ಬೆಂಗಳೂರು: ಬಾಗಲಕೋಟೆ ಜಿಲ್ಲೆ ಕುಳಗೇರಿ ಕ್ರಾಸ್ ದಾಬಾ ಬಳಿ ನಡೆದ ಹಲ್ಲೆಯಲ್ಲಿ ಗಾಯಗೊಂಡಿದ್ದ ಸಂತ್ರಸ್ತರಿಗೆ ನೀಡಿದ್ದ 2 ಲಕ್ಷ ರೂ.ವನ್ನು ಅವರ ಕುಟುಂಬದ ಸದಸ್ಯರು ವಿಪಕ್ಷ ನಾಯಕ ಸಿದ್ದರಾಮಯ್ಯರ ವಾಹನದ ಮೇಲೆ‌ ಎಸೆದಿದ್ದರು. ಇದೇ ವಿಚಾರವನ್ನಿಟ್ಟುಕೊಂಡು ಬಿಜೆಪಿ ಸರಣಿ ಟ್ವೀಟ್‍ಗಳ ಮೂಲಕ ಟೀಕೆ ವ್ಯಕ್ತಪಡಿಸಿದೆ.


COMMERCIAL BREAK
SCROLL TO CONTINUE READING

#ಜನವಿರೋಧಿಸಿದ್ದು ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಬಿಜೆಪಿ, ‘ವಿರೋಧ ಪಕ್ಷದ ನಾಯಕರೇ, ನಾಳೆ ನಿಮ್ಮ ಪಟಾಲಂ ಮಾಡುವ ಸಿದ್ದರಾಮೋತ್ಸವ ನಂತರ ಇದೇ ಸ್ಥಿತಿ ಉದ್ಭವವಾಗುವ ಲಕ್ಷಣ ದಟ್ಟವಾಗಿದೆ. ಚಂದಾ ಎತ್ತಿ 'ಬಂಡವಾಳ' ಹೂಡಿ ಮಾಡಿದ ಉತ್ಸವ ತಿರುಗುಬಾಣವಾಗುವುದೇ? ಸಿದ್ದರಾಮೋತ್ಸವದ ಆರಂಭಿಕ ಲಕ್ಷಣವೇ ಹೀಗಾದರೇ, ಅಂತ್ಯ ಹೇಗಿರಬಹುದು?’ ಎಂದು ಬಿಜೆಪಿ ಪ್ರಶ್ನಿಸಿದೆ.


ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ : ಈ ಬ್ಯಾಚ್ ಪಿಎಸ್ ಐಗಳ ಮೇಲೆ ಈಗ ಸಿಐಡಿ ಕಣ್ಣು..?


'ನಿಮ್ಮ ತಲೆಗೆ ಹಗರಣಗಳು ಸುತ್ತಿಕೊಂಡ ಕೂಡಲೇ ನಮ್ಮ ಕಾಲದ ಹಗರಣಗಳು ನೆನಪಾಯಿತೇ?'


‘ಸಂವಿಧಾನ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ರಾಷ್ಟ್ರ ಧ್ವಜವನ್ನು ತಮ್ಮ ಹಿಡನ್ ಅಜೆಂಡಾಕ್ಕೆ‌ ರಕ್ಷಾ ಕವಚವಾಗಿ ಬಳಸಿಕೊಳ್ಳಲು ಪಿಎಫ್ಐ ಉಗ್ರರು ಸಂಚು ನಡೆಸಿದ್ದಾರೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ‌ ವರ್ಗಗಳನ್ನು ಬಳಸಿಕೊಂಡು ಸಮಾಜಘಾತುಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದಾರೆ. ಇವರಿಗೆ ಸಹಾಯ ‘ಹಸ್ತ’ ಯಾರದ್ದು?’ ಎಂದು ಬಿಜೆಪಿ ಟ್ವೀಟ್ ಮಾಡಿದೆ.


‘ಭಾರತವನ್ನು ಇಸ್ಲಾಮಿಕ್ ರಾಷ್ಟ್ರವಾಗಿ‌ ಪರಿವರ್ತಿಸುವುದಕ್ಕಾಗಿ ಪಿಎಫ್ಐ ಉಗ್ರರು 3 ಹಂತದ ಯೋಜನೆ ರೂಪಿಸಿರುವುದು ಈಗ ಬಯಲಾಗಿದೆ. ಗುಪ್ತ ಸಶಸ್ತ್ರಪಡೆ ರಚಿಸಿ ವಿರೋಧಿಗಳ‌ ನಿರ್ನಾಮ ಮಾಡಬೇಕೆಂದು ಎಚ್ಚರಿಕೆ ನೀಡಿದ್ದು ಯಾರಿಗೆ? ಇದೆಲ್ಲದ್ದರಲ್ಲೂ ‘ಹಸ್ತ’ ಸಹಕಾರವಿದೆಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.