CT Ravi : ಚಡ್ಡಿ ಸುಡುವ ಅಭಿಯಾನಕ್ಕೆ ಕೆಂಡಾಮಂಡಲರಾದ ಕಮಲ ನಾಯಕರು..!
ಸಿ.ಟಿ.ರವಿ ಕಾಂಗ್ರೆಸ್ ನವರಿಗೆ ಮಾಡಲು ಕೆಲಸವಿಲ್ಲ, ಕಾಂಗ್ರೆಸ್ ನವರು ಇಂತಃ ಕೆಲಸವನ್ನ ಸದಾ ಮಾಡಿಕೊಂಡಿರಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರು: RSS ಸಾಧನೆ ಬಗ್ಗೆ ಚರ್ಚೆಯಾಗಲಿ ಎಂಬ ವಿ.ಎಸ್ ಉಗ್ರಪ್ಪ ಹೇಳಿಕೆಗೆ ಬಿಜೆಪಿ ನಾಯಕರು ಪ್ರತಿ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ನಾಯಕ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿಕೆಗೆ ಬಿಜೆಪಿ ನಾಯಕ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು ಚರ್ಚೆ ಮಾಡೋದಾದ್ರೆ ವೇದಿಕೆ ರೂಪಿಸಲಿ, ಚರ್ಚೆ ಮಾಡಲು ನಾವು ಸದಾ ಸಿದ್ಧ ಎಂದಿದ್ದಾರೆ. ಆದ್ರೆ ಈ ಚರ್ಚೆಗೆ ಸಂಘ ಏನು ಬರೋದಿಲ್ಲ ನಾವೇ ಬರ್ತೀವಿ ಎಂದಿದ್ದಾರೆ. ಆರ್ ಎಸ್ ಎಸ್ ಸಂಘಟನೆ ತನ್ನ ಕೆಲಸ ಹೇಳಿಕೊಳ್ಳುವ ಸ್ವಭಾವಕ್ಕೆ ಬರೋದಿಲ್ಲ. ತನ್ನ ಕಾರ್ಯದ ಮೂಲಕ ತನ್ನ ಸಂಘಟನೆಯ ಕೆಲಸವನ್ನ ಹೇಳುತ್ತೆ ಎಂದಿದ್ದಾರೆ. ಅಲ್ಲದೇ ಮಾಜಿ ಸಂಸದರಾದ ಉಗ್ರಪ್ಪನವರಿಗೆ ಒಂದು ಪುಸ್ತಕ ಕಳಿಸಿಕೊಡುತ್ತೇನೆ, ಅದನ್ನ ಅವರು ಓದಿಕೊಳ್ಳಲಿ. ಅವರಿಗೇನಾದ್ರೂ ಸಂಶಯ ಬಂದ್ರೆ ಚರ್ಚೆಗೆ ಬರಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಹಿರಂಗ ಸವಾಲು ಹಾಕಿದ್ದಾರೆ.
ರಾಜ್ಯದ ಹಲವೆಡೆ ಚಡ್ಡಿ ಸುಡುತ್ತಿರುವ ಪ್ರತಿಭಟನೆ ಬಗ್ಗೆ ಮಾತನಾಡಿದ ಸಿ.ಟಿ.ರವಿ ಕಾಂಗ್ರೆಸ್ ನವರಿಗೆ ಮಾಡಲು ಕೆಲಸವಿಲ್ಲ, ಕಾಂಗ್ರೆಸ್ ನವರು ಇಂತಃ ಕೆಲಸವನ್ನ ಸದಾ ಮಾಡಿಕೊಂಡಿರಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ರಾಜ್ಯದ ಎಲ್ಲ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಸಿ.ಟಿ.ರವಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಅವರಿಗೆ ಚಡ್ಡಿಗಳ ಕೊರತೆ ಆಗದಂತೆ ನೋಡಿಕೊಳ್ಳಿ, ಅಷ್ಟೆ ಅಲ್ಲ ಎಲ್ಲ ಹಳೆಯ ಚಡ್ಡಿಗಳನ್ನ ಕಳಿಸಿಕೊಂಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಸಿ.ಟಿ.ರವಿ ಮನವಿ ಮಾಡಿದ್ದಾರೆ. ಇತ್ತ ಕಾಂಗ್ರೆಸ್ ಚಡ್ಡಿ ಸುಡುವ ಅಭಿಯಾನ ಮುಂದುವರಿದಿದೆ. ಗ್ರಾಮ ಗ್ರಾಮಗಳಲ್ಲೂ ಚಡ್ಡಿ ಸುಡುವ ಅಭಿಯಾನಕ್ಕೆ ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ. ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ಕಿಡಿಕಾರಿದ್ದಾರೆ.
ಇದನ್ನೂ ಓದಿ : KPCC ಕಚೇರಿಗೆ ಹಳೆ ಚಡ್ಡಿಗಳನ್ನು ಕೊರಿಯರ್ ಮಾಡಿದ RSS ಮುಖಂಡರು!
ಅಲ್ಲದೇ ಬಿಜೆಪಿ ಹಾಗೂ ಆರ್ ಎಸ್ ಎಸ್ ಸಂಬಂಧ ಹೇಗಿದೆ ಅನ್ನೋದನ್ನು ಸಹ ಬಿಜೆಪಿ ಮುಖಂಡರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಬಾಗಲಕೋಟೆಯಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಬಿಜೆಪಿ ಆರ್ ಎಸ್ ಎಸ್ ಸಂತಾನ ಎನ್ನುವ ಮೂಲಕ ಬಿಜೆಪಿಗೂ ಆರ್ ಎಸ್ ಎಸ್ ಗೂ ಎಂತ ಸಂಬಂಧವಿದೆ ಅನ್ನೋದನ್ನ ಸಾರ್ವಜನಿಕ ಸಭೆಯಲ್ಲಿ ಬಹಿರಂಗ ಪಡಿಸಿದ್ದಾರೆ. ಒಟ್ಟಾರೆ ಸರ್ಕಾರದ ಪಠ್ಯ ಪುಸ್ತಕದ ಎಡವಟ್ಟು ಸರ್ಕಾರಕ್ಕೆ ಒಂದೆಡೆ ಮುಜುಗರ ತಂದಿದ್ರೆ, ಮತ್ತೊಂದೆಡೆ ಹೋರಾಟವನ್ನ ತೀವ್ರಗೊಳಿಸಿದೆ. ಈ ನಡುವೆ ಹಲವು ಸಂಘಟನೆಗಳು ಸಹ ಬಿಜೆಪಿ ಸರ್ಕಾರದ ನಡೆ ಬಗ್ಗೆ ಚಳವಳಿಯನ್ನ ರೂಪಿಸಿವೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಹೋರಾಟದ ಮುಂಚೂಣಿಯಲ್ಲಿದ್ದು, ಸರ್ಕಾರದ ನೀತಿಗಳನ್ನ ಉಗ್ರವಾಗಿ ಖಂಡಿಸುತ್ತಿದೆ. ಈ ನಡುವೆ ಚಡ್ಡಿ ಸುಡುವ ಅಭಿಯಾನಕ್ಕೆ ಬಿಜೆಪಿ ಮುಖಂಡರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ