ಬಿಜೆಪಿಯಿಂದ ಸಂವಿಧಾನದ ಆಶಯಗಳ ಕಗ್ಗೊಲೆ ಮಾಡಿದ ಕಾಂಗ್ರೆಸ್‌ನ ಕರಾಳ ನಿದರ್ಶನಗಳ ಪಟ್ಟಿ ಬಿಡುಗಡೆ!
ಭಾರತದ ಸಂವಿಧಾನವನ್ನು ಕಾಂಗ್ರೆಸ್ ಕಗ್ಗೊಲೆ ಮಾಡಿ ಸಂವಿಧಾನದ ಪೀಠಿಕೆಯನ್ನು ಓದುವ ನಾಟಕವಾಡುವುದು ಇದೇ ಮೊದಲಲ್ಲ! ಎಂದು ಕಿಡಿಕಾರಿರುವ ಬಿಜೆಪಿ, ಸಂವಿಧಾನದ ಆಶಯಗಳ ಕಗ್ಗೊಲೆ ಮಾಡಿದ ಕಾಂಗ್ರೆಸ್‌ನ ಕರಾಳ ನಿದರ್ಶನಗಳು ಇಲ್ಲಿವೆ! ಎಂದು ಪಟ್ಟಿ ಬಿಡುಗಡೆ ಮಾಡಿದೆ.
ಬೆಂಗಳೂರು: ಭಾರತದ ಸಂವಿಧಾನವನ್ನು ಕಾಂಗ್ರೆಸ್ ಕಗ್ಗೊಲೆ ಮಾಡಿ ಸಂವಿಧಾನದ ಪೀಠಿಕೆಯನ್ನು ಓದುವ ನಾಟಕವಾಡುವುದು ಇದೇ ಮೊದಲಲ್ಲ! ಎಂದು ಕಿಡಿಕಾರಿರುವ ಬಿಜೆಪಿ, ಸಂವಿಧಾನದ ಆಶಯಗಳ ಕಗ್ಗೊಲೆ ಮಾಡಿದ ಕಾಂಗ್ರೆಸ್‌ನ ಕರಾಳ ನಿದರ್ಶನಗಳು ಇಲ್ಲಿವೆ! ಎಂದು ಪಟ್ಟಿ ಬಿಡುಗಡೆ ಮಾಡಿದೆ.
‘ಮಾಜಿ ಪ್ರಧಾನಿ ನೆಹರು ಅವಧಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿತ್ತು. ನೂರಾರು ಪುಸ್ತಕಗಳನ್ನು ಬ್ಯಾನ್ ಮಾಡಿ ಅನೇಕ ಸಾಹಿತಿಗಳನ್ನು ಜೈಲಿಗೆ ಕಳುಹಿಸಲಾಗಿತ್ತು!, ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಆಯ್ಕೆಯಾದ ಕೇರಳ ಸರ್ಕಾರವನ್ನೇ ರದ್ದುಗೊಳಿಸಿದ್ದರು. ಚಂದ್ರಮೋಹಿನಿ, ರಾಮಾಯಣ, ಹಾರ್ಟ್ ಆಫ್ ಇಂಡಿಯಾ ಸೇರಿ ಹಲವು ಪುಸ್ತಕಗಳನ್ನು ನಿಷೇಧ ಮಾಡಿದ್ದರು. 1975ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಸಂವಿಧಾನವನ್ನು ಕೊಂದು ಸರ್ವಾಧಿಕಾರ ಜಾರಿಗೊಳಿಸಿದ್ದರು!’ ಎಂದು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ: ನಾಟಕದ ವೇಳೆ ಹೃದಯಾಘಾತದಿಂದ ಕುಸಿದುಬಿದ್ದು ಪೋಸ್ಟ್ ಮ್ಯಾನ್ ಸಾವು!
‘ಇಂದಿರಾ ನಡೆಯನ್ನು ವಿರೋಧಿಸಿದ ಸಾವಿರಾರು ಹೋರಾಟಗಾರರನ್ನು ಜೈಲಿಗೆ ಕಳುಹಿಸಲಾಗಿತ್ತು!, ಸರ್ಕಾರ ವಿರುದ್ಧ ವರದಿಗಳನ್ನು ಬಿತ್ತರಿಸದಂತೆ ಪತ್ರಿಕಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿತ್ತು, 1986ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಶಾ ಬಾನೋ ಪ್ರಕರಣದಲ್ಲಿ ಮಹಿಳೆಯರ ಹಕ್ಕುಗಳನ್ನು ಮೊಟಕುಗೊಳಿಸಿ ತುಷ್ಟೀಕರಣ ರಾಜಕೀಯಕ್ಕಿಳಿದು ಸುಪ್ರೀಂಕೋರ್ಟ್ ತೀರ್ಪೇ ರದ್ದುಗೊಳ್ಳುವಂತೆ ಮಾಡಿದ್ದರು. ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೆ ನೀಡಬೇಕಾಗಿದ್ದ ಜೀವನಾಂಶವನ್ನೇ ರದ್ದುಗೊಳಿಸಲಾಯಿತು!, ಮುಸ್ಲಿಂ ಕಟ್ಟರ್‌ವಾದಿಗಳಿಗಾಗಿ ಮಹಿಳೆಯರ ವಿಚ್ಛೇದನದ ಮೇಲಿನ ರಕ್ಷಣೆ ಕಾಯ್ದೆಯನ್ನೇ ರದ್ದುಗೊಳಿಸಿದರು’ ಎಂದು ಬಿಜೆಪಿ ಕುಟುಕಿದೆ.
"ಸಂವಿಧಾನ ವಿರೋಧಿಗಳನ್ನು ಪ್ರತಿಯೊಬ್ಬರು ವಿರೋಧಿಸಬೇಕು"
ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು, ಭ್ರಷ್ಟರನ್ನು ರಕ್ಷಣೆ ಮಾಡಲು ಲೋಕಾಯುಕ್ತವನ್ನೇ ಸಮಾಧಿ ಮಾಡಿದ್ದರು!, ಸಮಾಜಘಾತುಕ ಪಿಎಫ್‌ಐ ಗೂಂಡಾಗಳನ್ನು ಅಮಾಯಕರೆಂದು ಬಿಡುಗಡೆ ಮಾಡಿದ್ದರು, ಈ ಬಾರಿಯೂ ಅದನ್ನು ಮುಂದುವರಿಸಿದ್ದಾರೆ!’ ಕಾಂಗ್ರೆಸ್ಸಿಗರು ಸಂವಿಧಾನದ ಉಳಿವಿಗಾಗಿ ಮಾಡಿದ ಒಂದೇ ಒಂದು ಸಾಧನೆ ಏನಾದರೂ ಇದ್ದರೆ, ಇಂದೇ ಬಹಿರಂಗಪಡಿಸಿ ತಮ್ಮ ಘನತೆಯನ್ನು ಪ್ರಜಾಪ್ರಭುತ್ವದ ಮುಂದೆ ಪ್ರಸ್ತುತಪಡಿಸಬೇಕು’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.