಿದೆ. ಇದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು.
ಕನಕದಾಸರು, ವಾಲ್ಮೀಕಿ, ಸೇವಾಲಾಲ್ ಅವರು ನಮಗೆ ಮಾರ್ಗದರ್ಶನ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಮುಖಂಡತ್ವದಲ್ಲಿ ನಾವು ಸಾಗುತ್ತಿದ್ದು, ನೀವು ನಮಗೆ ಆಶೀರ್ವಾದ ಮಾಡಿ ಶಕ್ತಿ ತುಂಬಬೇಕು ಎಂದು ಮನವಿ ಮಾಡುತ್ತೇನೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.