ಬೆಂಗಳೂರು: ಒಂದೇ ಕಾರ್ಯಕ್ರಮಕ್ಕೆ ಪ್ರತ್ಯೇಕ ವಿಮಾನದಲ್ಲಿ ಬಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಟೀಕಾಪ್ರಹಾರ ನಡೆಸಿದೆ. ಈ ಬಗ್ಗೆ #SidduVsDKS ಹ್ಯಾಶ್ ಟ್ಯಾಗ್ ಬಳಸಿ ಮಂಗಳವಾರ ಸರಣಿ ಟ್ವೀಟ್ ಮಾಡಿದೆ.


COMMERCIAL BREAK
SCROLL TO CONTINUE READING

‘ಜಗತ್ತಿನ ಕಣ್ಣಿಗೆ ಮಣ್ಣೆರೆಚಲು ಡಿಕೆಶಿ & ಸಿದ್ದರಾಮಯ್ಯ ಒಂದೇ ಕಾರಿನಲ್ಲಿ ಬರುವುದೇನು, ಜೊತೆಯಾಗಿ ಎತ್ತಿನ ಗಾಡಿ ಓಡಿಸುವುದೇನು, ಚಿಂತನ ಶಿಬಿರದಲ್ಲಿ ಫೋಟೋಗೆ ಫೋಸ್‌ ಕೊಟ್ಟಿದ್ದೇನು..! ಮುಖವಾಡ ಕಳಚುತ್ತಿದೆ, ಸೃಷ್ಟಿಯಾದ ಕಂದಕ ಲೋಕಕ್ಕೆ ಸಾರಿ ಸಾರಿ ಹೇಳುತ್ತಿದೆ, ಇದು #SidduVsDKS ಕದನವೆಂದು. ಕಾಂಗ್ರೆಸ್ ಈಗ ಬೂದಿ ಮುಚ್ಚಿದ ಕೆಂಡ!’ವೆಂದು ಬಿಜೆಪಿ ಟೀಕಿಸಿದೆ.


"ರೈತರಿಗೆ 33 ಲಕ್ಷ ರೂ. ಸಾಲ ನೀಡಲು ಸರ್ಕಾರ ತೀರ್ಮಾನ"


ಈ ಹಿಂದೆ ವಿಧಾನಪರಿಷತ್ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ‘ನನ್ನ ಬೆಂಬಲಕ್ಕೆ ಯಾರೂ ಇಲ್ಲ’ವೆಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ವ್ಯಂಗ್ಯವಾಡಿದೆ. ‘ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಪಕ್ಷದಲ್ಲಿ ಏಕಾಂಗಿತನ ಕಾಡುತ್ತಿದೆ.  ಕಾಂಗ್ರೆಸ್ಸಿನಲ್ಲಿ ಈಗ ಎಲ್ಲರೂ ಸಿಎಂ ಅಭ್ಯರ್ಥಿಗಳೇ. ಡಿಕೆಶಿ ಅವರಿಂದ ಸಿಎಂ ಸ್ಥಾನಕ್ಕೆ ಪ್ರಬಲ ಲಾಬಿ ಎದುರಾಗುತ್ತಿದೆ. #SidduVsDKS ಕಲಹ ಈಗ ಬೇರೆಯೇ ಹಂತ ತಲುಪುತ್ತಿದೆ, ಸಿದ್ದರಾಮಯ್ಯ ವಿರೋಧಿ ಪಾಳಯ ಜಾಗೃತಗೊಂಡಿದೆ’ ಎಂದು ಟ್ವೀಟ್ ಮಾಡಿದೆ.


ಬೆಳ್ಳಂಬೆಳಗ್ಗೆ ಘರ್ಜಿಸಿದ ಜೆಸಿಬಿ: 100 ಕೋಟಿ ರೂ. ಮೌಲ್ಯದ ಬಿಡಿಎ ಆಸ್ತಿ ವಶ


‘ಕಾಂಗ್ರೆಸ್ ನಾಯಕರು ಪದೇ ಪದೇ ದೆಹಲಿಯ 10 ಜನ್‌ಪಥ್‌ ದರ್ಶನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಹತ್ತಿಕೊಂಡ ಕಿಡಿಯನ್ನು ನಕಲಿ ಗಾಂಧಿ ಕುಟುಂಬಕ್ಕೂ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಕಗ್ಗಂಟನ್ನು ಬಗೆ ಹರಿಸಲಾಗದವರು ರಾಜ್ಯದ ಸಿಎಂ ಕುರ್ಚಿಯ ಕಾದಾಟವನ್ನು ಬಗೆಹರಿಸುವರೇ?’ ಎಂದು ಬಿಜೆಪಿ ಟ್ವೀಟ್ ಮಾಡಿ ಪ್ರಶ್ನಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ