ಬೆಂಗಳೂರು: 5 ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟಬಹುಮತದೊಂದಿಗೆ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ. ರಾಜ್ಯದ ಕಾಂಗ್ರೆಸ್‌ ಪಕ್ಷದಲ್ಲಿ ಬಣಗಳ ಜಗಳ ತಾರಕ್ಕಕ್ಕೇರಿದೆ ಎಂದು ಬಿಜೆಪಿ ಕುಟುಕಿದೆ. ಈ ಬಗ್ಗೆ ಮಂಗಳವಾರ ಟ್ವೀಟ್‌ ಮಾಡಿರುವ ಬಿಜೆಪಿ, ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಆಕಾಂಕ್ಷಿಗಳು ಹಾಗೂ ಚುನಾವಣೆ ನಂತರ ಉಪಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಪಟ್ಟಿಯನ್ನು ಬಿಡುಗಟೆ ಮಾಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕಾವೇರಿ ನೀರು ತಮಿಳುನಾಡಿಗೆ ನಿಲ್ಲಿಸದೇ ಇದ್ರೆ ಉಗ್ರ ಹೋರಾಟದ ಎಚ್ಚರಿಕೆ: ವಾಟಾಳ್ ನಾಗರಾಜ್


ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು..!


ಡಾ.ಜಿ.ಪರಮೇಶ್ವರ್


ಡಿ.ಕೆ.ಶಿವಕುಮಾರ್‌


ಮಲ್ಲಿಕಾರ್ಜುನ್‌ ಖರ್ಗೆ


ಎಂ.ಬಿ.ಪಾಟೀಲ್


ಚುನಾವಣೆ ನಂತರ ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು..!


ಹೆಚ್.ಸಿ.ಮಹದೇವಪ್ಪ


ಬಿ.ಕೆ.ಹರಿಪ್ರಸಾದ್‌


ಕೆ.ಎನ್.ರಾಜಣ್ಣ


ಸತೀಶ್‌ ಜಾರಕಿಹೊಳಿ


ಜಮೀರ್ ಅಹ್ಮದ್‌ ಖಾನ್


ಪ್ರಧಾನಿ ಜೊತೆ ಚರ್ಚೆಗೆ ಬಿಜೆಪಿ ಮುಖಂಡರು ಸಮಯ ನಿಗದಿಪಡಿಸಲಿ-ಎಂ.ಬಿ ಪಾಟೀಲ ಆಗ್ರಹ


ಪ್ರಿಯಾಂಕ್ ಖರ್ಗೆಗೆ ಬಿಜೆಪಿ ತಿರುಗೇಟು!


RSS ತತ್ವವನ್ನು ನಂಬಿ ಉದ್ಧಾರ ಆಗಿರುವವರ ತೋರಿಸಿ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ‘ಸ್ವಂತಕ್ಕೆ ಮತ್ತು ಕುಟುಂಬಕ್ಕಾಗಿ ಮಾತ್ರವೇ "ದುಡಿಯುತ್ತಾ", ಅಂಥದ್ದೇ ಪಕ್ಷದ‌ ಸಂಸ್ಕಾರ ಪಡೆದ ಪ್ರಿಯಾಂಕ್ ಖರ್ಗೆಯವರಿಗೆ ಇತರರನ್ನು ಉದ್ಧಾರ ಮಾಡುವುದು ಬಿಡಿ, ಅದನ್ನು ಕಾಣುವುದೂ ಸಾಧ್ಯವಿಲ್ಲ. ತಮ್ಮ ಪ್ರಚಾರ ಕಾಪಾಡಿಕೊಳ್ಳಲು ಆಗಾಗ ರಾಷ್ಟ್ರಭಕ್ತ ಸಂಘಟನೆಗಳನ್ನು ಎಳೆದು ತರಬೇಕಾಗಿರುವ ದಯನೀಯ ಸ್ಥಿತಿಗೆ ಇವರು ತಲುಪಿಬಿಟ್ಟರಲ್ಲಾ! ಛೇ..!’ ಎಂದು ಬಿಜೆಪಿ ಟೀಕಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.