ಕೇಂದ್ರ ಸರ್ಕಾರದ ಮೂಲಕ ಫೋನ್ ಟ್ಯಾಪ್ ಮಾಡುತ್ತಿರುವ ಬಿಜೆಪಿ
ಆರ್. ಅಶೋಕ್ ರೀತಿ ನಾನು ಆರೋಪ ಮಾಡಲು ಹೋಗಲ್ಲ- ದಿನೇಶ್ ಗುಂಡುರಾವ್.
ಬೆಂಗಳೂರು: ಬಿಜೆಪಿ ಕಾಂಗ್ರೇಸ್ ಶಾಸಕರು, ಸಚಿವರನ್ನು ಬ್ಲಾಕ್ ಮೇಲ್ ಮಾಡುವ ಪ್ರಯತ್ನ ಮಾಡುತ್ತಿದೆ. ಈ ಕಾರಣಕ್ಕಾಗಿ ಬಿಜೆಪಿ ಕೇಂದ್ರ ಸರ್ಕಾರದ ಮೂಲಕ ಕಾಂಗ್ರೇಸ್ ನಾಯಕರ ಫೋನ್ ಟ್ಯಾಪ್ ಮಾಡುತ್ತಿದೆ ಎಂದು ಕೆಪಿಎಸ್ಸಿ ಕಾರ್ಯದರ್ಶಿ ದಿನೇಶ್ ಗುಂಡುರಾವ್ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರು ಸಚಿವರನ್ನ ಬ್ಲಾಕ್ ಮೇಲ್ ಮಾಡುವ ಪ್ರಯತ್ನ ಮಾಡುತ್ತಿದೆ ಎಂಬುದರ ಬಗ್ಗೆ
ಸ್ಪಷ್ಟ ಮಾಹಿತಿ ಇದೆ. ಆದರೆ ನಿಖರ ದಾಖಲೆಗಳಿಲ್ಲ ಎಂದು ದಿನೇಶ್ ಗುಂಡುರಾವ್ ತಿಳಿಸಿದ್ದಾರೆ.
ಆರ್. ಅಶೋಕ್ ರೀತಿ ನಾನು ಆರೋಪ ಮಾಡೋಕೆ ಹೋಗಲ್ಲ ಎಂದ ಗುಂಡುರಾವ್, ಕಾಂಗ್ರೇಸ್ ಶಾಸಕರು ಮತ್ತು ಸಚಿವರುಗಳನ್ನು ಬ್ಲಾಕ್ ಮೇಲ್ ಮಾಡುವ ಉದ್ದೇಶದಿಂದಲೇ ಫೋನ್ ಟ್ಯಾಪ್ ಮಾಡುತ್ತಿದ್ದಾರೆ. ಆದರೆ ಯಾರ ಯಾರ ಫೋನ್ ಟ್ಯಾಪ್ ಆಗುತ್ತಿದೆಯೋ ಗೊತ್ತಿಲ್ಲ. ಕೇಂದ್ರದ ಅಧಿಕಾರವನ್ನು ಬಿಜೆಪಿ ನಾಯಕರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ನಾಯಕರನ್ನು ದೂರಿದರು.