ಬೆಂಗಳೂರು: ಹಿಜಾಬ್‌ ಒಳಗೆ ಅಡಗಿರುವ ಮತಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಬೆದರಿದೆಯೇ ಅಂತಾ ಬಿಜೆಪಿ ಪ್ರಶ್ನಿಸಿದೆ. #YesToUniform_NoToHijab ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಹಿಜಾಬ್ ವಿವಾದ ಕಾಂಗ್ರೆಸ್ ಸೃಷ್ಟಿಸಿದ ಕೂಸು’ ಅಂತಾ ಆರೋಪಿಸಿದೆ.


COMMERCIAL BREAK
SCROLL TO CONTINUE READING

‘ಹಿಜಾಬ್ ವಿವಾದದ ಹಿಂದೆ ಹಿಂದೂ ಸಂಘಟನೆಗಳ ಕೈವಾಡ ಇದೆ ಎಂದು ಸುಳ್ಳು ಆರೋಪ‌ ಮಾಡುವ ಸಿದ್ದರಾಮಯ್ಯ(Siddaramaiah)ನವರೇ ನಿಮಗೆ ಸಿಎಫ್ಐ, ಎಸ್‌ಡಿಪಿಐ, ಪಿಎಫ್‌ಐ ನಂತಹ ಮೂಲಭೂತವಾದಿ ಸಂಘಟನೆಗಳ ಬಗ್ಗೆ ಮಾತನಾಡುವ ಶಕ್ತಿಯಿದೆಯೇ? ಹಿಜಾಬ್‌ ಒಳಗೆ ಅಡಗಿರುವ ಮತಕ್ಕೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಬೆದರಿದೆಯೇ?’ ಅಂತಾ ಟೀಕಿಸಿದೆ.


ಅತಿಥಿ ಉಪನ್ಯಾಸಕರ ಹುದ್ದೆ: ಅರ್ಜಿಯಲ್ಲಿನ ತಪ್ಪು ಮಾಹಿತಿ ಸರಿಪಡಿಸಲು ಎರಡು ದಿನಗಳವರೆಗೆ ಕಾಲಾವಕಾಶ


‘ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳನ್ನು ಧಾರ್ಮಿಕ ಆಡಂಬೋಲವಾಗಿ ಮಾಡುವುದಕ್ಕೆ ಕೆಲ ಸಂಘಟನೆಗಳು ಪ್ರಯತ್ನಿಸುತ್ತಿವೆ. ಸಿಎಫ್‌ಐ(CFI), ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳು ಕೃತ್ಯಕ್ಕೆ ಪ್ರೇರಣೆ ನೀಡುತ್ತಿವೆ. ಈ ಸಂಘಟನೆಗಳು ಬೆಳೆಯುವುದಕ್ಕೆ ಪೌಷ್ಠಿಕ ಆಹಾರ ನೀಡಿದ್ದೇ ಸಿದ್ದರಾಮಯ್ಯ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮತಾಂಧ ಸಂಘಟನೆಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ವಾಪಾಸ್ ಪಡೆದಿದ್ದರು. ಸಿದ್ದರಾಮಯ್ಯ ಪೋಷಿಸಿದ್ದ ಅದೇ ಮತಾಂಧ ಸಂಘಟನೆಗಳು ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೋಮು ಸಾಮರಸ್ಯ ಕೆಡಿಸುತ್ತಿವೆ’ ಅಂತಾ ಕುಟುಕಿದೆ.


ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಕಾಲೇಜು ರಜೆ ಫೆ.16 ವರೆಗೆ ಮುಂದುವರಿಕೆ


‘ಸಿಎಫ್‌ಐ ಸಂಘಟನೆ ಶಾಲಾ- ಕಾಲೇಜುಗಳ(School & College) ವಿದ್ಯಾರ್ಥಿಗಳ ಮನಸ್ಸಿನಲ್ಲಿ‌ ಧಾರ್ಮಿಕ ಮೂಲಭೂತವಾದದ ವಿಷಬೀಜ ಬಿತ್ತಿದ ಫಲವೇ ಇಂದಿನ ಹಿಜಾಬ್ ವಿವಾದ. ಇದಕ್ಕೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ನಾಯಕರ ಬೆಂಬಲವೂ ಇದೆ. ಇದಕ್ಕಾಗಿ ಎಲ್ಲಾ ರೀತಿಯ ನೆರವು ಕೆಪಿಸಿಸಿ ಕಚೇರಿಯಿಂದಲೇ ಲಭಿಸುತ್ತಿದೆ. ಒಂದು ಕಡೆ ಹಿಜಾಬ್‌ ವಿವಾದಕ್ಕೆ ತುಪ್ಪ ಸುರಿಯಲು ಮಾರಕಾಸ್ತ್ರ ಹಿಡಿದು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಕೆಲವು ಮತಾಂಧರು ಸೇರಿಕೊಳ್ಳುತ್ತಾರೆ. ಇನ್ನೊಂದು ಕಡೆ ಕೆಪಿಸಿಸಿ ಕಚೇರಿಯಿಂದಲೇ ನೇಮಕಗೊಂಡ ವಕೀಲರು ವಿವಾದದ ಪರವಾಗಿ ನ್ಯಾಯಾಲಯದಲ್ಲಿ ವಾದಿಸುತ್ತಾರೆ. ಹಿಜಾಬ್‌ ವಿವಾದ ಕಾಂಗ್ರೆಸ್‌ ಸೃಷ್ಟಿಸಿದ ಕೂಸು’ ಅಂತಾ ಬಿಜೆಪಿ ಆರೋಪಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.