ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರಸ್ ಪಕ್ಷಗಳಿಗೆ ಬರೀ ದೇಶದ ಹಣ ಲೂಟಿ ಹೊಡೆಯುವ ಚಿಂತೆ ಎಂದು ಮಾಜಿ ಸಿಎಂ ಎಚ್‍.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ವಿದೇಶ ಪ್ರವಾಸದಿಂದ ವಾಪಸ್ ಆಗಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ-ಕಾಂಗ್ರೆಸ್ ಕಮಿಷನ್ ಆರೋಪ ವಿಚಾರವಾಗಿ ಕಿಡಿಕಾರಿದರು.


COMMERCIAL BREAK
SCROLL TO CONTINUE READING

ಕರ್ನಾಟಕದಲ್ಲಿ 40% ಕಮಿಷನ್ ಆರೋಪ ಮಾಡಿದ್ದಾಯ್ತು, ಮಧ್ಯಪ್ರದೇಶದಲ್ಲೂ 50% ಕಮಿಷನ್ ಆರೋಪ ಮಾಡಿದ್ದಯ್ತು. ಕಮಿಷನ್ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ಪರಸ್ಪರ ಆರೋಪ ಮಾಡುತ್ತಿವೆ. ಈ ರಾಷ್ಟ್ರೀಯ ಪಕ್ಷಗಳಿಗೆ ದೇಶದ ಜನರ ಸಮಸ್ಯೆಗೆ ಪರಿಹಾರ ಬೇಕಿಲ್ಲ. 2 ರಾಷ್ಟ್ರೀಯ ಪಕ್ಷಗಳಿಗೆ ದೇಶದ ಹಣ ಲೂಟಿ ಹೊಡೆಯುವ ಚಿಂತೆ’ ಎಂದು ಟೀಕಿಸಿದ್ದಾರೆ.


‘ಕಾಂಗ್ರೆಸ್ ಸರ್ಕಾರದ ಸಚಿವರ ವಿರುದ್ಧ ಇದೇ ವೇಳೆ ಗರಂ ಆದ ಕುಮಾರಸ್ವಾಮಿ, ‘ರಾಜ್ಯದ ಕೆಲವು ಸಚಿವರು ನೀವು ವಿದೇಶದಲ್ಲಿ ಇದ್ಬಿಡಿ, ಎಲ್ಲಾ ವ್ಯವಸ್ಥೆ ಮಾಡಿ ಕೊಡ್ತೀವಿ ಅಂದಿದ್ರಲ್ಲ‌. ಇಲ್ಲಿ ಲೂಟಿ ಹೊಡೆಯೋಕೆ ನಮ್ಮನ್ನು ಬಿಟ್ಟುಬಿಡಿ, ನೀವು ವಿದೇಶದಲ್ಲಿರಿ ಅಂತಾ ಸಲಹೆ ಕೊಟ್ಟಿದ್ರಲ್ಲಾ. ಅದನ್ನು ಪಾಲಿಸಬೇಕಲ್ಲ, ಯಾಕೆಂದರೆ ಮಾನ ಮಾರ್ಯಾದೆ ಇಲ್ಲದೆ ಇಲ್ಲಿ ದರೋಡೆ ಮಾಡಿಕೊಂಡು ಕೂತವ್ರಲ್ಲಾ. ಅವರಿಂದ ವ್ಯವಸ್ಥೆ ಮಾಡಿಕೊಂಡು ಹೋಗಬೇಕಾ ನಾನು..!? ಆ ಪಾಪದ ಹಣ ತಗೊಂಡು ಹೋಗಬೇಕಾ..!?’ ಎಂದು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: Be Careful: ಒಂದೇ ದಿನ ರಾಜ್ಯದಲ್ಲಿ 37 ಜನರು ಆ್ಯಕ್ಸಿಡೆಂಟ್‍ನಿಂದ ಸಾವು..!


ಬಡತನದಲ್ಲಿರುವ ಹಲವು ದೇಶಗಳು ದೊಡ್ಡಮಟ್ಟದಲ್ಲಿ ಬೆಳೆಯುತ್ತಿವೆ. ಅದಕ್ಕೆ ಹಿರಿಯರು ‘ದೇಶ ಸುತ್ತು ಕೋಶ ಓದು’ ಅಂತಾ ಹೇಳಿರುವುದು. ಕಳೆದ 12 ವರ್ಷದಿಂದ ಪಕ್ಷದ ಸಂಘಟನೆಗೆ ಸಮಯ ಇಟ್ಟಿದ್ದೆ. ಯಾವ ದೇಶದಲ್ಲಿ ಏನೇನಿದೆ ಅಂತಾ ತಿಳ್ಕೊಬೇಕಲ್ಲಾ, ಅಲ್ಲಿ ಯಾವ ರೀತಿ ವ್ಯವಸ್ಥೆ ಇದೆ, ನಮ್ಮಲ್ಲಿ ಯಾವ ರೀತಿ ಇದೆ ನೋಡಬೇಕಲ್ಲಾ? ಹೀಗಾಗಿ ಕಾಂಬೋಡಿಯಾಗೆ ಸ್ನೇಹಿತರ ಆಹ್ವಾನ ಇತ್ತು, ಹೋಗಿದ್ದೆ. ಇನ್ನೂ ಹಲವು ದೇಶಗಳಿಗೆ ಹೋಗಬೇಕಿತ್ತು, ಆದರೆ ಆಗಲಿಲ್ಲ’ವೆಂದು ಎಚ್‍ಡಿಕೆ ಹೇಳಿದ್ದಾರೆ.


ಕಾಂಬೋಡಿಯಾದಲ್ಲಿ 18-20 ಎಕರೆಯಲ್ಲಿ ಕಟ್ಟಿರುವ ಅದ್ಭುತವಾದ ದೇವಸ್ಥಾನ ಇದೆ. ನಮ್ಮ ದೇಶದಲ್ಲೂ ಇಲ್ಲ, ಅಂತಹ ಬ್ರಹ್ಮ, ವಿಷ್ಣು, ಮಹೇಶ್ವರ ದೇವಸ್ಥಾನವಿದೆ. ಇತ್ತೀಚಿಗೆ ಆ ದೇಶ ಆರ್ಥಿಕವಾಗಿ ಬೆಳೆಯುತ್ತಿದೆ. ಒಂದು ಕಾಲದಲ್ಲಿ ಹಲವಾರು ಸಮಸ್ಯೆ ಇತ್ತು, ಈಗ ತುಂಬಾ ಅದ್ಭುತವಾಗಿ ಆ ದೇಶ ಬೆಳೀತಾ ಇದೆ. ಕಾಂಬೋಡಿಯಾದಲ್ಲಿ ಜಿಡಿಪಿ 7.7 ಇದೆ ಎಂದು ಮೊನ್ನೆ ಮಂತ್ರಿಯೊಬ್ಬರು ಹೇಳ್ತಾ ಇದ್ರು. ನಮ್ಮಲ್ಲಿ ಹಣದ ಕೊರತೆ ಇಲ್ಲ, ಆದರೆ ಈಗ ಲೂಟಿ ಮಾಡ್ತಾವ್ರಲ್ಲ. ಇವರು ನಮ್ಮ ರಾಜ್ಯ-ದೇಶವನ್ನು ಎಲ್ಲಿಗೆ ತಗೊಂಡು ಹೋಗ್ತಿದ್ದಾರೆ?’ ಎಂದು ಬೇಸರ ವ್ಯಕ್ತಪಡಿಸಿದರು.


ನಕಲಿ ಪತ್ರದ ವಿಚಾರವಾಗಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಎಚ್‍ಡಿಕೆ, ‘ಮೊದಲು ಪ್ರಾಮಾಣಿಕರಾಗಿ ನಡೆದುಕೊಳ್ಳಲು ಕಲಿತುಕೊಳ್ಳಿ. ಮಂತ್ರಿಗಿರಿ ಸಿಕ್ಕಿದೆ ಅಂತಾ ಹಗಲು ದರೋಡೆ ಮಾಡೋದಲ್ಲ. ಒಳ್ಳೆಯ ಕೆಲಸ ಮಾಡಿ ಎಂದು ನಾನು ಚೆಲುವರಾಯಸ್ವಾಮಿಗೆ ಹೇಳ್ತೀನಿ’ ಅಂತಾ ಸಲಹೆ ನಿಡಿದರು.  


ಇದನ್ನೂ ಓದಿ: Tumakuru: ಸಿದ್ದಗಂಗಾ ಮಠದ ಗೋಕಟ್ಟೆಯಲ್ಲಿ ಮತ್ತೊಂದು ಮೃತದೇಹ ಪತ್ತೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.