ಬೆಂಗಳೂರು:  ಬಿಜೆಪಿ ಸರ್ಕಾರದ ಅವಧಿಯಲ್ಲಾದ ಕಾಮಗಾರಿಗಳು, ಟೆಂಡರ್, ಪ್ಯಾಕೇಜ್ ಗಳು, ಪುನರ್ ಅಂದಾಜು, ಹೆಚ್ಚುವರಿ ಅಂದಾಜು, ಬಾಕಿ ಬಿಡುಗಡೆ ಬಗ್ಗೆ ಗುತ್ತಿಗೆದಾರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಮಾಡಿರುವ ಆರೋಪಗಳ ತನಿಖೆಗೆ ರಾಜ್ಯ ಸರ್ಕಾರ ನಿವೃತ್ತ ಹೈಕೋರ್ಟ್ ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಗಮನಾರ್ಹವಾಗಿ, ಜೀ ಕನ್ನಡ ನ್ಯೂಸ್ ಈ ಹಿಂದೆ ಸಮಿತಿ ರಚನೆ ಬಗ್ಗೆ ಸುಳಿವು ನೀಡಿತ್ತು. 


COMMERCIAL BREAK
SCROLL TO CONTINUE READING

ಬಿಜೆಪಿ ಸರ್ಕಾರದ ಅವಧಿಯ 40% ಕಮಿಷನ್  ಪ್ರಕರಣ ತನಿಖೆಗೆ ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿ ಲೋಕೋಪಯೋಗಿ ಇಲಾಖೆ ಅಪರ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ನಿವೃತ್ತ ಹೈಕೋರ್ಟ್ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಸಮಿತಿಯು ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳ ಹಾಗೂ ದಾಖಲಾತಿಗಳನ್ನು ವಿವರ್ವಾಗಿ ಪರಿಶೀಲಿಸಿ ಈ ಕುರಿತ ಸಂಪೂರ್ಣ ವರದಿಯನ್ನು ಮುಂದಿನ ಮೂವತ್ತು ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. 


ಇನ್ನೂ ತನಿಖೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಗತ್ಯವಾದ ಕಡತಗಳು, ದಾಖಲಾತಿಗಳನ್ನು ಆಯಾ ಸಂಬಂಧಿತ ಇಲಾಖೆಯ ಅಧಿಕಾರಿಗಳು ತನಿಖಾ ಸಮಿತಿಗೆ ಒದಗಿಸಬೇಕು. ಸ್ಥಳ ಪರಿಶೀಲನೆ ವೇಳೆ ಅಧಿಕಾರಿಗಳು ಖುದ್ದಾಗಿ ಹಾಜರಿದ್ದು ತನಿಖೆಗೆ ಸಂಪೂರ್ಣ ಸಹಕಾರವನ್ನು ನೀಡಬೇಕು ಎಂದು ಲೋಕೋಪಯೋಗಿ ಇಲಾಖೆ ಆದೇಶದಲ್ಲಿ ತಿಳಿಸಿದೆ. 


ಇದನ್ನೂ ಓದಿ- ಕೈ-ದಳ ನಡುವೆ ನಿವೇಶನ ಹಂಚಿಕೆ ಒಪ್ಪಂದ?..ತುಮಕೂರಿನಲ್ಲಿ ನಿಲ್ಲದ ಹಾಲಿ-ಮಾಜಿ ಶಾಸಕರ ಟಾಕ್ ವಾರ್..!


ಸಮಿತಿ ಯಾವೆಲ್ಲಾ ಅಂಶಗಳ ಬಗ್ಗೆ ತನಿಖೆ ನಡೆಸಲಿದೆ: 
* ಯೋಜನೆ, ಕಾಮಗಾರಿಗಳಿಗೆ ನಿಯಮಾನುಸಾರ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆಯೇ?


* ಅನುಷ್ಠಾನಗೊಳಿಸಿದ ಕಾಮಗಾರಿ, ಯೋಜನೆಗಳ ಗುಣಮಟ್ಟ


* ಪ್ರಚಲಿತ ಅನುಸೂಚಿ ದರಗಳ (ಎಸ್‌ಆರ್) ಅನುಸಾರ ಕಾಮಗಾರಿಗಳ ಅಂದಾಜುಗಳನ್ನು ತಯಾರಿಸಲಾಗಿದೆಯೇ? 


# ಕಾಮಗಾರಿಗಳ ಅಂದಾಜಿನಲ್ಲಿರುವ ಪ್ರಮಾಣ ವಾಸ್ತವಿಕವಾಗಿದೆಯೇ? ಇಲ್ಲವೇ  ಕೃತಕವಾಗಿ ಹೆಚ್ಚಿಸಲಾಗಿದೆಯೇ? ಒಂದೊಮ್ಮೆ ಕೃತಕವಾಗಿ ಹೆಚ್ಚಳ ಕಂಡು ಬಂದಿದ್ದಾರೆ ಅದರ ಪ್ರಮಾಣ ಎಷ್ಟಿದೆ. ಹಾಗೂ ಹಣಕಾಸಿನ ಬದ್ದತೆಯೊಂದಿಗೆ ಅದು ಯಾವ ಹಂತದಲ್ಲಿದೆ ಎಂಬಿತ್ಯಾದಿ ಮಾಹಿತಿಗಳನ್ನು ಕಲೆಹಾಕುವುದು.   


# ಈ ಕಾಮಗಾರಿಗಳ ಅನುಷ್ಠಾನದಲ್ಲಿ ಹೆಚ್ಚುವರಿ ವ್ಯತ್ಯಾಸದ ಅನಿವಾರ್ಯ ಮತ್ತು ಅಗತ್ಯ. ಅನಿವಾರ್ಯವಾಗಿದ್ದರೆ ಮೂಲ ಅಂದಾಜಿನಲ್ಲಿ ಕೈಬಿಡಲು ಕಾರಣಗಳೇನು ಮತ್ತು ಅವುಗಳಿಗೆ ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡಿರುವ ಬಗ್ಗೆ ವಿವರ ಇತ್ಯಾದಿಗಳ ಪರಿಶೀಲನೆ.


ಇದನ್ನೂ ಓದಿ- ಹಾವೇರಿ ಅಖಾಡದಲ್ಲಿ ಈಶ್ವರಪ್ಪ ಲೋಕಸಭೆ ತಾಲೀಮು.. ಬಿಜೆಪಿ ಹಿರಿಯರಿಗೆ ಶುರುವಾಯ್ತು ಟಿಕೆಟ್ ಟೆನ್ಶನ್


* ಯಾವುದಾದರೂ ಕಾಮಗಾರಿಗಳನ್ನು ನಿರ್ವಹಿಸದೇ ಬಿಲ್ ಮಾಡಲಾಗಿದೆಯೇ? ಅನುಷ್ಠಾನದ ಕಾಮಗಾರಿಗಳ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಬಿಲ್
ಪಾವತಿಸಲಾಗಿದೆಯೇ?


* ಕಾಮಗಾರಿಗಳ ಟೆಂಡರ್‌ಗಳನ್ನು ಕರೆಯುವಾಗ ಕೆಲವೇ ಗುತ್ತಿಗೆದಾರರಿಗೆ ಅನುಕೂಲ ಆಗುವಂತೆ ಹಾಗೂ ಉಳಿದ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸದಂತೆ ಷರತ್ತು ರೂಪಿಸಲಾಗಿತ್ತೇ? 


* ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ,ಅನುಷ್ಠಾನ ಪ್ರಕ್ರಿಯೆಗಳಲ್ಲಿ ಉಂಟಾಗಿರಬಹುದಾದ ಇತರ ಯಾವುದಾದರೂ ಲೋಪದೋಷಗಳು ಬಗ್ಗೆ ಸಮಿತಿ ತ‌ನಿಖೆ‌ ನಡೆಸಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ