`2023 ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ`
2023 ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಮತ್ತೆ ತನ್ನ ಸ್ವಂತ ಶಕ್ತಿ ಆಧಾರದ ಮೇಲೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದರು.
ಬೆಂಗಳೂರು: 'ನಮಗೆ ಪ್ರಧಾನಿ ಮೋದಿಯವರ ನಾಮಬಲ ಇದೆ ಹಾಗೂ ಪಕ್ಷದ ಸಂಘಟನೆಯ ಬಲವಿದೆ. ನಾವೆಲ್ಲರೂ ಒಟ್ಟಾಗಿ ಇದನ್ನು ಮುಂದುವರೆಸಿಕೊಂಡು ಹೋದರೆ, ನಿರೂಪಣೆ ಮತ್ತು ಕಾರ್ಯಸೂಚಿಯನ್ನು ಸಿದ್ಧಪಡಿಸಿ 2023 ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಮತ್ತೆ ತನ್ನ ಸ್ವಂತ ಶಕ್ತಿ ಆಧಾರದ ಮೇಲೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದರು.
ಅವರು ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಂಚ ರಾಜ್ಯಗಳ ಚುನಾವಣಾ ಉಸ್ತುವಾರಿಗಳಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಇದನ್ನೂ ಓದಿ: ಈಗಲ್ ಟನ್ ವಿವಾದ: ಟೀಕಾಕಾರರ ವಿರುದ್ಧ ಹೆಚ್‌ಡಿಕೆ ತೀವ್ರ ವಾಗ್ದಾಳಿ
ನಿರೂಪಣೆ ಮತ್ತು ಕಾರ್ಯಸೂಚಿ:
ಪಕ್ಷದ ಕಾರ್ಯಕ್ರಮಗಳನ್ನು ಹಾಗೂ ಸಿದ್ಧಾಂತಗಳನ್ನು ತೆಗೆದುಕೊಂಡು ಹೋಗುವುದು ನಮ್ಮ ಪಾಲಿಗೆ ಬಂದಿದೆ.ಮೋದಿಯವರ ನಾಮಬಲ ಹಾಗೂ ಪಕ್ಷದ ಸಂಘಟನೆಯ ಬಲವಿದೆ. ನಾವೆಲ್ಲರೂ ಒಟ್ಟಾಗಿ ಇದನ್ನು ಮುಂದುವರೆಸಿಕೊಂಡು ಹೋದರೆ, ನಿರೂಪಣೆ ಮತ್ತು ಕಾರ್ಯಸೂಚಿಯನ್ನು ಸಿದ್ಧಪಡಿಸಬಹುದು ಎಂದರು.
ಒಗ್ಗಟ್ಟು ಮತ್ತು ಶ್ರಮದ ಮಂತ್ರ
"ಒಗ್ಗಟ್ಟು ಮತ್ತು ಶ್ರಮದ ಮಂತ್ರ ನಮಗೆ ಅಗತ್ಯ.ಪಕ್ಷಕ್ಕೆ ಸಮಯವನ್ನು ಕೊಟ್ಟರೆ ಇದು ಸಾಧ್ಯವಿದೆ.ಅದಕ್ಕಾಗಿ 24/7 ಕಾರ್ಯನಿರ್ವಹಿಸಲು ನಾನು ಸಿದ್ದ, ಸರ್ಕಾರ ಮತ್ತು ಪಕ್ಷ ಎರಡು ಕಣ್ಣುಗಳಿದ್ದಂತೆ.ಅವುಗಳನ್ನು ಮುಂದಿಟ್ಟುಕೊಂಡು ಕರ್ನಾಟಕದ ಮೂಲೆ ಮೂಲೆಗಳನ್ನು ಸುತ್ತಿ, ಬಿಜೆಪಿಯ (karnataka bjp) ಅಸ್ತಿತ್ವವಿಲ್ಲದೆಡೆಗಳಲ್ಲಿ ಪಕ್ಷವನ್ನು ಗೆಲ್ಲಿಸುತ್ತೇವೆ.ಎಲ್ಲಿ ಗೆದ್ದಿದ್ದೇವೆ, ಅವುಗಳನ್ನು ಉಳಿಸಿಕೊಂಡು ಹೋಗಬೇಕು.ಅತ್ಯಂತ ವ್ಯವಸ್ಥಿತ, ಯೋಜನಾಬದ್ಧ ಚುನಾವಣೆಯನ್ನು ನಾವೆಲ್ಲರೂ ಸೇರಿ ಎದುರಿಸೋಣ" ಎಂದು ಹೇಳಿದರು.
ಇದನ್ನೂ ಓದಿ: ಜೀ ಕನ್ನಡ ನ್ಯೂಸ್‌ನಲ್ಲಿ 'ಕಾಮನ್‌ಮ್ಯಾನ್' ಮನದಾಳದ ಮಾತು... ವೀಕ್ಷಿಸಿ ನಾಳೆ ಸಂಜೆ 5.30ಕ್ಕೆ
ಕಮಲ ಅರಳಲಿದೆ
"ಕಷ್ಟ ಕಾಲದಲ್ಲಿ ನಮ್ಮ ಕಾರ್ಯಕರ್ತರು ಯಾವ ರೀತಿ ಕೆಲಸ ಮಾಡಿದ್ದಾರೆ ಎಂಬ ಅರಿವಿದೆ. ಕಳೆದ ಬಾರಿ ನಾವು ಚುನಾವಣೆಯಲ್ಲಿ ಗೆಲ್ಲಬೇಕಿತ್ತು.ಆದರೆ ಆಗಲಿಲ್ಲ. ಏನೇ ಆಗಲಿ ಈ ಬಾರಿ ಅದರಿಂದ ನಾವು ಪಾಠವನ್ನು ಕಲಿತಿದ್ದೇವೆ.2023 ರಲ್ಲಿ 100 ಕ್ಕೆ 100 ರಷ್ಟು ವಿಧಾನಸೌಧದ 3 ನೇ ಮಹಡಿಯಲ್ಲಿ ಕಮಲವೇ ಅರಳಲಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
"ಈ ಅನುಭವವನ್ನು ಕರ್ನಾಟಕಕ್ಕೆ ಹೇಗೆ ಅಳವಡಿಸಬೇಕೋ ಅದನ್ನು ಮಾಡುತ್ತೇವೆ.ನಿತ್ಯ ನಿರಂತರ ಸಂಪರ್ಕವನ್ನು ಪಕ್ಷದ ಜೊತೆ, ಕಾರ್ಯಕರ್ತರೊಂದಿಗೆ, ನಾನು, ಮಂತ್ರಿಮಂಡಲ ಹಾಗೂ ಶಾಸಕ ಮಿತ್ರರೆಲ್ಲರೂ ಸೇರಿ ಮಾಡುತ್ತೇವೆ. ಒಟ್ಟಾಗಿ ಮುನ್ನೆಡೆಯೋಣ, ಜಯ ನಮ್ಮದು" ಎಂದರು.
ಈ ಸಂದರ್ಭದಲ್ಲಿ ಚುನಾವಣಾ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡಿದ್ದ ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ, ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ರಾಜ್ಯ ಬಿಜೆಪಿ ಪ್ರದಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರನ್ನು ಅಭಿನಂದಿಸಲಾಯಿತು.ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್, ಸಚಿವರಾದ ವಿ ಸೋಮಣ್ಣ, ಮುನಿರತ್ನ, ಸಂಸದ ಪಿ.ಸಿ.ಮೋಹನ್, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ನಿರ್ಮಲಕುಮಾರ ಸುರಾನಾ, ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಚಲವಾದಿ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.