By-Election Results 2024: ಉಪಚುನಾವಣೆ ಫಲಿತಾಂಶ ಬೆನ್ನಲ್ಲೇ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ! ಮುಂದಿನ ರಾಜ್ಯಾಧ್ಯಕ್ಷ ಇವರೇ..!?
BJP State President: ರಾಜ್ಯ ಬಿಜೆಪಿ ʼಮನೆಯೊಂದು ಎರಡು ಬಾಗಿಲುʼ ಆಗಿರುವುದು ಎಲ್ಲರಿಗೂ ತಿಳಿದ ವಿಚಾರ. ಹಿಂದೂ ಫೈರ್ ಬ್ರಾಂಡ್ ಎಂದು ಕರೆಯಲ್ಪಡುವ ಬಸನಗೌಡ ಪಾಟೀಲ್ ಯತ್ನಾಳ್ ಈ ಹಿಂದೆ ಚಿಕ್ಕೋಡಿಯಲ್ಲಿ ಮಾತನಾಡಿ, `ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋಲಿರುವ ಬಗ್ಗೆ ರಾಜ್ಯಾಧ್ಯಕ್ಷರನ್ನು ಕೇಳಬೇಕು. ಅವರ ಬಿಜೆಪಿ ಪಕ್ಷದ ನೇತೃತ್ವವನ್ನು ಜನರು ಒಪ್ಪಿಸಿದ್ದಾರೆ ಇಲ್ಲೋ ಎಂಬುದು ಗೊತ್ತಿಲ್ಲ. ಬಿಜೆಪಿಗೆ ಹೀನಾಯ ಸೋಲು ನಿರೀಕ್ಷೆ ಮಾಡಿರಲಿಲ್ಲ` ಎಂದಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಮೂರು ಉಪಚುನಾವಣೆ ಸೋಲಿನ ಸುಳಿಯಲ್ಲಿ ಸಿಲುಕಿರುವ ರಾಜ್ಯ ಬಿಜೆಪಿಗೆ ಈಗ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡಲು ಬಲವಾದ ವಿಷಯ ಸಿಕ್ಕಂತಾಗಿದೆ. ಕಮಲ ಪಾಲಯದ ರೆಬೆಲ್ಸ್ ಇದೇ ವಿಚಾರವನ್ನಿಟ್ಟುಕೊಂಡು, ಹೈಕಮಾಂಡ್ ಬಳಿ ವರದಿ ಒಪ್ಪಿಸಲು ಸಕಲ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ಉಪಚುನಾವಣೆಯಲ್ಲಿ ಹಣದ ಹೊಳೆ ಹರಿಸಿ ಗೆದ್ದ ಕಾಂಗ್ರೆಸ್: ಪ್ರತಿಪಕ್ಷ ನಾಯಕ ಆರ್ ಅಶೋಕ ಆರೋಪ
ರಾಜ್ಯ ಬಿಜೆಪಿ ʼಮನೆಯೊಂದು ಎರಡು ಬಾಗಿಲುʼ ಆಗಿರುವುದು ಎಲ್ಲರಿಗೂ ತಿಳಿದ ವಿಚಾರ. ಹಿಂದೂ ಫೈರ್ ಬ್ರಾಂಡ್ ಎಂದು ಕರೆಯಲ್ಪಡುವ ಬಸನಗೌಡ ಪಾಟೀಲ್ ಯತ್ನಾಳ್ ಈ ಹಿಂದೆ ಚಿಕ್ಕೋಡಿಯಲ್ಲಿ ಮಾತನಾಡಿ, "ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋಲಿರುವ ಬಗ್ಗೆ ರಾಜ್ಯಾಧ್ಯಕ್ಷರನ್ನು ಕೇಳಬೇಕು. ಅವರ ಬಿಜೆಪಿ ಪಕ್ಷದ ನೇತೃತ್ವವನ್ನು ಜನರು ಒಪ್ಪಿಸಿದ್ದಾರೆ ಇಲ್ಲೋ ಎಂಬುದು ಗೊತ್ತಿಲ್ಲ. ಬಿಜೆಪಿಗೆ ಹೀನಾಯ ಸೋಲು ನಿರೀಕ್ಷೆ ಮಾಡಿರಲಿಲ್ಲ" ಎಂದಿದ್ದಾರೆ.
ಕರ್ನಾಟಕದಲ್ಲಿ ಒಳ ಒಪ್ಪಂದದಿಂದ ಭಾಜಪಾಗೆ ಈ ಸ್ಥಿತಿ ಬರುತ್ತಿದೆ ಎಂಬುದು ಅನೇಕರ ವಾದ. ಬಿಜೆಪಿ ಹೈಕಮಾಂಡ್ ರಾಜ್ಯ ಉಸ್ತುವಾರಿಯನ್ನು ಪ್ರಾಮಾಣಿಕ ಹಾಗೂ ಸಂಸ್ಕಾರ ಇದ್ದವರು ನೇಮಕ ಮಾಡಲಿ ಎಂದು ಅರುಣ್ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಯತ್ನಾಳ್, "ಅರುಣ್ ಸಿಂಗ್ ಅವರು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಸಂದೇಶ ವಾಹಕನಾಗಿ ಕೆಲಸ ಮಾಡುತ್ತಿದ್ದಾರೆ. ವಿಜಯೇಂದ್ರ ಮಾಡಿದ್ದು ಜನರು ತಿರಸ್ಕಾರ ಮಾಡಿದ್ದಾರೆ.ಇನ್ನಾದರೂ ಬಿಜೆಪಿ ಹೈಕಮಾಂಡ್ ಪೂಜ್ಯ ತಂದೆ ಪೂಜ್ಯ ಪುತ್ರ ವ್ಯಾಮೋಹ ಬಿಡಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಮಹಾರಾಷ್ಟ್ರದಲ್ಲಿ ಶಿವಸೇನೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎನ್ನುತ್ತಿದ್ದರು. ಅಂದು ಉದ್ದವ ಠಾಕ್ರೆ ಔರಂಗಜೇಬ್ ಸಮಾಧಿಗೆ ನಮಸ್ಕಾರ ಮಾಡಿದ್ದರಿಂದ ಮಹಾರಾಷ್ಟ್ರ ಜನರು ಅವರ ರಾಜಕೀಯ ಭವಿಷ್ಯವನ್ನೇ ಮುಗಿಸಿದರು. ಮಹಾರಾಷ್ಟ್ರದಲ್ಲಿ ಬಿಜೆಪಿ ಪಕ್ಷ ಅಭೂತಪೂರ್ವ ಸಾಧನೆ ಮಾಡಿದೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಹೀನಾಯ ಸೋಲಿಗೆ ಪೂಜ್ಯ ತಂದೆ ಪೂಜ್ಯ ಪುತ್ರ ಕಾರಣ" ಎಂದು ನೇರವಾಗಿ ಬಿಎಸ್ ಯಡಿಯೂರಪ್ಪ ಹಾಗೂ ಬಿ ವೈ ವಿಜಯೇಂದ್ರ ವಿರುದ್ದ ಕೆಂಡಕಾರಿದ್ದಾರೆ.
ಇದನ್ನೂ ಓದಿ: Astro Tips: ಮನೆಯಲ್ಲಿ ಪದೇ ಪದೇ ಈ ಸಮಯದಲ್ಲಿ ಜಗಳವಾದರೆ ಏನರ್ಥ ಗೊತ್ತಾ..?
ಮೂಲಗಳ ಪ್ರಕಾರ ರಾಜ್ಯ ಬಿಜೆಪಿ ಪರಿಸ್ಥಿತಿ, ಚುನಾವಣೆ ನಿರ್ವಹಣೆ, ಸಂಘಟನೆ ಹಾಗೂ ಇನ್ನಿತರೆ ಪಕ್ಷದ ಆಂತರಿಕ ವಿಚಾರಗಳನ್ನ ಮತ್ತೊಮ್ಮೆ ಬಿಜೆಪಿ ಹೈ ಕಮಾಂಡ್‌ಗೆ ಯತ್ನಾಳ್ ಹಾಗೂ ಇನ್ನಿತರ ಬಿಜೆಪಿ ಸದಸ್ಯರು ವಿವರಣೆ ನೀಡಲಿದ್ದಾರೆ. ಯತ್ನಾಳ್ ಒತ್ತಾಯಕ್ಕೆ ಹೈ ಕಮಾಂಡ್ ಅಸ್ತು ಎನ್ನುತ್ತಾ? ಕಾದುನೋಡಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.