ಡಿಕೆಶಿಗೆ ಹುಟ್ಟುಹಬ್ಬದ ಕೇಕ್ ತಿನ್ನಿಸದ ಪ್ರಿಯಾಂಕಾ ಗಾಂಧಿ: ಬಿಜೆಪಿ ವ್ಯಂಗ್ಯ
ಡಿಕೆಶಿಯವರೇ ಅವರ ಕೈಗೆ ಬಂದ ತುತ್ತು, ನಿಮ್ಮ ಬಾಯಿಗೆ ಬರುವುದಿಲ್ಲ. ಈ ಸತ್ಯವನ್ನು ಈಗಲಾದರೂ ಅರಿತುಕೊಳ್ಳಿ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹುಟ್ಟುಹಬ್ಬದ ಕೇಕ್ ತಿನ್ನಿಸದ ವಿಡಿಯೋ ಹಂಚಿಕೊಂಡಿರುವ ಬಿಜೆಪಿ ವ್ಯಂಗ್ಯವಾಡಿದೆ. #ಅಸಹಾಯಕಡಿಕೆಶಿ ಹ್ಯಾಶ್ ಟ್ಯಾಗ್ ಬಳಸಿ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಟೀಕಾಪ್ರಹಾರ ನಡೆಸಿದೆ.
‘ನೀವೆಷ್ಟೇ ಗುಲಾಮಗಿರಿ, ಚಮಚಾಗಿರಿ ಮಾಡಿದರೂ ನಕಲಿ ಗಾಂಧಿಗಳು ನಿಮ್ಮನ್ನು ಇಡುವಲ್ಲಿಯೇ ಇಡುತ್ತಾರೆ. ಹೈಕಮಾಂಡ್ ಮಟ್ಟದಲ್ಲಿ ಟ್ರಬಲ್ ಶೂಟರ್ ಎನಿಸಿಕೊಂಡಿರುವ ಡಿಕೆಶಿಯವರ ಹುಟ್ಟುಹಬ್ಬದ ಕೇಕ್ ತಿನ್ನಿಸುವಷ್ಟೂ ಪ್ರಿಯಾಂಕ ಗಾಂಧಿಗೆ ಸೌಜನ್ಯವಿಲ್ಲ. ಮತ್ತೊಬ್ಬರ ಕೈಯಲ್ಲಿ ಕೇಕ್ ತಿನ್ನಿಸುವ ಪ್ರಮೇಯವೇನಿತ್ತು?’ ಎಂದು ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: Vegetable Price: ವಾತಾವರಣದಲ್ಲಿ ಬದಲಾವಣೆ: ತರಕಾರಿ ಬೆಲೆ ಮೇಲೆ ಪ್ರಭಾವ ಬೀರಿದೆಯೇ!
Sunny Leone: ಮಂಡ್ಯ ಫ್ಯಾನ್ಸ್ ಅಭಿಮಾನಕ್ಕೆ ಫಿದಾ ಆದ್ರು ಸನ್ನಿ ಲಿಯೋನ್: ಟ್ವೀಟ್ ಮಾಡಿದ್ದೇನು ಗೊತ್ತಾ!
ಎಂ.ಬಿ.ಪಾಟೀಲ್ ಸಿಡಿದೆದ್ದಿದ್ದು, ಸಿದ್ದರಾಮಯ್ಯ & ಬಣದ ಇತ್ತೀಚೆಗಿನ ನಡೆ, ಕೆಪಿಸಿಸಿ ಕಚೇರಿಯಲ್ಲಿ ಭ್ರಷ್ಟಾಚಾರದ ಆರೋಪ ಇದೆಲ್ಲವೂ ಡಿಕೆಶಿಯವರನ್ನು ಹರಕೆಯ ಕುರಿ ಮಾಡುವ ತಂತ್ರ. ಈ ಎಲ್ಲ ಘಟನೆಗಳು ಏನೋ ಮುನ್ಸೂಚನೆ ನೀಡುತ್ತಿರುವುದು ನಿಜವಲ್ಲವೇ?’ ಎಂದು ಬಿಜೆಪಿ ಪ್ರಶ್ನಿಸಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.