ಬೆಂಗಳೂರು: ಪಕ್ಷ ಕಟ್ಟಿ ಬೆಳೆಸಿದವರನ್ನು ಮೂಲೆಗುಂಪು ಮಾಡಿದ್ದು ಬಿಜೆಪಿ ಸರ್ಕಾರ ಇಮೇಜ್ ಕುಸಿಯಲು ಕಾರಣ ಎಂದು ಕಾಂಗ್ರೆಸ್ ವಕ್ತಾರ ವಿ.ಎಸ್.ಉಗ್ರಪ್ಪ ಹೇಳಿದರು.ಅವರು ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.


COMMERCIAL BREAK
SCROLL TO CONTINUE READING

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಚುನಾವಣೆ ಸಮಯದಲ್ಲಿ ಜನರಿಗೆ ಕೊಟ್ಟ ಗ್ಯಾರಂಟಿಗಳ ಪೈಕಿ ಯೋಜನೆಯನ್ನು ಜಾರಿ ಮಾಡಿದೆ. ನಿನ್ನೆ 5.70 ಲಕ್ಷ ಮಹಿಳೆಯರು ಈ ಯೋಜನೆ ಲಾಭ ಪಡೆದಿದ್ದು ಸಂಭ್ರಮಾಚರಣೆ ಮಾಡಿದ್ದಾರೆ.ಕಾಂಗ್ರೆಸ್ ಪಕ್ಷ ಈ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ನಿಗದಿತ ಸಮಯದಲ್ಲಿ ಯೋಜನೆ ಜಾರಿ ಮಾಡಿ, ಕೊಟ್ಟವಚನ ಪಾಲಿಸುವ ಪಕ್ಷ ಕಾಂಗ್ರೆಸ್ ಮಾತ್ರ ಎಂಬುದನ್ನು ಸಾಬೀತುಪಡಿಸಿದೆ.ಬಿಜೆಪಿಯವರು ಮಾತು ಎತ್ತಿದರೆ ಡಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತಿದ್ದರು. ರಾಜ್ಯದ ಜನ ಆ ಡಬಲ್ ಇಂಜಿನ್ ನಲ್ಲಿ ಒಂದು ಇಂಚಿನನ್ನು ಷೆಡ್ ಗೆ ಕಳುಹಿಸಿದ್ದಾರೆ. ಮತ್ತೊಂದು ಇಂಜಿನ್ ಮಾತ್ರ ದೆಹಲಿಯಲ್ಲಿದೆ ಎಂದು ಹೇಳಿದರು.


2024ರ ಚುನಾವಣೆಯಲ್ಲಿ ದೆಹಲಿಯ ಇಂಜಿನನ್ನು ಕೂಡ ಶೆಡ್ ಗೆ ಕಳುಹಿಸುವುದು ಸ್ಪಷ್ಟವಾಗುತ್ತಿದೆ. ಕಾರಣ ಬಿಜೆಪಿ ಕೊಟ್ಟಿರುವ ಯಾವುದೇ ಆಶ್ವಾಸನೆಗಳನ್ನು ಈಡೇರಿಸಿಲ್ಲ.ಬಡತನ ನಿರ್ಮೂಲನೆ, ವರ್ಷಕ್ಕೆ ಎರಡು ಕೋಟಿ ಉದ್ಯೋಗ, ಕಪ್ಪು ಹಣ ವಾಪಸ್ ತಂದು ಬಡವರ ಖಾತೆಗೆ 15 ಲಕ್ಷ ಭರವಸೆ ಈಡೇರಿಸಲಿಲ್ಲ.ಈ ರಾಜ್ಯದ ಯಾರಾದರೂ ವಚನಭ್ರಷ್ಟರಿದ್ದರೆ ಅದು ಬಿಜೆಪಿ ಸರ್ಕಾರ ಮಾತ್ರ.ಹೀಗಾಗಿ ಬಿಜೆಪಿ ಹೊಸ ಹಾದಿ ಹಿಡಿದಿದೆ. ಮನೆ ಕೇಂದ್ರ ಸಚಿವ ಅಮಿತ್ ಶಾ ಅವರು ತಮಿಳುನಾಡಿಗೆ ಭೇಟಿ ನೀಡಿ, ಎರಡು ಬಾರಿ ತಮಿಳುನಾಡಿನವರು ದೇಶದ ಪ್ರಧಾನ ಮಂತ್ರಿಗಳಾಗಬೇಕಿತ್ತು. ಅದನ್ನು ತಪ್ಪಿಸಲಾಗಿತ್ತು. ಈ ಬಾರಿ ತಮಿಳುನಾಡಿನವರು ಪ್ರಧಾನಮಂತ್ರಿಯಾಗಬೇಕು. ಅದಕ್ಕಾಗಿ ಎಷ್ಟು ಸೀಟು ಗೆಲ್ಲಿಸಬೇಕು ಎಂದು ತಿಳಿಸಿದ್ದಾರೆ.ಇದು ನಿಜವೇ ಆಗಿದ್ದರೆ ಪ್ರಧಾನಮಂತ್ರಿಗಳ ಇಮೇಜ್ ಏನಾಗಿದೆ? ಪ್ರಧಾನ ಮಂತ್ರಿಗಳು ಜನತೆಯ ದೃಷ್ಟಿಯಲ್ಲಿ ಸೋತಿದ್ದಾರೆ. ಬೆಲೆ ಏರಿಕೆ, ವಚನಭ್ರಷ್ಟತನ, ಪಕ್ಷ ಕಟ್ಟಿ ಬೆಳೆಸಿದವರನ್ನು ಮೂಲೆಗುಂಪು ಮಾಡಿದ್ದು ಬಿಜೆಪಿ ಸರ್ಕಾರ ಇಮೇಜ್ ಕುಸಿಯಲು ಕಾರಣ.ದಕ್ಷಿಣ ಭಾರತದ ಬಂಗಾರು ಲಕ್ಷ್ಮಣ್ ಅವರನ್ನು ರಾಜಕೀಯವಾಗಿ ಮುಗಿಸಿದವರು, ದಕ್ಷಿಣ ಭಾರತದವರನ್ನು ಪ್ರಧಾನಮಂತ್ರಿ ಮಾಡಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.


ಇಂತಹ ಹಸಿ ಸುಳ್ಳಿನ ಮಹಲನ್ನು ಕಟ್ಟುವುದರಲ್ಲಿ ಬಿಜೆಪಿಯವರು ಎತ್ತಿದ ಕೈ. ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಗಾಂಧೀಜಿಯನ್ನು ಕೊಂದ ನಾಥುರಾಮ್ ಗೋಡ್ಸೆ ದೇಶಭಕ್ತರೆಂದು ಕರೆಯಲು ಹೊರಟಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನಿಲುವೇನು? ಮೋದಿ ಹಾಗೂ ಅವರ ಸಚಿವ ಸಂಪುಟದವರು ದೇಶದ ಜನರ ಬಳಿ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.


ಹೆಚ್ಎಮ್ ರೇವಣ್ಣ


ಮೋದಿ ವರ್ಚಸ್ಸು ಕಡಿಮೆಯಾಗುತ್ತಿರುವುದಕ್ಕೆ ಅನೇಕ ಉದಾಹರಣೆಗಳು ಇವೆ.ಅವರು ನೇತೃತ್ವದಲ್ಲಿ ಪ್ರಚಾರ ಮಾಡಿದ ಅನೇಕ ಚುನಾವಣೆಗಳಲ್ಲಿ ಬಿಜೆಪಿ ಸೋತಿದೆ. ಬಿಜೆಪಿ ಸಮಾವೇಶಕ್ಕೆ ಹೆಚ್ಚಿನ ಜನ ಸೇರುತ್ತಿಲ್ಲ ಎಂಬ ಕಾರಣಕ್ಕೆ ಪ್ರಧಾನಿಯವರಿಂದ ರೋಡ್ ಶೋ ಮಾಡಿಸಿದರು. ಆದರೂ ಜನ ಅವರಿಗೆ ಮನ್ನಣೆ ನೀಡಲಿಲ್ಲ.ಹೀಗಾಗಿ ಅವರನ್ನು ಬದಲಿಸಲು ಮನಸ್ಸಿರುವಂತೆ ಅಮಿತ್ ಶಾ ಅವರ ಮಾತಿನಲ್ಲಿ ವ್ಯಕ್ತವಾಗುತ್ತಿದೆ.ಚುನಾವಣಾ ಚಾಣಕ್ಯ ಇಂದು ತೆರೆದುಕೊಳ್ಳುವ ಅಮಿತ್ ಶಾ ಅವರು ತಮಿಳು ನಾಡಿನ ಜನರೆಲ್ಲ ಆಕರ್ಷಿಸಲು ಈ ರೀತಿ ಹೇಳಿರುವುದು ವಿಪರ್ಯಾಸ.ಇವರ ಮಾತಿಗೆ ಮರುಳಾಗಲು ತಮಿಳುನಾಡಿನ ಜನ ದಡ್ಡರಲ್ಲ. ತಮಿಳುನಾಡಿನ ಮತದಾರರು ರಾಜ್ಯ ಹಾಗೂ ರಾಜಕಾರಣದಲ್ಲಿ ತಮ್ಮದೇ ಆದಂತಹ ವ್ಯಕ್ತಿತ್ವ ಉಳಿಸಿಕೊಂಡಿದ್ದಾರೆ.ಇಂತಹ ಮಾತಿನಿಂದ ತಮಿಳುನಾಡಿನಲ್ಲಿ ಬದಲಾವಣೆ ತರುತ್ತೇನೆ ಎಂದು ಅಮಿತ್ ಶಾ ಭಾವಿಸಿದ್ದರೆ ಅದು ಅವರ ಮೂರ್ಖತನ ಎಂದು ಕಿಡಿ ಕಾರಿದರು.


ದೇಶದಲ್ಲಿ ಬಿಜೆಪಿ ಕೊಟ್ಟ ಮಾತುಗಳು ಹೊರತುಪಡಿಸಿ ಅವರದೇ ಸರ್ಕಾರದ ಭೇಟಿ ಬಚಾವೋ ಭೇಟಿ ಪಡಾವೋ ಘೋಷ ವಾಕ್ಯ ಏನಾಗಿದೆ?ಮಹಿಳೆಯರ ಮೇಲಿನ ದೌರ್ಜನ್ಯ, ಮಹಿಳಾ ಕುಸ್ತಿಪಟುಗಳ ಮೇಲೆ ಆಗುತ್ತಿರುವ ದೌರ್ಜನ್ಯ ಕಂಡು ಪ್ರದಾನ ಮಂತ್ರಿಗಳು ಮೌನೇಶ್ವರರಾಗಿರುವುದು ದುರಂತ.ಬಿಜೆಪಿಯ ಮತ್ತೊಬ್ಬ ಸಂಸದರಾಗಿದ್ದ ಅನಂತ್ ಕುಮಾರ್ ಹೆಗಡೆಯವರು ನಾವು ಅಧಿಕಾರಕ್ಕೆ ಬಂದಿರುವುದು ಸಂವಿಧಾನ ಬದಲಾವಣೆ ಮಾಡಲು ಎಂದು ಹೇಳಿದ್ದರು. ಉತ್ತರ ಪ್ರದೇಶದಲ್ಲಿ ಬಿಜೆಪಿಯವರು ಬೇರೆಯವರ ಮೇಲೆ ಬುಲ್ಡೋಜರ್ ಪ್ರಯೋಗ ಮಾಡುತ್ತಾರೆ. ಆದರೆ ಅದೇ ಬಿಜೆಪಿಯವರು ತಪ್ಪು ಮಾಡಿದರೆ ಅದಕ್ಕೆ ಕಡಿವಾಣ ಹಾಕುವುದಿಲ್ಲ.ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಹಾಗೂ ಕೆಲ ಮಾಧ್ಯಮಗಳು ಕೊಂಕು ಹುಡುಕಲು ಶುರು ಮಾಡಿದರು.ಶಕ್ತಿ ಯೋಜನೆ ಜಾರಿಂದ ಮಹಿಳೆಯರು ಬಹಳ ಸಂತೋಷಗೊಂಡಿದ್ದಾರೆ. ಸರ್ಕಾರ ಗೃಹ ಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಜಾರಿ ಮಾಡಲಿದೆ. ಈ ಯೋಜನೆಗಳ ಬಗ್ಗೆ ಬಿಜೆಪಿ ನಾಯಕರು ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ.ವಿದ್ಯುತ್ ಹೆಚ್ಚಳ ಮಾಡಿರುವುದು ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ಆರಂಭಿಸುತ್ತಿದೆ. ವಿದ್ಯುತ್ ದರ ಪರಿಷ್ಕರಣ ಸಮಿತಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚಳ ಮಾಡಿತ್ತು.ಇಂತಹ ಸುಳ್ಳು ಹೇಳುವುದರಲ್ಲಿ ಬಿಜೆಪಿ ಎತ್ತಿದ ಕೈ ಎಂದು ಅವರು ಆರೋಪಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.