ಚಾಮರಾಜನಗರ: ನೂತನ ರಾಜ್ಯಸಭಾ ಸದಸ್ಯರ ವಿಜಯೋತ್ಸವದ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿರುವವರು ಬಿಜೆಪಿ ಆರ್.ಎಸ್.ಎಸ್ ನಿಂದ ತರಬೇತಿ ಪಡೆದವರೇ ಆಗಿದ್ದಾರೆ ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ  ಕೃಷ್ಣಮೂರ್ತಿ ಗಂಭೀರ ಆರೋಪ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಚಾಮರಾಜನಗರದಲ್ಲಿ  ಮಾಧ್ಯಮವರೊಂದಿಗೆ ಅವರು ಮಾತನಾಡಿ, ಈ ಹಿಂದೆ ಮಂಡ್ಯದಲ್ಲಿ ನಡೆದ ಹನುಮಧ್ವಜ ವಿವಾದದ ವೇಳೆ ಕೂಡ ಆರ್.ಎಸ್.ಎಸ್ ಬಿಜೆಪಿಯ ಟ್ರೈನ್ಡ್ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿ ಕೋಮು ಗಲಭೆ ಸೃಷ್ಟಿಸಲು ಮುಂದಾಗಿದ್ದರು, ಇತ್ತೀಚೆಗೆ ನಡೆದ ವಿಧಾನಸಭೆ, ವಿಧಾನಪರಿಷತ್, ರಾಜ್ಯಸಭಾ ಚುನಾವಣೆಗಳಲ್ಲಿ ಬಿಜೆಪಿ ಹೀನಾಯವಾಗಿ ಸೋಲುಂಡಿದೆ, ನಿನ್ನೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಒಬ್ಬ ಶಾಸಕ ಕ್ರಾಸ್ ವೋಟಿಂಗ್ ಮಾಡಿದ್ದು, ಮತ್ತೊಬ್ಬ ಶಾಸಕ ಮತದಾನದಿಂದ ದೂರು ಉಳಿದಿದ್ದಾರೆ. ಈ ಮುಖಭಂಗವನ್ನು ಮುಚ್ಚಿಟ್ಟುಕೊಳ್ಳಲು ಪಾಕ್ ಪರ ಘೋಷಣೆ ಹಾಗೂ ಹೋರಾಟದ ಹುನ್ನಾರ ರೂಪಿಸಿರುವ ಗುಮಾನಿ ಇದೆ ಎಂದರು.


ಇದನ್ನೂ ಓದಿ: ಕಾಲೇಜು ಅಡಳಿತ ಮಂಡಳಿಯಿಂದ ಹಿಂಸೆ ಆರೋಪ: ಆತ್ಮಹತ್ಯೆಗೆ ವಿದ್ಯಾರ್ಥಿ ಶರಣು


ಘೋಷಣೆ ಕೂಗಿಸಿ ಕೋಮುಗಲಭೆ ಸೃಷ್ಟಿಸುವ ಮೂಲಕ ದೇಶದಲ್ಲಿ ಅರಾಜಕತೆ ಉಂಟು ಮಾಡಲು ಮುಂದಾಗಿದ್ದಾರೆ, ಸರ್ಕಾರ ನಿನ್ನೆ ಘೋಷಣೆ ಕೂಗಲಾದ ವೀಡಿಯೋ ಅಸಲಿಯತ್ತು ಪರೀಕ್ಷೆಗೆ ಕಳುಹಿಸಿದ್ದು, ಎಫ್.ಎಸ್.ಎಲ್ ವರದಿ ಬರುವ ಮೊದಲೇ ಬಿಜೆಪಿ ನಾಯಕರು ಸದನದ ಹೊಳಗೆ ಹಾಗು ಹೊರಗೆ ಪ್ರತಿಭಟನೆ ನಡೆಸುತ್ತಿರುವುದರ ಹಿಂದೆ ಹುನ್ನಾರ ಅಡಗಿದೆ, ಹೀಗಾಗಿ ರಾಜ್ಯ ಸರ್ಕಾರ ನಿನ್ನೆ ನಡೆದ ಪ್ರಕರಣದ ಜೊತೆಗೆ ಮಂಡ್ಯ ಹಾಗು ಹುಬ್ಬಳ್ಳಿಯಲ್ಲಿ ನಡೆದ ಪ್ರಕರಣಗಳನ್ನು ವಿಶೇಷ ತನಿಖೆಗೆ ಒಳಪಡಿಸಬೇಕು, ಪಾಕಿಸ್ತಾನದ ಪರ ಘೋಷಣೆ ಕೂಗಿದವರನ್ನು ದೇಶದ್ರೋಹ ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿದರು.


ಇದನ್ನೂ ಓದಿ: 2 ಎಕರೆಯಲ್ಲಿ ಪೇರು ಹಣ್ಣು ಬೆಳೆದು 30 ಲಕ್ಷ ರೂ ಆದಾಯ: ನಿಡೋಣಿ ರೈತನ ಯಶೋಗಾಥೆ..!  


ಪಾಕ್ ಪರ ಘೋಷಣೆ ಕೂಗುವವ ಮೂರ್ಖರು ಕರ್ನಾಟಕದಲ್ಲಿಲ್ಲ, ಒಂದು ವೇಳೆ ಪಾಕ್ ಪರ ಒಲವು ಇಟ್ಟುಕೊಂಡಿದ್ದವರು ಇದ್ದರೇ ಅವರನ್ನು ಪಾಕಿಸ್ತಾನಕ್ಕೇ ಕಳುಹಿಸಲಿ, ಆ ದೇಶಕ್ಕೆ ಕಳುಹಿಸಲು ಕೇಂದ್ರ ಸರ್ಕಾರ ಕಾಯ್ದೆ ರೂಪಿಸಬೇಕು ಎಂದರು.ಜನರು ಕೋಮು ಗಲಭೆ ಸೃಷ್ಟಿಸುವವರ ಮಾತಿಗೆ ಮನ್ನಣೆ ನೀಡಬಾರದು ಎಂದು ಮನವಿ ಮಾಡಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ