ಬೆಂಗಳೂರು: ನಾನು ಕುಕ್ಕರ್ ಬಾಂಬ್ ಸ್ಫೋಟ ಘಟನೆಯನ್ನು ಸಮರ್ಥಿಸಿಕೊಂಡಿಲ್ಲ. ಬಿಜೆಪಿ  ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದಂತಹ ಪ್ರಕರಣಗಳನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಮಂಗಳೂರು ಸ್ಫೋಟದ ಬಗ್ಗೆ ನಾನು ಹೇಳಿಕೆ ಕೊಟ್ಟಿದ್ದು ಸತ್ಯಾಂಶವಾಗಿದೆ. ನಿನ್ನೆ ನೋಡಿ ಯಡಿಯೂರಪ್ಪ ಮತ್ತು ಸಿಎಂ ನಡುವಿನ ಭಿನ್ನಾಭಿಪ್ರಾಯದ ಇಶ್ಯೂ ಇತ್ತು. ನಾನು ಹೇಳಿಕೆ ಕೊಟ್ಟ ಕೂಡಲೇ ತಕ್ಷಣ ಬೇರೆ ವಿಷಯಕ್ಕೆ ಜಂಪ್ ಆದ್ರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.


ಬಾಂಬ್ ಸ್ಪೋಟದ ವಿಷಯವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ತಿದ್ದಾರೆ ಅಂತ ನಾನು ಹೇಳಿದ್ದೇನೆ. ಇಂತ ರಾಜಕಾರಣದಿಂದ ಎಲ್ಲರಿಗೂ ದ್ರೋಹ ಬಗೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಗೌರವ ನಾವೇ ಹಾಳು ಮಾಡಿಕೊಳ್ತಿದ್ದೀವಿ ಅನ್ನುವ ಅಭಿಪ್ರಾಯದಲ್ಲಿ ನಾನು ಹೇಳಿಕೆ ಕೊಟ್ಟಿದ್ದೇನೆ ಎಂದರು‌.


Viral Video: ಮಂಡ್ಯದ ಕಾಮುಕ ಮುಖ್ಯಶಿಕ್ಷಕನಿಗೆ ವಿದ್ಯಾರ್ಥಿನಿಯರು ಥಳಿಸಿದ್ಹೇಗೆ ಗೊತ್ತಾ? ಇಲ್ಲಿದೆ ವೈರಲ್ ವಿಡಿಯೋ


ಬೆಂಗಳೂರನ್ನು ಇಡೀ ವಿಶ್ವ ನೋಡುತ್ತಿದೆ‌, ದೇಶದ ಐಕ್ಯತೆ ಸಮಗ್ರತೆಗಾಗಿ ನಮ್ಮ ಪಕ್ಷ  ಯಾವತ್ತೂ ಬದ್ದವಾಗಿದೆ. ಭಯೋತ್ಪಾದನಾ ಪ್ರಕರಣಗಳಲ್ಲಿ ನಮ್ಮ ಲೀಡರ್ ಗಳನ್ನೇ ಕಳೆದುಕೊಂಡಿದ್ದೇವೆ ಎಂದರು.


ಕಾಂಗ್ರೆಸ್ ಭಯೋತ್ಪಾಕದಕರ ಪರ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ವಿಷಯ ಜಂಪ್ ಆಗಲಿ, ಚರ್ಚೆ ಆಗಲಿ ಬೇಡ ಅಂತಲ್ಲ. ಸಿಎಂ ಭ್ರಷ್ಟಾಚಾರ ಮುಚ್ಚಿಹಾಕುವ ವಿಚಾರ ಮಾತಾಡಲಿ. ಯಡಿಯೂರಪ್ಪ ಬಗ್ಗೆ ಮಾತ್ರವಲ್ಲ ಇಡೀ ಬಿಜೆಪಿ ಒಬ್ಬರಿಗೊಬ್ಬರು ಕುದಿಯುತ್ತಿದೆ. ಯಡಿಯೂರಪ್ಪ ಅವರನ್ನು ಬಿಜೆಪಿ ಲೆಕ್ಕಕ್ಕೆ ಇಟ್ಕೊಂಡಿಲ್ಲ ಎಂದರು.


ಚುನಾವಣೆ ತನಕ ಯಡಿಯೂರಪ್ಪ ಅವರನ್ನು ತಳ್ಳಿಕೊಂಡು ಹೋಗ್ತಿದ್ದಾರೆ. ಯಡಿಯೂರಪ್ಪ ಮಾತಲ್ಲೇ ಅವರ ದುಗುಡ ನೋವು ಗೊತ್ತಾಗ್ತಾ ಇತ್ತು. ಯಡಿಯೂರಪ್ಪ ಮಾತ್ರವಲ್ಲ ಬಿಜೆಪಿಯಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳು ಇವೆ ಎಂದು‌ ಇದೇ ವೇಳೆ ಡಿ.ಕೆ. ಶಿವಕುಮಾರ್ ಆರೋಪಿಸಿದರು.


ಇದನ್ನೂ ಓದಿ- ಸಾರ್ವಜನಿಕರಿಂದ ಹಣ ವಸೂಲಿ ಮಾಡಿದರೆ ಕ್ರಮ: ಪೊಲೀಸರಿಗೆ ಹಿರಿಯ ಅಧಿಕಾರಿಗಳ ಎಚ್ಚರಿಕೆ


ಅಷ್ಟಕ್ಕೂ ವಿವಾದ ಏನು?
ಬೆಂಗಳೂರಿನ ಪ್ರಸ್‌ಕ್ಲಬ್‌ನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಡಿ.ಕೆ ಶಿವಕುಮಾರ್‌ ಮತದಾರರ ಮಾಹಿತಿ ಕಳ್ಳತನ ಹಾಗೂ  ಭ್ರಷ್ಟಾಚಾರದ ಆರೋಪವನ್ನು ಡೈವರ್ಟ್ ಮಾಡಲು ಬಿಜೆಪಿ ಸರ್ಕಾರ ಕುಕ್ಕರ್ ಬ್ಲಾಸ್ಟ್ ಮಾಡಿಸಿದೆ ಎಂದು ಆರೋಪ ಮಾಡಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.