ಬಲವಂತದ ಮತಾಂತರ ವಿಚಾರದಲ್ಲಿ ಜಾಣ ಕುರುಡುತನವೇಕೆ?: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ
ಸಿದ್ದರಾಮಯ್ಯನವರೇ ಸಂವಿಧಾನಕ್ಕೆ ವಿರುದ್ಧವಾಗಿ ಬಲವಂತದ ಮತಾಂತರ ಮಾಡುವವರಿಗೆ ನೀವೇಕೆ ಬಲತುಂಬುತ್ತಿದ್ದೀರಿ ಅಂತಾ ಬಿಜೆಪಿ ಪ್ರಶ್ನಿಸಿದೆ.
ಬೆಂಗಳೂರು: ಬಲವಂತದ ಮತಾಂತರ ವಿಚಾರದಲ್ಲಿ ಜಾಣ ಕುರುಡುತನವೇಕೆ? ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಬಿಜೆಪಿ ಪ್ರಶ್ನಿಸಿದೆ. ಗುರುವಾರ ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯನವರೇ ಬಲವಂತದ ಮತಾಂತರ ಸಮಾಜ ಹಾಗೂ ಕುಟುಂಬವನ್ನು ಹೇಗೆ ಛಿದ್ರಗೊಳಿಸುತ್ತದೆ ಎಂಬುದು ನಿಮಗೆ ತಿಳಿಯದ ವಿಚಾರವೇನಲ್ಲ. ಆದರೂ ಜಾಣ ಕುರುಡುತನವೇಕೆ? ಚಿತ್ರದುರ್ಗ ಜಿಲ್ಲೆಯ ಶಾಸಕರ ತಾಯಿಯನ್ನೇ ಹುಸಿ ಮಾತಿನಿಂದ ಮತಾಂತರಗೊಳಿಸಿದ ವಿಚಾರ ಸದನದಲ್ಲಿ ಪ್ರಸ್ತಾಪವಾದಾಗ ತಾವು ಜಾಗೃತರಾಗಿ ಕೇಳಿಸಿಕೊಂಡಿದ್ದೀರಿ ತಾನೇ?’ ಎಂದು ಹೇಳಿದೆ.
[[{"fid":"224116","view_mode":"default","fields":{"format":"default","field_file_image_alt_text[und][0][value]":"Siddaramaiah-1.jpg","field_file_image_title_text[und][0][value]":"Siddaramaiah-1.jpg"},"type":"media","field_deltas":{"2":{"format":"default","field_file_image_alt_text[und][0][value]":"Siddaramaiah-1.jpg","field_file_image_title_text[und][0][value]":"Siddaramaiah-1.jpg"}},"link_text":false,"attributes":{"alt":"Siddaramaiah-1.jpg","title":"Siddaramaiah-1.jpg","class":"media-element file-default","data-delta":"2"}}]]
‘ಮತಾಂತರ ನಿಷೇಧ ಕಾಯ್ದೆಯಿಂದ ಯಾರಿಗೋ ಬೇಸರವಾಗಬಹುದೆಂಬ ಕಾರಣಕ್ಕೆ ಸಿದ್ದರಾಮಯ್ಯ ಮತಾಂತರ ನಿಷೇಧ ಕಾಯ್ದೆಗೆ ವಿರೋಧಿಸುತ್ತಿದ್ದಾರೆ. ಟಿಪ್ಪು ಜಯಂತಿ ಆಚರಣೆಯ ಮೂಲಕ ಸಾಮಾಜಿಕ ಶಾಂತಿಯನ್ನೇ ಕದಡಿದ ಸಿದ್ದರಾಮಯ್ಯನವರು ಈಗ ಕೋಮು ಸೌಹಾರ್ದತೆಯ ಬಗ್ಗೆ ಪಾಠ ಮಾಡುವುದು ಸೋಜಿಗವಲ್ಲವೇ?’ ಅಂತಾ ಬಿಜೆಪಿ ತಿರುಗೇಟು ನೀಡಿದೆ.
SR More passes Away : ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಎಸ್ ಆರ್ ಮೋರ್ ನಿಧನ
‘ಮತಾಂತರ ಮಾಡದವರು ಮತಾಂತರ ವಿರೋಧಿ ಕಾಯ್ದೆಗೆ ಭಯಪಡಬೇಕಾಗಿಲ್ಲ. ಬಲವಂತದ ಮತಾಂತರ ಮಾಡುವವರಿಗೆ ಈ ಕಾನೂನಿನ ಭಯ ಮೂಡುವುದು ಸಹಜ. ಕಾಂಗ್ರೆಸ್ ಪಕ್ಷದ ನಾಯಕರಲ್ಲೂ ಭಯ ಮೂಡಿರುವುದು ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ. ಸಿದ್ದರಾಮಯ್ಯನವರೇ ಸಂವಿಧಾನಕ್ಕೆ ವಿರುದ್ಧವಾಗಿ ಬಲವಂತದ ಮತಾಂತರ ಮಾಡುವವರಿಗೆ ನೀವೇಕೆ ಬಲತುಂಬುತ್ತಿದ್ದೀರಿ?’ ಅಂತಾ ಬಿಜೆಪಿ ಪ್ರಶ್ನಿಸಿದೆ.
Basavaraj Bommai : ರಾಜ್ಯದಲ್ಲಿ ಕೋವಿಡ್-19 ಹೊಸ ಮಾರ್ಗಸೂಚಿ : ಸುಳಿವು ನೀಡಿದ ಸಿಎಂ ಬೊಮ್ಮಾಯಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.