ಬೆಳಗಾವಿ: ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟಿರುವುದಕ್ಕೆ ಮತ್ತು ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಧ್ವಂಸಗೊಳಿಸಿರುವ ಎಂಇಎಸ್ ಕಾರ್ಯಕರ್ತರ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೀನ ಕೃತ್ಯವೆಸಗಿರುವ ಕಿಡಗೇಡಿಗಳನ್ನು ಗುಂಡಿಕ್ಕಿ ಸಾಯಿಸಿ ಎಂದು ಅವರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ವಿರೋಧ ಪಕ್ಷದ ನಾಯಕರು ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಬಳಸಿರುವ ಭಾಷೆ ಯಾವುದಕ್ಕೂ ಸಾಕಾಗುವುದಿಲ್ಲ. ಅದು ಮಹಾರಾಷ್ಟ್ರ ಏಕೀಕರಣ ಸಮಿತಿ ಅಲ್ಲ, ಮಹಾರಾಷ್ಟ್ರ ಹೇಡಿಗಳ ಸಮಿತಿ. ಹೇಡಿಗಳು ರಾತ್ರಿ ವೇಳೆ ಹೋಗಿ ಸಂಗೊಳ್ಳಿ ರಾಯಣ್ಣ(Sangolli Rayanna)ನ ಪ್ರತಿಮೆಯನ್ನು ಧ್ವಂಸ ಮಾಡಿದ್ದಾರೆ. ಅವರು ಗಂಡಸರು ಆಗಿದ್ದರೆ ಹಗಲು ಹೊತ್ತಿನಲ್ಲಿ ಬಂದು ಮುಟ್ಟಲಿ ನೋಡೋಣ. ಸಂಗೊಳ್ಳಿ ರಾಯಣ್ಣ ಜೀವಂತವಿದ್ದಾಗಲೂ ಇದೇ ರೀತಿ ಹೇಡಿಗಳು ಅವರನ್ನು ಹಿಡಿದುಕೊಡುವಲ್ಲಿ ಸಹಕಾರ ನೀಡಿದರು. ಸಾವನ್ನಪ್ಪಿದ ಮೇಲೂ ಸಂಗೊಳ್ಳಿ ರಾಯಣ್ಣ ಈ ರೀತಿ ಹೇಡಿಗಳಿಂದ ತೊಂದರೆ ಅನುಭವಿಸುವಂತಹ ಸ್ಥಿತಿ ಬಂದೊದಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.


ಇದನ್ನೂ ಓದಿ: ನಟ ಪುನೀತ್ ರಾಜ್‍ಕುಮಾರ್ ನಾಮಫಲಕ ಕೆಡವಿದ ಕಿಡಿಗೇಡಿಗಳು: ಗ್ರಾಮಸ್ಥರ ಆಕ್ರೋಶ


ಹೇಡಿಗಳು ನಡೆಸಿರುವ ಈ ಕುಕೃತ್ಯ(MES Goondaism)ದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರಕ್ಕೂ ಇದರ ಪರಿಸ್ಥಿತಿಯನ್ನು ಮನವರಿಕೆ ಮಾಡಬೇಕಾಗಿದೆ. ಸಂಗೊಳ್ಳಿ ರಾಯಣ್ಣ ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಸ್ವಾತಂತ್ರ್ಯ ಹೋರಾಟಗಾರನಾದ ರಾಯಣ್ಣನಿಗೆ ಈ ರೀತಿ ಅಪಮಾನ ಮಾಡಿರುವುದು ಸಹಿಸಲು ಸಾಧ್ಯವಿಲ್ಲ. ಸಂಗೊಳ್ಳಿ ರಾಯಣ್ಣ ಕಿತ್ತೂರು ರಾಣಿ ಚೆನ್ನಮ್ಮನಿಗೆ ಅಮ್ಮಾ ಎಂದು ಕರೆಯುತ್ತಿದ್ದ.. ಅದೇ ರೀತಿ ಚೆನ್ನಮ್ಮ ಕೂಡ ರಾಯಣ್ಣನನ್ನು ಮಗನೇ ಎಂದು ಕರೆಯುತ್ತಿದ್ದಳು. ಶಾಂತಿ-ಸಹಬಾಳ್ವೆಯಿಂದ ವಾಸ ಮಾಡುತ್ತಿರುವ ಈ ನಾಡಿನಲ್ಲಿ ಈ ಹೇಡಿಗಳು ಮಾಡಿರುವ ಕೆಲಸಕ್ಕೆ ಕ್ಷಮೆಯಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ರಾತ್ರಿ ಹೊತ್ತಿನಲ್ಲಿ ಹೋಗಿ ಸಂಗೊಳ್ಳಿ ರಾಯಣ್ಣ(Sangolli Rayanna)ನ ಪ್ರತಿಮೆ ಧ್ವಂಸ ಮಾಡಿರುವ ಹೇಡಿಗಳನ್ನು ಗಡಿಪಾರು ಮಾಡುವುದಷ್ಟೇ ಅಲ್ಲ, ಅವರು ಒಬ್ಬೊಬ್ಬರೇ ಸಿಕ್ಕರೆ ಗುಂಡಿಕ್ಕಿ ಸಾಯಿಸಬೇಕು. ಈ ರೀತಿಯ ಘಟನೆ ಮುಂದೆ ಎಂದಿಗೂ ನಡೆಯದಂತೆ ಕ್ರಮ ಕೈಗೊಳ್ಳಬೇಕಿದೆ. ಹೇಡಿಗಳಿಗೆ ತಕ್ಕಪಾಠ ಕಲಿಸುವ ಮೂಲಕ ಎಚ್ಚರಿಕೆ ನೀಡುವ ಅಗತ್ಯವಿದೆ ಎಂದು ಇದೇ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.  


ಇದನ್ನೂ ಓದಿ: ಎಂಇಎಸ್ ವಿರುದ್ಧ ಈ ಬಾರಿ ನಿರ್ಣಾಯಕ ಕ್ರಮ: ಗುಡುಗಿದ ಸಿಎಂ ಬೊಮ್ಮಾಯಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.