ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯಗೆ 1000 ರೂ.ನೋಟಿನಂತೆ ಕಾಂಗ್ರೆಸ್‍ನಲ್ಲಿ ಬೆಲೆ ಇಲ್ಲದಂತಾಗಿದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 2000 ರೂ.ನೋಟಿನಂತೆ ಚಲಾವಣೆಯಲ್ಲಿದ್ದಾರೆಂದು ಬಿಜೆಪಿ ಟೀಕಿಸಿದೆ. #CorruptCongress ಹ್ಯಾಶ್‍ಟ್ಯಾಗ್ ಬಳಸಿ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದೆ.


COMMERCIAL BREAK
SCROLL TO CONTINUE READING

ಕಾಂಗ್ರೆಸ್ ಪಾಳಯದಲ್ಲಿ ಇತ್ತೀಚೆಗೆ ಒಂದು ಮಾತು ಕೇಳಿ ಬರುತ್ತಿದೆ. ಸಿದ್ದರಾಮಯ್ಯನವರು ಹಳೇ 1000 ರೂ. ನೋಟಿನ ಹಾಗೆ. ತಕ್ಷಣಕ್ಕೆ ಜನರು ನೋಡಿ ಕಣ್ಣಿಗೊತ್ತಿಕೊಂಡರೂ ಅದು ಚಲಾವಣೆಯಲ್ಲಿಲ್ಲವೆಂಬುದು ಎಲ್ಲರಿಗೂ ತಿಳಿದಿದೆ. ನೋಟು ಅಮಾನ್ಯೀಕರಣವಾದಾಗ ಬಹಳ ಅವಕಾಶವಿದ್ದರೂ ಅವರು ನೋಟು ಬದಲಾವಣೆಗೆ ಬ್ಯಾಂಕ್‌ಗೆ ಹೋಗಲೇ ಇಲ್ಲ. ಬದಲಿಗೆ ನಾನೇ ಅಂತಿಮ ಎಂದುಕೊಂಡರು’ ಎಂದು ಬಿಜೆಪಿ ಟೀಕಿಸಿದೆ.


ಇದನ್ನೂ ಓದಿ: Viral video : ಜೀವದ ಹಂಗು ತೊರೆದು ಕಾಗೆ ರಕ್ಷಣೆ ಮಾಡಿದ ಟ್ರಾಫಿಕ್ ಹೆಡ್ ಕಾನ್ಸಟೇಬಲ್


Mysuru: ಅಗ್ನಿಶಾಮಕ ವಸತಿ ಗೃಹದಲ್ಲಿ ಸಿಲೆಂಡರ್ ಸ್ಫೋಟ, 10ಕ್ಕೂ ಹೆಚ್ಚು ಮಂದಿಗೆ ಗಾಯ!


ಕಾಂಗ್ರೆಸ್‌ನಿಂದ ದೂರ ಉಳಿಯಬೇಕಿದೆ. ಇವರಿವರೇ ಕುರ್ಚಿಗಾಗಿ ಕಿತ್ತಾಡುತ್ತಿದ್ದರೆ, ಅತ್ತ ಪಿಎಫ್‌ಐ‌ ಉಗ್ರ ಸಂಘಟನೆಗಳಿಂದ‌‌ ಕೊಲೆ, ಲವ್ ಜಿಹಾದ್,‌ ಮತಾಂತರ ಆಗುತ್ತಿರುತ್ತದೆ.‌ ಇದೇ ಕಾರಣಕ್ಕೆ ಇವರ ಸರ್ಕಾರವನ್ನು ರಾಜ್ಯದ ಜನತೆ ಕಿತ್ತೊಗೆದಿದ್ದಲ್ಲವೇ? ಬಿಜೆಪಿಯ ಸರ್ಕಾರವಷ್ಟೇ ಇವರ ಉಪಟಳಕ್ಕೆ ಮದ್ದು’ ಎಂದು ಬಿಜೆಪಿ ಕಿಡಿಕಾರಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G


https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.