ಬಿಜೆಪಿ, ಬಜರಂಗದಳ, ಆರೆಸ್ಸೆಸ್ಸನವರೇ ಉಗ್ರಗಾಮಿಗಳು : ಸಿದ್ದರಾಮಯ್ಯ
ಆರ್ ಎಸ್ಎಸ್ ಆಗಲಿ, ಪಿಎಫ್ಐ ಆಗಲಿ ಯಾವುದೇ ಸಂಘಟನೆಯಾದರೂ ರಾಜ್ಯದಲ್ಲಿ ಶಾಂತಿಗೆ ಭಂಗ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ
ಚಾಮರಾಜನಗರ: ಬಿಜೆಪಿ, ಬಜರಂಗದಳ, ಆರೆಸ್ಸೆಸ್ಸನವರೇ ಉಗ್ರಗಾಮಿಗಳು. ಅವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ತೀವ್ರ ವಾಗ್ದಾಳಿ ನಡೆಸುವ ಮೂಲಕ ವಿವಾದದ ಕಿಡಿಹೊತ್ತಿಸಿದ್ದಾರೆ.
ಚಾಮರಾಜನಗರದಲ್ಲಿ ಏರ್ಪಡಿಸಿದ್ದ ಸಾಧನಾ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಗವಳ್ಳಿ ಹೆಲಿಪ್ಯಾಡ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಆರ್ ಎಸ್ಎಸ್ ಆಗಲಿ, ಪಿಎಫ್ಐ ಆಗಲಿ ಯಾವುದೇ ಸಂಘಟನೆಯಾದರೂ ರಾಜ್ಯದಲ್ಲಿ ಶಾಂತಿಗೆ ಭಂಗ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ದೀಪಕ್ ರಾವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಫ್ಐ ಸಂಘಟನೆ ಸದಸ್ಯರ ಹೆಸರನ್ನು ಕೇಳಿಬರುತ್ತಿದೆ. ಪಿಎಫ್ ಐ ಸಂಘಟನೆಯನ್ನು ನಿಷೇಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಬಿಜೆಪಿ, ಆರ್ ಎಸ್ ಎಸ್, ಬಜರಂಗದಳದವರು ಕೂಡಾ ಒಂಥರ ಉಗ್ರಗಾಮಿಗಳೇ, ಈ ಸಂಘಟನೆಗಳನ್ನೂ ನಿಷೇಧಿಸಬೇಕಲ್ಲಾ ಎಂಬುದಾಗಿ ಪ್ರಶ್ನಿಸಿದರು.