ವಿಜಯಪುರ : ರಾಜ್ಯ ಸರ್ಕಾರದ ಜನಪ್ರೀಯ ಕಾರ್ಯಕ್ರಮಗಳಾದ ತಾಳಿ ಭಾಗ್ಯ ಬೇಡ, ಅನ್ನ ಭಾಗ್ಯ ಬೇಡ, ಬಂದ್ ಮಾಡಿ ಇವು ದರಿದ್ರ ಯೋಜನೆಗಳು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಯತ್ನಾಳ್‌, ಅನಭಾಗ್ಯ ಯೋಜನೆ ಜನರನ್ನ ದರಿದ್ರ ಮಾಡುತ್ತೆ. ಈ ಯೋಜನೆಗಳನ್ನ ಬಂದ್ ಮಾಡಿ. ಯೋಜನೆ ಬಂದ್ ಮಾಡಲು ಧೈರ್ಯ ಮಾಡಿ ಆಗಿದ್ದಾಗಲಿ. ದೇವರ ಹಿಪ್ಪರಗಿ ಶಾಸಕರ ಮೇಲೆ ಸಿಎಂ ಗೆ ಲವ್ ಇದೆ ಎಂದು ಚಟಾಕಿ ಹಾರಿಸಿದರು.


ಇದನ್ನೂ ಓದಿ : ‘ಭ್ರಷ್ಟಾಚಾರ, ಸಾಕ್ಷಿ ನಾಶ, ಹಸ್ತಕ್ಷೇಪ ಮಾಡುವುದೆಲ್ಲ ‘ಹಸ್ತ’ ಗುರುತಿನ ಪಕ್ಷದವರ ಕಲೆ’


ಯತ್ನಾಳ್ ಭಾಷಣಕ್ಕೆ  ಕೈ ಮುಗಿದ ಸಿಎಂ : 


ಕಾರ್ಯಕ್ರಮದಲ್ಲಿ ಮುಂದುವರೆದು ಶಾಸಕ ಯತ್ನಾಳ್, ಮತ್ತೆ ಬೊಮ್ಮಾಯಿಯವರೇ ಸಿಎಂ ಆಗಲು ನಮ್ಮ ತಕರಾರು ಇಲ್ಲ. ನಮ್ದೇನಾದ್ರು ತಕರಾರು ಇದೆಯಾ ಅಂತ ತಿಳ್ಕೊಂಡ್ರಾ ಎಂದು ವೇದಿಕೆಯಲ್ಲಿ ಸಿಎಂರನ್ನ ಪ್ರಶ್ನಿಸಿದರು. ಇದಕ್ಕೆ ಸಿಎಂ ಬೊಮ್ಮಾಯಿ ಅವರು ವೇದಿಕೆಯ ಮೇಲೆ ಯತ್ನಾಳ್ ಕಡೆಗೆ ನೋಡಿ ಕೈಮುಗಿದರು. ನಾವು ತಕರಾರು ಮಾಡೋ ಮಕ್ಕಳಲ್ಲ. ನಾನು ಏನೋ ಅಗೋಲ್ಲ ಅಂತಾದ ಮೇಲೆ ತಕರಾರು ಯಾಕೆ ಮಾಡಲಿ ಎಂದರು. ಇದಕ್ಕೆ ಸಿಎಂ ನಸುನಕ್ಕು ಸುಮ್ಮನಾದರು.


ನಿಯತ್ತಿಂದ ಜನರ ಸೇವೆ ಮಾಡೋಣ. ಬರೀ ತಿಂದು ತಿಂದು.. ನಮ್ಮ ಮಕ್ಕಳು ಮರಿ ಮೊಮ್ಮಕ್ಕಳು ಹೇಗೆ ಹುಟ್ತಾವೆ ಗೊತ್ತಿಲ್ಲ. ಅಂಗವಿಕಲ, ಹುಚ್ಚು ಹುಟ್ತಾವೋ ಗೊತ್ತಿಲ್ಲ. ರೈತರ ಹೆಸರಲ್ಲಿ ತಿನ್ನುವುದು, ರೈತರಿಗಾಗಿ ಪ್ರಾಣ ಕೊಡ್ತೀನಿ ಅಂತಾರೆ. ಪ್ರಾಣ ಕೊಡಬೇಡ ರೊಕ್ಕಾ ತಿನ್ನಬೇಡಿ ಎಂದು ಹೇಳಿದರು. 


ಇದನ್ನೂ ಓದಿ : PSI Recruitment Scam: ಆರೋಪಿ ದಿವ್ಯಾ ಹಾಗರಗಿ ಜೊತೆ ಡಿಕೆಶಿ ಫೋಟೋ ವೈರಲ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.