ಸಿದ್ದರಾಮಯ್ಯಗೆ ಟಿಪ್ಪು ಮಾತ್ರವಲ್ಲ, ಮತಾಂಧರೆಲ್ಲರೂ ಆಪ್ತರೇ!: ಬಿಜೆಪಿ ಟೀಕೆ
ಸಿದ್ದರಾಮಯ್ಯ ಅವರಿಗೂ ಟಿಪ್ಪು ಸುಲ್ತಾನ್, ಘೋರಿ, ಘಜನಿಗಳಿಗೂ ಇರುವ ಸಂಬಂಧವಾದರೂ ಏನು? ಎಂದು ಬಿಜೆಪಿ ಪ್ರಶ್ನಿಸಿದೆ.
ಬೆಂಗಳೂರು: ಸಿದ್ದರಾಮಯ್ಯ ಅವರಿಗೆ ಟಿಪ್ಪು ಮಾತ್ರವಲ್ಲ, ಮತಾಂಧರೆಲ್ಲರೂ ಆಪ್ತರೇ ಎಂದು ಬಿಜೆಪಿ ಟೀಕಿಸಿದೆ. #ನಾಡವಿರೋಧಿಕಾಂಗ್ರೆಸ್ ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ವಿಪಕ್ಷ ನಾಯಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
‘ಸ್ವಯಸೇವಕರಾಗಿರುವ ಹಿನ್ನಲೆಯಲ್ಲಿ ಬಿಜೆಪಿ ಜನಪ್ರತಿನಿಧಿಗಳು ನಿಮಗೆ ಉತ್ತರಿಸುತ್ತಿದ್ದಾರೆ. ನಿಮಗೆ ಅದನ್ನೇ ತಡೆದುಕೊಳ್ಳಲಾಗಿದ್ದರೆ ಹೇಗೆ? ಇದು ರಾಜ್ಯದ ಜನರನ್ನು ಕಾಡುತ್ತಿರುವ ಪ್ರಶ್ನೆ ಹಾಗೂ ಕಾಂಗ್ರೆಸ್ ಮುಚ್ಚಿಟ್ಟ ಕೆಲ ಸತ್ಯಗಳ ಬಗ್ಗೆ ಉತ್ತರ ನೀಡಲು ಸಿದ್ಧರಿದ್ದೀರಾ?’ ಎಂದು ಪ್ರಶ್ನಿಸಿದೆ.
ಬಿಜೆಪಿ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ ಮಾಡಲು ಹೊರಟಿದೆ: ಡಿಕೆಶಿ
‘ಸಿದ್ದರಾಮಯ್ಯ ಅವರಿಗೂ ಟಿಪ್ಪು ಸುಲ್ತಾನ್, ಘೋರಿ, ಘಜನಿಗಳಿಗೂ ಇರುವ ಸಂಬಂಧವಾದರೂ ಏನು? ಈ ಮತಾಂಧರು ಎಸಗಿದ ಘೋರ ಕೃತ್ಯಗಳ ಬಗ್ಗೆ ಪ್ರಶ್ನೆ ಮಾಡಿದಾಗಲೆಲ್ಲ ಸಿದ್ದರಾಮಯ್ಯನವರು ಉತ್ತರಿಸುವುದೇಕೆ? ಹಿಂದೂ ನರಮೇಧ ನಡೆಸಿದವರ ಸಮರ್ಥನೆಗೆ ಸಿದ್ದರಾಮಯ್ಯ ಜಿಪಿಎ ಪಡೆದುಕೊಂಡಿದ್ದಾರಾ?’ ಎಂದು ಕುಟುಕಿದೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಮಾರಾಟಕ್ಕೆ ಇಟ್ಟಿದ್ದು ಯಾರು?: ಬಿಜೆಪಿಗೆ ಎಚ್‌ಡಿಕೆ ಪ್ರಶ್ನೆ
‘ಸಿದ್ದರಾಮಯ್ಯ ಅವರಿಗೆ ಟಿಪ್ಪು ಮಾತ್ರವಲ್ಲ, ಮತಾಂಧರೆಲ್ಲರೂ ಆಪ್ತರೇ! ಅಧಿಕಾರದಲ್ಲಿದ್ದಾಗ ಮತಾಂಧ ಸಂಘಟನೆಗಳ ಕಾರ್ಯಕರ್ತರ ಮೇಲಿನ ನೂರಾರು ಕ್ರಿಮಿನಲ್ ಪ್ರಕರಣಗಳನ್ನು ವಾಪಾಸ್ ಪಡೆದಿದ್ದರು. ಮತಾಂಧರೊಂದಿಗೆ ಮತರಾಜಕಾರಣಕ್ಕೆ ಮೀರಿದ ಬೇರೆಯದೇ ಸಂಬಂಧ ಇರಬಹುದೆಂದು ಜನರು ಅನುಮಾನಿಸುತ್ತಿದ್ದಾರೆ, ನಿಜವೇ?’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಈಗೇಕೆ ರೋಷಾವೇಶ?
ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಗುಡುಗಿರುವ ಬಿಜೆಪಿ, ‘ಜಗಜ್ಜೋತಿ ಬಸವಣ್ಣರಿಗೆ ಬಿಜೆಪಿ ಸರ್ಕಾರ ನೇಮಿಸಿದ ಪರಿಷ್ಕರಣಾ ಸಮಿತಿ ಅಪಮಾನ ಮಾಡಿದೆ ಎಂದು ವಿಪಕ್ಷಗಳು ಆರೋಪಿಸುತ್ತಿದೆ. ಸಿದ್ದರಾಮಯ್ಯ ಸರ್ಕಾರ ನೇಮಿಸಿದ್ದ ಬರಗೂರು ರಾಮಚಂದ್ರಪ್ಪ ಸಮಿತಿ ಕೂಡ ವೀರಶೈವ, ಉಪನಯನ, ಶೈವ ಗುರುಗಳು, ಲಿಂಗದೀಕ್ಷೆ, ಧ್ಯಾನಸಾಧನೆ ಎಂಬೆಲ್ಲ ಪದಗಳನ್ನು ಬಳಸಿತ್ತು. ಈಗೇಕೆ ರೋಷಾವೇಶ?’ ಎಂದು ಪ್ರಶ್ನಿಸಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.