ಬೆಂಗಳೂರು: 545 ಪಿಎಸ್‍ಐ ಹುದ್ದೆಗಳ ನೇಮಕಾತಿ ವಿಚಾರವಾಗಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಉಲ್ಲೇಖಿಸಿ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ರೈಲ್ವೆ ಅಪಘಾತವಾದಾಗ ಶಾಸ್ತ್ರೀಯವರು ರಾಜೀನಾಮೆ ನೀಡದ್ದರು. ಈಗಿನವರಿಗೆ ಮಾನ ಮಾರ್ಯಾದೆ ಏನೂ ಇಲ್ಲವೆಂದು ವಾಗ್ದಾಳಿ ನಡೆಸಿದ್ದರು.


COMMERCIAL BREAK
SCROLL TO CONTINUE READING

ಸಿದ್ದರಾಮಯ್ಯನವರ ಹೇಳಿಕೆಗೆ ಭಾನುವಾರ ಬಿಜೆಪಿ ತಿರುಗೇಟು ನೀಡಿದೆ. #ಬುರುಡೆರಾಮಯ್ಯ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯನವರೇ ಲಕ್ಷಾಂತರ ಮೌಲ್ಯದ ವಾಚ್‌ ಹಗರಣ ಆದಾಗ ನಿಮ್ಮ ಮಾನ ಮಾರ್ಯಾದೆ ಎಲ್ಲಿತ್ತು? ಅರ್ಕಾವತಿ ರೀಡೂ ಪ್ರಕರಣದಲ್ಲಿ ನಿಮ್ಮ ಮಾನ ಮರ್ಯಾದಿ ಎತ್ತರಕ್ಕೇರಿತ್ತೇ? ಜೈಲಿನಿಂದ ಬಂದವರನ್ನು ಕೆಪಿಸಿಸಿಗೆ ಅಧ್ಯಕ್ಷರನ್ನಾಗಿ ಮಾಡುವಾಗ ನಿಮ್ಮ ಮಾನ ಮರ್ಯಾದೆ ಎಲ್ಲಿತ್ತು?’ ಎಂದು ಪ್ರಶ್ನಿಸಿದೆ.


ರಾಜ್ಯ ಸರ್ಕಾರ ‘ಉದ್ಯೋಗ ವ್ಯಾಪಾರೀಕಣʼವನ್ನೇ ‘ಅಧಿಕೃತ ಕಸುಬುʼ ಮಾಡಿಕೊಂಡಿದೆ: ಎಚ್‌ಡಿಕೆ


‘ಸಿದ್ದರಾಮಯ್ಯನವರೇ ನ್ಯಾಶನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ಸೋನಿಯಾ ಗಾಂಧಿ ಅವರ ರಾಜಿನಾಮೆ ಕೇಳುವ ತಾಕತ್ತಿದೆಯೇ? ಭ್ರಷ್ಟಾಚಾರ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಗಡೆ ಇರುವ ಕಾಂಗ್ರೆಸ್‌ ನಾಯಕರ ಮಾನ ಮರ್ಯಾದೆಯನ್ನು ಎಂದು ಪ್ರಶ್ನಿಸುತ್ತೀರಿ?’ ಎಂದು ಕುಟುಕಿದೆ.


ಬಿಜೆಪಿ ಪ್ರಶ್ನಿಸಿದೆ.


ಕರ್ನಾಟಕಕ್ಕೆ ʼಅಸಾನಿʼ ಭೀತಿ: ರಾಜ್ಯದ ವಿವಿಧೆಡೆ ಇಂದಿನಿಂದ ಭಾರೀ ಮಳೆ ಸಾಧ್ಯತೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.