ಬೆಂಗಳೂರು: ಹಿಂದಿ ಹೇರಿಕೆ ವಿರುದ್ಧ ಇದೀಗ ವ್ಯಾಪಕ ಚರ್ಚೆಯಾಗುತ್ತಿದೆ. ನಟ ಕಿಚ್ಚ ಸುದೀಪ್ ಹಿಂದಿ ರಾಷ್ಟ್ರಭಾಷೆಯಲ್ಲವೆಂದು ಹೇಳಿದ್ದಕ್ಮೆ ಬಾಲಿವುಡ್ ನಟ ಅಜಯ್ ದೇವಗನ್ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದರು. ಹಿಂದಿ ರಾಷ್ಟ್ರಭಾಷೆ, ಹಿಂದಿ ರಾಷ್ಟ್ರಭಾಷೆಯಲ್ಲದಿದ್ದರೆ ನೀವೇಕೆ ಕನ್ನಡ ಸಿನಿಮಾಗಳನ್ನು ಹಿಂದಿಯಲ್ಲಿ ಡಬ್ ಮಾಡುತ್ತೀರಿ ಎಂದು ಅವರು ಪ್ರಶ್ನಿಸಿದ್ದರು. ಇದಕ್ಕೆ ‘ಕಿಚ್ಚ’ ತಮ್ಮ ಸ್ಟೈಲ್‍ನಲ್ಲಿಯೇ ಬಾಲಿವುಡ್ ನಟನಿಗೆ ತಿರುಗೇಟು ನೀಡಿದ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಕನ್ನಡ ಚಿತ್ರರಂಗದ ನಟ-ನಟಿಯರು ಸುದೀಪ್‍ಗೆ ಬೆಂಬಲ ವ್ಯಕ್ತಪಡಿಸಿದ್ದರು.


COMMERCIAL BREAK
SCROLL TO CONTINUE READING

ಹಿಂದಿ ಹೇರಿಕೆ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು. ಬಿಜೆಪಿ ನಾಯಕರೇ ಅಮಿತ್ ಶಾ ಗುಲಾಮರಾಗಬೇಡಿ, ಕನ್ನಡ ತಾಯಿಯ ಮಕ್ಕಳಾಗಿ ಎಂದು ಹೇಳಿಕೆ ನೀಡಿದ್ದರು. ಇದೀಗ ಸಿದ್ದರಾಮಯ್ಯರ ಈ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದ್ದು, ‘ನಿಮ್ಮ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಯುವರಾಜ ರಾಹುಲ್ ಗಾಂಧಿ ಕನ್ನಡ ಮಾತನಾಡುತ್ತಾರೆಯೇ?’ ಎಂದು ಪ್ರಶ್ನಿಸಿದೆ.


MB Patil : ಅಜಯ ದೇವಗನ್‌ ಗೆ ತಿಳುವಳಿಕೆ ಇಲ್ಲ : ಸುದೀಪ್‌ಗೆ ಸಾತ್ ನೀಡಿದ ಎಂಬಿ ಪಾಟೀಲ್


‘#ನಾಡದ್ರೋಹಿಕಾಂಗ್ರೆಸ್ ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಕನ್ನಡವೂ ಸೇರಿದಂತೆ ಎಲ್ಲಾ ರಾಜ್ಯ ಭಾಷೆಗಳ ಮೇಲೆ ಹಿಂದಿ ಹೇರಿಕೆ ಆರಂಭಿಸಿದ್ದು ಯಾರು? ಯಾರು ಅಧಿಕಾರದಲ್ಲಿದ್ದಾಗ ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆ ವಿರುದ್ಧ ಹೋರಾಟ ಆರಂಭವಾಯ್ತು? ಗಾಜಿನ ಮನೆಯಲ್ಲಿ ಕುಳಿತ ಗುಲಾಮರಿಗೆ ಮರೆವಿನ ಖಾಯಿಲೆ ಒಳ್ಳೆಯದಲ್ಲ’ವೆಂದು ಕಿಡಿಕಾರಿದೆ.


ಆರೋಗ್ಯ ಕೆಟ್ಟರೆ ಬಡವರು ಬದುಕಲೇಬಾರದಾ? ಹಸಿವಿನಿಂದಲೇ ಸಾಯಬೇಕಾ?’


ಬಿಜೆಪಿ ಪಕ್ಷದ ತಲೆಗೆ ಕಟ್ಟುವ ಹುನ್ನಾರವೇಕೆ? ಭಾಷಾಭಿಮಾನ ಹುಟ್ಟಿಕೊಳ್ಳುವಲ್ಲಿ ರಾಜಕೀಯ ಲೆಕ್ಕಾಚಾರವಿದೆಯೇ? ನಿಮ್ಮ ಅಧಿನಾಯಕಿ ಮತ್ತು ಯುವರಾಜ ಕನ್ನಡ ಮಾತನಾಡುತ್ತಾರೆಯೇ? ಹೈಕಮಾಂಡ್ ಜೊತೆಗೆ ಕನ್ನಡ ಪ್ರೇಮ ಏಕೆ ತೋರಿಸುವುದಿಲ್ಲ?’ವೆಂದು ಪ್ರಶ್ನಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.