ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿರಿಯ ಶಾಸಕರು ಹಾಗೂ ಕೇಂದ್ರದಲ್ಲಿ ಮಂತ್ರಿಯಾಗಿದ್ದಂತವರು ಈಗ ಅವರು ನೀಡಿರುವ ಹೇಳಿಕೆ ಬೇಜಾಬ್ದಾರಿ ಹೇಳಿಕೆಯಲ್ಲ,ಅದು ಜವಾಬ್ದಾರಿಯುತವಾಗಿ ನೀಡಿರುವ ಹೇಳಿಕೆ ಎಂದು ವಿಧಾನಪರಿಷತ್ ವಿಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಅವರು ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಈಗಾಗಲೇ ಕಾಂಗ್ರೆಸ್ ಪಕ್ಷವು ಈ ವಿಚಾರವಾಗಿ ಹಲವು ಬಾರಿಗೆ ಸಾರ್ವಜನಿಕರ ಮುಂದಿಟ್ಟಿದೆ, ಜಗತ್ತಿನ ಅತ್ಯಂತ ಶ್ರೀಮಂತ ಪಕ್ಷವಾಗಿರುವ ಬಿಜೆಪಿ ಮತ್ತು ಅದರ ಸೂತ್ರದಾರರಾಗಿರುವ ಆರೆಸೆಸ್ಸ್ ಕೂಡ ಶ್ರೀಮಂತ ಎನ್ಜಿಒ ಎಂದು ಈಗಾಗಲೇ ಸ್ಪಷ್ಟವಾಗಿದೆ.ಇಷ್ಟೊಂದು ಹಣ ಬರಬೇಕಾದರೆ ಎಲ್ಲರಲ್ಲಿಯೂ ಈ ಹಣ ಎಲ್ಲಿಂದ ಬರುತ್ತದೆ ಎನ್ನುವ ಸಂಶಯವಿದೆ ಎಂದು ಅವರು ಹೇಳಿದರು.


ಇದನ್ನು ಓದಿ: Delhi-Meerut RRTS: ರೆಡಿಯಾಯ್ತಯು ದೇಶದ ಅತಿ ವೇಗದ ರೈಲು! ಫಸ್ಟ್ ಲುಕ್ ಇಲ್ಲಿದೆ ನೋಡಿ


ಇದೇ ವೇಳೆ ಯತ್ನಾಳ್ ಹೇಳಿಕೆ ಪ್ರತಿಕ್ರಿಯಿಸುತ್ತಾ ಸಿಎಂ ಸ್ಥಾನಕ್ಕಾಗಿ ಎರಡುವರೆ ಸಾವಿರ ಕೋಟಿ ಕೇಳಿರುವುದು ಕರ್ನಾಟಕ ರಾಜ್ಯ ತಲೆ ತಗ್ಗಿಸುವಂತದ್ದು ಮಾತ್ರವಲ್ಲ, ಜೊತೆಗೆ ಇದು ಸಂವಿಧಾನ, ಪ್ರಜಾಪ್ರಭುತ್ವ ಗಾಳಿಗೆ ತೂರಿ ಬಿಜೆಪಿಯವರು ಹಣದ ಮೇಲೆ ರಾಜಕಾರಣ ಮಾಡ್ತಿರೋದು ಸ್ಪಷ್ಟವಾಗಿ ಕಾಣ್ತಿದೆ ಎಂದು ಹರಿಪ್ರಸಾದ್ ಅವರು ಟೀಕಿಸಿದರು.


ಇನ್ನು ಮುಂದುವರೆದು ಧರ್ಮದ ಮೇಲೆ, ಹಣದ ಮೇಲೆ ರಾಜಕೀಯ ನಡೆಸುವುದು ಬಿಜೆಪಿಯ ಚುನಾವಣ ಕಾರ್ಯತಂತ್ರವಾಗಿದೆ.ಈಗ ಹಣ ಕೇಳಿದ್ದು ಯಾರು? ಎಂದು ಕೂಡಲೇ ಯತ್ನಾಳ್ ಅವ್ರು ಸ್ಪಷ್ಟಪಡಿಸಬೇಕು.ಅಮಿತ್ ಶಾ ಕೇಳಿದ್ದಾ? ಮೋಹನ್ ಭಾಗವತ್ ಕೇಳಿದ್ದಾ? ನಡ್ಡಾ ಕೇಳಿದ್ದಾ? ಇಲ್ಲ ಮೋದಿ ಅವ್ರು ಕೇಳಿದ್ದಾ? ಎನ್ನುವುದನ್ನು ಅವರು ತಿಳಿಸಬೇಕು ಎಂದು ಹರಿಪ್ರಸಾದ್ ಒತ್ತಾಯಿಸಿದರು.


ಇದನ್ನು ಓದಿ:'ಕೆಜಿಎಫ್' ಮುಟ್ಟಿದ್ದೆಲ್ಲಾ ಚಿನ್ನ: ಭಾರತದ ನಂ.1 ಚಿತ್ರವಾಗಲು ಒಂದೇ ಹೆಜ್ಜೆ ಬಾಕಿ..!


ಇದೆ ವೇಳೆ ಯತ್ನಾಳ್ ಅವರು ನೀಡಿರುವ ಹೇಳಿಕೆ ವಿಚಾರವಾಗಿ ರಾಜ್ಯಪಾಲರು ತನಿಖೆಗೆ ಆದೇಶಿಸಬೇಕು ಎಂದು ಅವರು ಆಗ್ರಹಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.