ಬೆಂಗಳೂರು: ಚುನಾವಣೆಗೆ ಸ್ಪರ್ಧಿಸದೆ ಇದ್ದರೂ, ಜನರಿಂದ ಆಯ್ಕೆ ಆಗದೆ ಇದ್ದರೂ, ಜನಪ್ರತಿನಿಧಿ ಅಲ್ಲದೆ ಇದ್ದರೂ #ShadowCM ಯತೀಂದ್ರ ಸಿದ್ದರಾಮಯ್ಯರ ಕಾರುಬಾರು ಜೋರಾಗಿದೆ ಎಂದು ಬಿಜೆಪಿ ಟೀಕಿಸಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಬಿಜೆಪಿ, ‘ರಾಜ್ಯದಲ್ಲಿ ವರ್ಗಾವಣೆ ದಂಧೆಯ ಬಹುದೊಡ್ಡ ಜವಾಬ್ದಾರಿ ಹೆಗಲ ಮೇಲೆ ಇದ್ದರೂ, ಯತೀಂದ್ರರವರು ಅದ್ಧೂರಿ ಸ್ವಾಗತ ಪಡೆದು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಕಾಮಗಾರಿಗಳನ್ನು ಉದ್ಘಾಟಿಸಿದ್ದಾರೆ. ಇದು ಯಾವ ಪ್ರಜಾಪ್ರಭುತ್ವ!’ ಎಂದು ಪ್ರಶ್ನಿಸಿದೆ.


ಸೀಬೆ ಹಣ್ಣಿನ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜಗಳಿವೆ ಗೊತ್ತಾ..?


ಇನ್ನು ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ‘ಯಾವ ಅಧಿಕಾರದಲ್ಲಿ ಸಿದ್ದರಾಮಯ್ಯನವರ ಮಗ ಸರ್ಕಾರಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸುತ್ತಾರೆ? ಕಾಮಗಾರಿಗಳನ್ನು ಉದ್ಘಾಟನೆ ಮಾಡುತ್ತಾರೆ? ಸಿಎಂ ಸಿದ್ದರಾಮಯ್ಯನವರ ಪರವಾಗಿ ಉದ್ಘಾಟನೆ ಮಾಡುವುದಕ್ಕೆ ಇದೇನು ಅವರ ಮನೆಯ ಕಾರ್ಯಕ್ರಮವಾ?’ ಎಂದು ಪ್ರಶ್ನಿಸಿದ್ದಾರೆ.


ಸರ್ಕಾರಿ ಕಾರ್ಯಕ್ರಮದಲ್ಲಿ ಯತೀಂದ್ರ ಭಾಗಿ!


ಕೆಂಪಯ್ಯನಹುಂಡಿ ಗ್ರಾಮದಲ್ಲಿ ನೂತನ ಸಂಜೀವಿನಿ ಕಟ್ಟಡದ ಉದ್ಘಾಟನೆಯಲ್ಲೂ ಅವರು ಭಾಗಿಯಾಗಿದ್ದರು. ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದ ಯತೀಂದ್ರ ಅವರು ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


ಇದನ್ನೂ ಓದಿ: ಮೊಹರಂ ನಿಮಿತ್ಯ ಹಾಕಿದ ಕೆಂಡದಲ್ಲಿ‌ ಕಂಬಳಿ‌ ಹಾಸಿ‌ ಕುಳಿತ ವ್ಯಕ್ತಿ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.