ಇಂದಿನಿಂದ ಬಿಜೆಪಿಯಿಂದ ಜನಸುರಕ್ಷಾ ಯಾತ್ರೆ
ಮಾರ್ಚ್ 3ರಂದು ಕೊಡಗಿನ ಕುಶಾಲನಗರದಿಂದ ಸಂಸದರಾದ ನಳೀನ್ ಕುಮಾರ್ ಕಟೀಲ್ ಮತ್ತು ಪ್ರತಾಪ್ ಸಿಂಹ ನೇತೃತ್ವದಲ್ಲಿ ಹಾಗೂ ಮತ್ತೊಂದೆಡೆ ಉತ್ತರ ಕನ್ನಡದ ಅಂಕೋಲಾದಿಂದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಆರಂಭ.
ಕುಶಾಲನಗರ/ಅಂಕೋಲಾ: ನಾಡ ಜನರ ರಕ್ಷಣೆಗಾಗಿ ರಾಜ್ಯ ಬಿಜೆಪಿ ಇಂದಿನಿಂದ ಕೈಗೊಂಡಿರುವ ಜನಸುರಕ್ಷಾ ಯಾತ್ರೆಯು ಮಾರ್ಚ್ 3 ರಿಂದ 6 ರವರೆಗೆ ನಡೆಯಲಿದೆ. ಮಾರ್ಚ್ 6 ರಂದು ಮಂಗಳೂರಿನಲ್ಲಿ ನಡೆವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಖ್ಯಭಾಶಣ ಮಾಡಲಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾರ್ಚ್ 3ರಂದು ಕೊಡಗಿನ ಕುಶಾಲನಗರದಿಂದ ಸಂಸದರಾದ ನಳೀನ್ ಕುಮಾರ್ ಕಟೀಲ್ ಮತ್ತು ಪ್ರತಾಪ್ ಸಿಂಹ ನೇತೃತ್ವದಲ್ಲಿ ಹಾಗೂ ಮತ್ತೊಂದೆಡೆ ಉತ್ತರ ಕನ್ನಡದ ಅಂಕೋಲಾದಿಂದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಆರಂಭವಾಗಿರುವ ಈ ಮಂಗಳೂರು ಚಲೋ ಜನಸುರಕ್ಷಾ ಯಾತ್ರೆ ಮಾರ್ಚ್ 6 ರಂದು ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಮಂಗಳೂರಿನ ಜ್ಯೋತಿ ವೃತ್ತದಲ್ಲಿ ಸಮಾಗಮಗೊಂಡು ಕೇಂದ್ರ ಮೈದಾನದೆಡೆಗೆ ಬೃಹತ್ ಪಾದಯಾತ್ರೆ ನಡೆಯಲಿದೆ. ನಂತರ ಕೇಂದ್ರ ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆ ವಹಿಸಲಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಮುಖ ಭಾಷಣ ಮಾಡಲಿದ್ದಾರೆ.
ಈ ಯಾತ್ರೆಯಲ್ಲಿ ಕೇಂದ್ರದ ಹಲವಾರು ಬಿಜೆಪಿ ನಾಯಕರು ಮತ್ತು ರಾಜ್ಯದ ಹಲವಾರು ನಾಯಕರು ಪಾಲ್ಗೊಳ್ಳಲಿದ್ದಾರೆ.