ಟಿಪ್ಪು ಖಡ್ಗಕ್ಕೆ ಸಲಾಮು ಹಾಕಿ ಚಾಮರಾಜಪೇಟೆ ಎನ್ನುವಿರಾ?: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ
ಪ್ರತಿ ಬಾರಿ ಚುನಾವಣೆ ಬಂದಾಗಲೂ ಸಕ್ರಿಯ ರಾಜಕೀಯದಿಂದ ನಿವೃತ್ತಿ ಘೋಷಿಸುವ #ಆಣೆರಾಮಯ್ಯ ಅವರು ಈ ಬಾರಿಯಾದರೂ ಒಂದು ಗಟ್ಟಿ ಆಣೆ-ಪ್ರಮಾಣ ಮಾಡಲಿ.
ಬೆಂಗಳೂರು: ಯೌವನದಲ್ಲಿ ಮಾಡಿದ ತಪ್ಪುಗಳಿಗೆ ವೃದ್ಧಾಪ್ಯದಲ್ಲಿ ಪಶ್ಚಾತಾಪ ಪಟ್ಟರೆ ತಪ್ಪೇನಿಲ್ಲ! ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಹಿಂದೂ ಧಾರ್ಮಿಕ ಆಚರಣೆಗಳನ್ನು ಮೌಢ್ಯದ ಸಾಲಿಗೆ ಸೇರಿಸಲು ಹೊರಟಿದ್ದ ಸಿದ್ದರಾಮಯ್ಯನವರಿಗೆ ಈಗ ಇದ್ದಕ್ಕಿದ್ದಂತೆ ಆಣೆ ಪ್ರಮಾಣದ ಬಗ್ಗೆ ನಂಬಿಕೆ ಮೂಡಿದ್ದು ಸ್ವಾಗತಾರ್ಹ. ಯೌವನದಲ್ಲಿ ಮಾಡಿದ ತಪ್ಪುಗಳಿಗೆ ವೃದ್ಧಾಪ್ಯದಲ್ಲಿ ಪಶ್ಚಾತಾಪ ಪಟ್ಟರೆ ತಪ್ಪೇನಿಲ್ಲ! ಆದರೆ #ಆಣೆರಾಮಯ್ಯ ಅವರು ಇದನ್ನೂ ರಾಜಕೀಯಕ್ಕೆ ಬಳಸಿಕೊಳ್ಳುವ ಅಪಾಯವಿದೆ’ ಅಂತಾ ಟೀಕಿಸಿದೆ.
ಹುಬ್ಬಳ್ಳಿ ಗಲಭೆಗೆ ಬಿಜೆಪಿ ಕುಮ್ಮಕ್ಕು ಕಾರಣ ಹೊರತು ಕಾಂಗ್ರೆಸ್ ಅಲ್ಲ: ಡಿ.ಕೆ. ಶಿವಕುಮಾರ್
‘ಸಿದ್ದರಾಮಯ್ಯನವರು ತಮ್ಮ ಧಾರ್ಮಿಕ ಹಕ್ಕಿಗಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನೇ ಬಳಸಿಕೊಳ್ಳುತ್ತಿರುವುದರ ಮರ್ಮವೇನು? #ಆಣೆರಾಮಯ್ಯ ಅವರೇ ಆಣೆ - ಪ್ರಮಾಣದ ಮೂಲಕ ಹಳೆಯ ಗುರುವಿನ ತಲೆಯ ಮೇಲೆ ಕೈ ಇಡಲು ಹೊರಟಿದ್ದು ಸಮಂಜಸವೇ?’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
Dingaleshwar Swamiji : ಸಚಿವ ಸಿಸಿ ಪಾಟೀಲ್ ವಿರುದ್ಧ ಕಿಡಿಕಾರಿದ ದಿಂಗಾಲೇಶ್ವರ ಶ್ರೀಗಳು
ಚುನಾವಣೆ ಬಂದಾಗಲೂ ಸಕ್ರಿಯ ರಾಜಕೀಯದಿಂದ ನಿವೃತ್ತಿ ಘೋಷಿಸುವ #ಆಣೆರಾಮಯ್ಯ ಅವರು ಈ ಬಾರಿಯಾದರೂ ಒಂದು ಗಟ್ಟಿ ಆಣೆ-ಪ್ರಮಾಣ ಮಾಡಲಿ. ಆ ಪ್ರಮಾಣಕ್ಕಾಗಿ ಬೇರೆಯವರ ತಂದೆ-ತಾಯಿಯನ್ನು ಆಯ್ಕೆ ಮಾಡಿಕೊಳ್ಳುವ ಬದಲು ಅಧಿನಾಯಕಿ ಸೋನಿಯಾ ಗಾಂಧಿಯ ಅವರ ಮೇಲೆ ಆಣೆ ಮಾಡುವ ಧೈರ್ಯ ತೋರುವರೇ?’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.