ಬೆಂಗಳೂರು: ಕರ್ನಾಟಕದಿಂದ ಆಯ್ಕೆಯಾದ 26 ಜನ ಎಂಪಿಗಳು ಎಲ್ಲಿ ಕಾಣೆಯಾಗಿದ್ದಾರೆ. ಅವರನ್ನು ಬಿಜೆಪಿಯವರೇ ಬೇರೆ ದೇಶಗಳಿಗೆ ಕಳಿಸಿಕೊಟ್ಟಿದ್ದಾರೆಯೇ? ಎಂದು ಕೆಪಿಸಿಸಿ ವಕ್ತಾರ ಲಕ್ಷಣ್ ಅವರು ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.


ಅವರು ಕೆಲಸ‌ ಮಾಡುವುದು ಬೇಡ, ನಮ್ಮ ರಾಜ್ಯ ಸರ್ಕಾರದ ವಿರುದ್ಧವಾದರೂ ಹೇಳಿಕೆ ನೀಡಲಿ ಎಂದರೂ ನೀಡುತ್ತಿಲ್ಲ. ಬಿಜೆಪಿ ಹೈಕಮಾಂಡ್ ಎಲ್ಲಾ ಸಂಸದರ ವಾಕ್‌ ಸ್ವಾತಂತ್ರವನ್ನು ಕಸಿದುಕೊಂಡಿದೆಯೇ? ಯಾವ ಸಂಸದನೂ ತುಟಿ ಬಿಚ್ಚದಂತೆ ನೋಡಿಕೊಳ್ಳಲಾಗುತ್ತಿದೆಯೇ? ನೋಟಿಸ್ ನೀಡುವ, ಮಾತನಾಡಿದರೆ ಬೆದರಿಕೆ ಹಾಕುವ ಮೂಲಕ ಬಾಯಿ ಮುಚ್ಚಿಸಲಾಗುತ್ತಿದೆಯೇ? 


ಅನೇಕ ಅನುದಾನಗಳು ಅವರಿಂದ ರಾಜ್ಯಕ್ಕೆ ಬರಬೇಕು. ಬರಗಾಲದಂತಹ ಪರಿಸ್ಥಿತಿಯಲ್ಲೂ ಎಲ್ಲಿ ಹೋಗಿದ್ದಾರೆ ಎನ್ನುವುದೇ ಆಶ್ಚರ್ಯ. ರಾಜಕೀಯ ಹಾಳಾಗಿ ಹೋಗಲಿ, ಕರ್ನಾಟಕ ರಾಜ್ಯದ ಪರವಾಗಿ ದನಿ ಎತ್ತಲಿ.


ಇದನ್ನೂ ಓದಿ: ಬಿಜೆಪಿ ಸಂಪರ್ಕದಲ್ಲಿ ಕಾಂಗ್ರೆಸ್‌ನ 45 ಶಾಸಕರು


ಕೇಂದ್ರದಿಂದ ಬಂದ 4 ಬರ ಅಧ್ಯಯನ ಸಮಿತಿಗಳು, ಕೇವಲ ಪ್ಲೈಯಿಂಗ್ ವಿಸಿಟ್ ಮಾಡಿ ಹೋದವು. ನಾನು ಸಹ ಅನೇಕ ಮಾಧ್ಯಮಗಳಲ್ಲಿ ಗಮನಿಸುತ್ತಿದ್ದೇನೆ. ಯಾವುದೇ ಮಾಧ್ಯಮಗಳಲ್ಲೂ ಸುದ್ದಿಯ ಸುಳಿವೆ ಇಲ್ಲ. ಅಂದರೆ ಬರ ಅಧ್ಯಯನ ವರದಿಯನ್ನು ಇನ್ನೂ ಆ ಸಮಿತಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿಯೇ ಇಲ್ಲ. ವರದಿ ಕೊಟ್ಟಿದ್ದರೆ ಎಷ್ಟು ಹಣ ಬಿಡುಗಡೆಗೆ ಶಿಫಾರಸ್ಸು ಮಾಡಲಾಗಿದೆ, ಅದರ ಮಾಹಿತಿಯೇ ಇಲ್ಲ.


ಇದನ್ನೂ ಓದಿ: “ಕೆ ಎಸ್ ಈಶ್ವರಪ್ಪನವರಿಗೆ ಬಿಜೆಪಿಯಲ್ಲಿ ಬೆಲೆ ಇಲ್ಲ”


ಅಕ್ಟೋಬರ್ ಅಂತ್ಯದವರೆಗೆ ರಾಜ್ಯ ಸರ್ಕಾರ ನಡೆಸಿರುವ ಅಧ್ಯಯನದ ಪ್ರಕಾರ ಸುಮಾರು 33, 700  ಕೋಟಿ ನಷ್ಟವಾಗಿದೆ. ಅದರಲ್ಲಿ ಮಧ್ಯಂತರವಾಗಿ 17,900 ಕೋಟಿ ಬಿಡುಗಡೆ ಮಾಡಿ ಎಂದು ಮನವಿ ಸಲ್ಲಿಸಲಾಗಿದೆ.


236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳಲ್ಲಿ ಬರ ಎಂದು ಘೋಷಣೆ ಮಾಡಲಾಗಿದೆ. ರಾಜ್ಯ ಸರ್ಕಾರದ ಬರ ಪರಿಹಾರ ಹಣದಲ್ಲಿ  900 ಕೋಟಿಯಲ್ಲಿ 334 ಕೋಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ, ಮತ್ತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ತುರ್ತು ಹಣವನ್ನು ಉಚಿತ ಕುಡಿಯುವ ನೀರಿಗೆ ಬಳಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. 


2024 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕೇವಲ ರಾಜ್ಯ ಸರ್ಕಾರವನ್ನು ದೂಷಣೆ ಮಾಡುತ್ತಿರುವ ಬಿಜೆಪಿ ಏನೂ ಕೆಲಸ ಮಾಡುತ್ತಿಲ್ಲ. 


ರಾಜ್ಯದ ಕಂದಾಯ, ಗ್ರಾಮೀಣಾಭಿವೃದ್ಧಿ ಸೇರಿದಂತೆ 4 ಜನ ಸಚಿವರು ಬರ ಪರಿಹಾರಕ್ಕೆ ಎಂದು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಜಂಟಿ ಕಾರ್ಯದರ್ಶಿಗಳು ಸೇರಿದಂತೆ ಸರ್ಕಾರದ ಉನ್ನತ ಅಧಿಕಾರಿಗಳು ಬರ ಪರಿಹಾರ ನೀಡಿ ಎಂದು ಮನವಿ ಸಲ್ಲಿಸಲಾಗಿದೆ. ಬಿಜೆಪಿಯ ಒಬ್ಬರಾದರೂ ಬರ ಪರಿಹಾರಕ್ಕೆ ಕೇಂದ್ರ ಸಚಿವರನ್ನು ಭೇಟಿಯಾಗಿವ ಕೆಲಸ ಮಾಡಿದ್ದಾರೆಯೇ? ಇಲ್ಲ‌.


2016,17 ರಲ್ಲಿ ಬರ ಬಂದಾಗಲೂ ಸಹ ಕರ್ನಾಟಕದ ಕಡೆ ತಿರುಗಿ ನೋಡಲಿಲ್ಲ. 2019 ರಲ್ಲಿ ಅತಿವೃಷ್ಟಿಯಾದಾಗ ಇದೇ ಕೇಂದ್ರ ಸರ್ಕಾರ 50 ಸಾವಿರ ಕೋಟಿ ನಷ್ಟವಾಗಿದೆ ಎಂದು ಹೇಳಿತ್ತು, ಆದರೆ ಕೊಟ್ಟಿದ್ದು ಕೇವಲ 1,447 ಕೋಟಿ ಮಾತ್ರ, ಏಕೆ ಸ್ವಾಮಿ ಕರ್ನಾಟಕ ಎಂದರೆ ಬಿಜೆಪಿಯವರಿಗೆ ಇಷ್ಟೊಂದು ದ್ವೇಷ.


ಇದನ್ನೂ ಓದಿ: ಪಾಲಿಕೆಯಿಂದ ಬೀದಿಬದಿ ಅಂಗಡಿ ತೆರವು ಕಾರ್ಯಾಚರಣೆಗೆ ವಿರೋಧ


ಗುಜರಾತ್, ಉತ್ತರಪ್ರದೇಶ ಇಲ್ಲೆಲ್ಲಾ ನಷ್ಟವಾದರೆ ನಷ್ಟದ ಹಣದಲ್ಲಿ ಶೇ 80 ರಷ್ಟು ಕೊಡುವುದು, ಆದರೆ ನಮಗೆ ಏಕೆ ಅನ್ಯಾಯ. 


ಕೇವಕ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಚುನಾವಣೆಯನ್ನು ಎದುರಿಸುತ್ತಿದೆ. ದಿನಬೆಳಗಾದರೆ ಕೇವಲ ಸರ್ಕಾರ ಬೀಳಿಸುವುದನ್ನೇ ಜಪ ಮಾಡುತ್ತಿದ್ದಾರೆ. ಇದು ಸಾಧ್ಯವೇ?


ಬಿಜೆಪಿ ಬಳಿ 66, ಜೆಡಿಎಸ್ ಬಳಿ 19 ಅಂದರೆ ಬಹುಮತಕ್ಕೆ 50 ಜನ ಶಾಸಕರು ಕಡಿಮೆ ಬರುತ್ತಾರೆ. ಕಾಂಗ್ರೆಸ್ ಪಕ್ಷದ 135 ಶಾಸಕರಲ್ಲಿ 50 ಜನರನ್ನು ಕೊಂಡುಕೊಳ್ಳುತ್ತಾರೆಯೇ? ಇದರ ಜೊತೆಗೆ ಕುಮಾರಸ್ವಾಮಿ ಅವರ ಜೊತೆ ಸೇರಿಕೊಂಡು ಮಸಲತ್ತನ್ನು ಮಾಡಲಾಗುತ್ತಿದೆ.


ಇದಲ್ಲದೇ ಹಾಸನಾಂಬ ದೇವರ ದರ್ಶನ ಮಾಡಿಸಿ, ಒಂದು ರೆಸಾರ್ಟ್‌ನಲ್ಲಿ ಪ್ರಮಾಣ ಬೇರೆ ಮಾಡಿಸಿಕೊಂಡಿದ್ದಾರೆ, ಕುಮಾರಸ್ವಾಮಿ. ಈ ಹಿಂದೆ ವಿಶ್ವನಾಥ್ ಅವರ ಬಳಿ ಪ್ರಮಾಣ ಮಾಡಿಸಿಕೊಳ್ಳಲಾಗಿತ್ತು, ಏನಾಯಿತು ಅದೆಲ್ಲಾ? ಈ ಆಣೆ,‌ ಪ್ರಮಾಣಗಳು ಅದೆಷ್ಟು ದಿನಗಳ ಕಾಲ ಉಳಿಯುತ್ತದೆಯೊ ನೋಡಬೇಕು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.