ಬೆಂಗಳೂರು: ‘ಪಂಚ’ ರಾಜ್ಯಗಳ ಚುನಾವಣೆ(5 State Election Result)ಯಲ್ಲಿ ಹೀನಾಯ ಸೋಲು ಕಂಡ ಬಳಿಕ ಕಾಂಗ್ರೆಸ್ ಕಂಗೆಟ್ಟು ಹೋಗಿದೆ. ಈ ಹಿನ್ನೆಲೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು(Navjot Singh Sidhu) ಮತ್ತು ಇತರ 4 ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರನ್ನು ಸೋನಿಯಾ ಗಾಂಧಿ ವಜಾಗೊಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಪ್ರಿಯಾಂಕಾ ಗಾಂಧಿ ವಾದ್ರಾ ರಾಜಕೀಯ ನಿವೃತ್ತಿ ಎಂದು ಅಂತಾ ಪ್ರಶ್ನಿಸಿದೆ.


COMMERCIAL BREAK
SCROLL TO CONTINUE READING

‘ಚುನಾವಣೆಯಲ್ಲಿ ಸೋಲು ಕಂಡ ಪಂಚರಾಜ್ಯಗಳ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷರಿಗೆ ರಾಜೀನಾಮೆ ನೀಡುವಂತೆ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚನೆ ನೀಡಿದ್ದಾರೆ. ಆದರೆ ಸೋಲಿನ ನೈತಿಕ ಹೊಣೆ ಸೋನಿಯಾ ಗಾಂಧಿ ಅವರಿಗೆ ಅನ್ವಯವಾಗುವುದಿಲ್ಲವೇ ? ಉತ್ತರ ಪ್ರದೇಶ ಚುನಾವಣಾ ಉಸ್ತುವಾರಿ ಪ್ರಿಯಾಂಕಾ ಗಾಂಧಿ(Priyanka Gandhi Vadra) ರಾಜಕೀಯ ನಿವೃತ್ತಿ ಎಂದು?’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.


'ಸಮಗ್ರ ಆರ್ಥಿಕ ಬೆಳಣಿಗೆಯಲ್ಲಿ 2025 ಕ್ಕೆ ಕರ್ನಾಟಕ ನಂಬರ್ ಒನ್ ರಾಜ್ಯವಾಗಲಿದೆ'


‘ಸತ್ಯ ಎಂದಿಗೂ ಕಹಿ! ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್(Kapil Sibal) ಹೇಳಿಕೆಗೆ ಸ್ವಪಕ್ಷೀಯ ನಾಯಕರು ವಿರೋಧಿಸುತ್ತಿದ್ದಾರೆ. ಈ ವಿರೋಧ ಗಮನಿಸಿದಾಗ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಎನ್ನುವುದು ನಿರ್ಜೀವ ಅವಸ್ಥೆಯಲ್ಲಿದೆ, ಗುಲಾಮಗಿರಿ ಮಾತ್ರ ಉಳಿದಿದೆ ಎನ್ನುವುದು ಸ್ಪಷ್ಟವಾಗುತ್ತಿದೆ’ ಅಂತಾ ಬಿಜೆಪಿ ಟ್ವೀಟ್ ಮೂಲಕ ಕುಟುಕಿದೆ.


Rahul Gandhi) ಪಕ್ಷದ ಅಧ್ಯಕ್ಷರಲ್ಲ, ಆದರೆ ಅವರು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಅಂತಾ ಕಿಡಿಕಾರಿದ್ದರು. ಗಾಂಧಿಗಳು ನಾಯಕತ್ವದ ಸ್ಥಾನಗಳಿಂದ ದೂರ ಸರಿಯಲು ಮತ್ತು ಇತರರಿಗೆ ಅವಕಾಶ ನೀಡುವ ಸಮಯ ಬಂದಿದೆ. ಹೀಗಾಗಿ ಗಾಂಧಿಗಳು ಸ್ವಯಂಪ್ರೇರಣೆಯಿಂದ ದೂರ ಸರಿಯಬೇಕು’ ಅಂತಾ ಹೇಳಿದ್ದರು.


ಇದನ್ನೂ ಓದಿ: ರಾಜ್ಯಾದ್ಯಂತ 78 ಕಡೆ ಎಸಿಬಿ ದಾಳಿ - 200 ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ ಪರಿಶೀಲನೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.