ಬೆಂಗಳೂರು: ಬಿಜೆಪಿ ಯುವ ಮುಖಂಡ ವಿನಯ್ ಕಿಡ್ನಾಪ್ ಯತ್ನ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿಚಾರಣೆಗೆ ನೋಟಿಸ್ ನೀಡಿದ್ದು ಬಿಎಸ್ವೈ ವಿಚಾರಣೆಗೆ ಹಾಜರಾಗಬೇಕಿದೆ. ಆದರೆ ಬಿಎಸ್ವೈ ಗೆ ಇವತ್ತು ಉತ್ತರ ಕರ್ನಾಟಕ ಪ್ರವಾಸ ನಿಗದಿಯಾಗಿದ್ದು ವಿಚಾರಣೆಗೆ ಹಾಜರಾಗುವರೆ ಎಂಬುದನ್ನು ಕಾದು ನೋಡಬೇಕಿದೆ.


COMMERCIAL BREAK
SCROLL TO CONTINUE READING

ವಿನಯ್ ಅಪಹರಣ ಪ್ರಕರಣದಲ್ಲಿ ಬಿಎಸ್ವೈ ಪಿಎ ಸಂತೋಷ್ ಕೈವಾಡ ಇದ್ದು ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸುವಂತೆ ಮಲ್ಲೇಶ್ವರಂ ಎಸಿಪಿ ಎ.ಆರ್. ಬಡಿಗೇರ್ ಯಡಿಯೂರಪ್ಪ ಅವರಿಗೆ ನೋಟೀಸ್ ನೀಡಿದ್ದರು. 


ಜುಲೈ 15ರಂದು ಸಂತೋಷ್ ಗಾಗಿ ಯಡಿಯೂರಪ್ಪ ಅವರ ಮನೆಯಲ್ಲಿ ಶೋಧ ನಡೆಸಲಾಗಿತ್ತು. ನಂತರ ಜುಲೈ 17 ರಂದು ಬಿಎಸ್ವೈ ಸಂತೋಷ್ ನಿರಪರಾಧಿ, ಆತನನ್ನು ವಿನಾಕಾರಣ ಈ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ ಎಂದು ನಗರ ಕಮಿಷನರ್ ಗೆ ಪತ್ರ ಬರೆದಿದ್ದರು.