ಗೋರಕ್ಷಣೆ ಜಾಗೃತಿಗೆ ಬಿಜೆಪಿಯಿಂದ ಅಷ್ಟಯಾಮ ಯಜ್ಞ !
ಗೊರಕ್ಷಣೆ ಕುರಿತು ಜಾಗೃತಿ ಮೂಡಿಸಲು `ಗೋರಕ್ಷಾ ಅಷ್ಟಯಾಮ ಯಜ್ಞ` ಕ್ಕೆ ತಯಾರಿ ನಡೆಸಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಗಮನಸೆಳೆಯಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಬಿಜೆಪಿ ಇಂದು ಗೊರಕ್ಷಣೆ ಕುರಿತು ಜಾಗೃತಿ ಮೂಡಿಸಲು `ಗೋರಕ್ಷಾ ಅಷ್ಟಯಾಮ ಯಜ್ಞ' ಕ್ಕೆ ತಯಾರಿ ನಡೆಸಿದೆ.
ಗೋವಿನ ವಿವಿಧ ಉಪಯೋಗಗಳನ್ನು ಹಾಗೂ ಪ್ರಾಮುಖ್ಯತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಭಾರತದಲ್ಲಿ ಜಾನುವಾರು ಸಂಖ್ಯೆಯನ್ನು ರಕ್ಷಿಸುವ ಉದ್ದೇಶದಿಂದ ಬಿಜೆಪಿ ಬೆಂಗಳೂರಿನಲ್ಲಿ 24 ಗಂಟೆಗಳ 'ಗೋರಕ್ಷಾ ಅಷ್ಟಯಾಮ ಯಜ್ಞ' ವನ್ನು ಆರಂಭಿಸಿದೆ.
ಹಸುವಿನ ವಿವಿಧ ಉಪಯೋಗಗಳು ಮತ್ತು ಅದರ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲವರ್ಧಿಸಲು ಜಾನುವಾರು ಸಂಖ್ಯೆಯನ್ನು ರಕ್ಷಿಸಲು ಈ ಯಜ್ಞ ಹಮ್ಮಿಕೊಳ್ಳಲಾಗುತ್ತಿದೆ. ಇದು 24 ಗಂಟೆಗಳ ಕಾಲ 'ಅಖಂಡ ರಾಮಾಯಣ' ವನ್ನು ಅನುಸರಿಸಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್ ಮತ್ತು ಇತರರು ಫೆಬ್ರವರಿ 3 ರಂದು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.