ಶಾಮನೂರು ಶಿವಶಂಕರಪ್ಪರನ್ನು ಹತ್ತಿಕ್ಕಲು ಶಿಷ್ಯಕೋಟೆಯನ್ನು ಛೂಬಿಟ್ಟಿರುವ ಸಿದ್ದರಾಮಯ್ಯ: ಬಿಜೆಪಿ
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಶಿಷ್ಯಕೋಟೆಯನ್ನು ಶಾಮನೂರು ಶಿವಶಂಕರಪ್ಪ ಹಾಗೂ ವೀರಶೈವ ಲಿಂಗಾಯತರನ್ನು ಹತ್ತಿಕ್ಕಲು ಬಿಟ್ಟಿದ್ದಾರೆ. ಕುರ್ಚಿಗೆ ಆಪತ್ತು ಬಂದಾಗ ಸಿದ್ದರಾಮಯ್ಯ ಅವರು ಮಾತನಾಡುವುದಿಲ್ಲ ಮಾತನಾಡುವುದು ಅವರ ವಂದಿ ಮಾಗಧರು..! ಎಂದು ಬಿಜೆಪಿ ಟೀಕಿಸಿದೆ.
ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಹೈಕಮಾಂಡ್ ಮಾತಿಗೂ ಬಗ್ಗುವುದಿಲ್ಲ ಹೀಗಾಗಿ ಅವರನ್ನು ಅವಮಾನಿಸುವ ಮೂಲಕ ಸೈಲೆಂಟ್ ಮಾಡಿಸಬೇಕೆಂದು ಸಿಎಂ ಸಿದ್ದರಾಮಯ್ಯನವರು ತಮ್ಮ ಆಪ್ತ ಬಳಗವನ್ನು ಛೂ ಬಿಟ್ಟಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಲಿಂಗಾಯತ ಅಧಿಕಾರಗಳದ್ದು ನಾಯಿಪಾಡಾಗಿದೆ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ‘ಕೈ’ನಾಯಕರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಮಾನ ಮರ್ಯಾದೆ ಇದೆಯಾ ಎಂದು ಬೇಲೂರು ಗೋಪಾಲಕೃಷ್ಣ ಹಗುರವಾದ ಮಾತುಗಳನ್ನಾಡಿದ್ದಾರೆ. ಪಕ್ಷದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆಂದು ಸಂತೋಷ್ ಲಾಡ್ ಟೀಕಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಲಿಂಗಾಯತರಿಂದಲ್ಲ, ಅಲ್ಪಸಂಖ್ಯಾತರಿಂದ ಎಂದು ಪ್ರಕಾಶ್ ರಾಥೋಡ್ ಅವರಿಂದ ಸಮುದಾಯಕ್ಕೆ ಅಪಮಾನ. ಸಚಿವ ಸಂಪುಟ ಸಭೆಯಲ್ಲಿ ಹೆಚ್.ಸಿ.ಮಹಾದೇವಪ್ಪರಿಂದ ವೀರಶೈವ ಲಿಂಗಾಯತ ಅಧಿಕಾರಿಗಳನ್ನು ಟಾರ್ಗೆಟ್ ಮಾಡುವ ಬೆದರಿಕೆ. ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆಂದು ಹಿರಿಯರು ಎನ್ನದೆ ಕೊತ್ತೂರು ಮಂಜುನಾಥ್ ಅವರಿಂದ ಅವಮಾನ’ವೆಂದು ಬಿಜೆಪಿ ಕುಟುಕಿದೆ.
ಇದನ್ನೂ ಓದಿ: ಸಾರಿಗೆ ಇಲಾಖೆಯ 148 ಹೊಸ ಬಸ್‌ಗಳಿಗೆ ಸಿಎಂ ಸಿದ್ದು ಚಾಲನೆ
ವೀರಶೈವ - ಲಿಂಗಾಯತ ಸಮುದಾಯವನ್ನೇ ಕೀಳಾಗಿ ನೋಡಲಾಗುತ್ತಿದೆ’ ಎಂದು ಬಿಜೆಪಿ ಕುಟುಕಿದೆ.
ಇದನ್ನೂ ಓದಿ: Murder Case: ವ್ಯಕ್ತಿಯನ್ನು ಕೊಂದು ಗೋಣಿ ಚೀಲದಲ್ಲಿ ತುಂಬಿ ಕೃಷ್ಣಾ ನದಿಗೆ ಹಾಕಿದ ಹಂತಕರು!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.