ಕಾಂಗ್ರೆಸ್ನ ‘ರಾಹು’ ಕಾಲದಲ್ಲಿ ಅಧಿಕಾರಕ್ಕಾಗಿ ಬರೇ ಕಿತ್ತಾಟ!: ಬಿಜೆಪಿ ಟೀಕೆ
ಕಾಂಗ್ರೆಸ್ ಹಮ್ಮಿಕೊಂಡಿರುವ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಪಾದಯಾತ್ರೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯರನ್ನು ಹೊರಗಿಡಲಾಗುತ್ತಿದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಅಸಹನೆಗೆ ಬೆಂಕಿ ಬಿದ್ದಿದೆ, ನಿಜ ಬಣ್ಣ ಬಯಲಾಗುತ್ತಿದೆ ಎಂದು ಬಿಜೆಪಿ ಟೀಕಿಡಿದೆ.
#SidduVsDKS ಹ್ಯಾಶ್ ಟ್ಯಾಗ್ ಬಳಸಿ ಶನಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಂಗ್ರಸ್ ನಾಯಕ ರಾಹುಲ್ ಗಾಂಧಿ ಮುಂದೆ ಮಾಡಿದ ಎಲ್ಲಾ ನಾಟಕಗಳ ಮುಖವಾಡ ಕಳಚಿದೆ. ರಾಹುಲ್ ಗಾಂಧಿ ನಿರ್ದೇಶನದಂತೆ ಡಿಕೆಶಿ ಎಲ್ಲರೆದುರು ಸಿದ್ದರಾಮಯ್ಯ ಅವರನ್ನು ಅಪ್ಪಿಕೊಂಡರು. ಆದರೆ, ಒಪ್ಪಿಕೊಂಡಿಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಅಸಹನೆಗೆ ಬೆಂಕಿ ಬಿದ್ದಿದೆ, ನಿಜ ಬಣ್ಣ ಬಯಲಾಗುತ್ತಿದೆ’ ಎಂದು ಕುಟುಕಿದೆ.
Baburao Chinchansur : ವಿಧಾನ ಪರಿಷತ್ ಸ್ಥಾನ ಬಿಜೆಪಿ ಪಾಲು : ಬಾಬುರಾವ್ ಚಿಂಚನಸೂರ್ ಅವಿರೋಧ ಆಯ್ಕೆ
‘ಯಾರ ಹುಟ್ಟುಹಬ್ಬದ ಸಂಭ್ರಮದಲ್ಲೂ ಭಾಗಿಯಾಗದ ಗಾಂಧಿ ಕುಟುಂಬ ನನ್ನ ಹುಟ್ಟು ಹಬ್ಬಕ್ಕೆ ಬಂದಿದ್ದಾರೆ ಎಂದು ಬೀಗುತ್ತಿದ್ದ ಸಿದ್ದರಾಮಯ್ಯ ಅವರಿಗೆ ಈ ನಿರಾಸೆಯಾಗಿದೆ. ಸಿದ್ದರಾಮಯ್ಯ ಬೇಡಿಕೆಗಳಿಗೆ ರಾಹುಲ್ ಗಾಂಧಿಯ ದಿವ್ಯ ಮೌನದ ಉತ್ತರ ನೀಡುತ್ತಿದ್ದಾರೆ. ರಾಹುಲ್ ಮೌನದ ಹಿಂದೆ ಡಿಕೆಶಿ ಅವರ ಕೈವಾಡವಿದೆಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ.
‘ಕಾಂಗ್ರೆಸ್ ಹಮ್ಮಿಕೊಂಡಿರುವ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಪಾದಯಾತ್ರೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರನ್ನು ಹೊರಗಿಡಲಾಗುತ್ತಿದೆಯೇ? ಅಥವಾ ಪಕ್ಷದಿಂದಲೇ ನಡೆಯುವ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅತಿಥಿಯೇ?’ ಎಂದು ಬಿಜೆಪಿ ಲೇವಡಿ ಮಾಡಿದೆ.
"ಸಚಿವ ಅಶ್ವತ್ಥ್ ನಾರಾಯಣ್ ಹಾಕಿರುವ ಮಾನನಷ್ಟ ಮೊಕದ್ದಮೆಗೆ ಹೆದರುವ ಪ್ರಶ್ನೆಯೇ ಇಲ್ಲ"
‘ರಾಹುಲ್ ಕಾಲದಲ್ಲಿ ಡಿಕೆಶಿ-ಸಿದ್ದರಾಮಯ್ಯ ಜೋಡಿ ಕೈ ಹಿಡಿದುಕೊಳ್ಳುವುದೇನು, ತಬ್ಬಿಕೊಳ್ಳುವುದೇನು! ರಾಹು ಕಾಲದಲ್ಲಿ ಅಧಿಕಾರಕ್ಕಾಗಿ ಬರೇ ಕಿತ್ತಾಟ!’ವೆಂದು ಬಿಜೆಪಿ ಟೀಕಿಸಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.