ಬೆಂಗಳೂರು : ಭಾರತೀಯ ಜನತಾ ಪಕ್ಷ  ಸದೃಢ ಹಾಗೂ ಬಲಿಷ್ಟ ಭಾರತ ಕಟ್ಟಲಿದೆ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಭಾರತೀಯ ಜನತಾ ಪಾರ್ಟಿ ವತಿಯಿಂದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಆಯೋಜಿಸಿರುವ ಭಾ.ಜ.ಪ ಪ್ರಕೋಷ್ಠಗಳ ರಾಜ್ಯ ಸಮಾವೇಶ ಶಕ್ತಿ ಸಂಗಮದಲ್ಲಿ ಪಾಲ್ಗೊಂಡು ಮಾತನಾಡಿದರು.


COMMERCIAL BREAK
SCROLL TO CONTINUE READING

ದೇಶವನ್ನು ಸಧೃಡವಾಗಿ, ಸ್ವಾಭಿಮಾನದಿಂದ ವಿಶ್ವಮಾನ್ಯ ದೇಶವನ್ನು ಕಟ್ಟಲು ಹಾಗೂ ಸಮಾಜದ ಎಲ್ಲ ವರ್ಗಗಳಲ್ಲಿ ಸಮಾನತೆ ಹಾಗೂ ಸಾಮರಸ್ಯ, ವೃತ್ತಿಗಳಿಗೆ ಗೌರವ ಮತ್ತು ಅಸ್ಮಿತೆ ನೀಡಲು ಪ್ರಕೋಷ್ಟಗಳನ್ನು ರಚಿಸಿ, ಅನುಭವಿ ಹಿರಿಯರನ್ನು ಕರೆತಂದು ರಾಷ್ಟ್ರೀಯ ಮುಖ್ಯವಾಹಿನಿಗೆ ಕರೆತಂದು  ತಮ್ಮ ಸಮಾಜದ  ಹಾಗೂ ವೃತ್ತಿಯ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರೆಯುವಂತಹ ವಿನೂತನ ಕೆಲಸವನ್ನು ಭಾರತೀಯ ಜನತಾ ಪಕ್ಷ ಮಾಡುತ್ತಿದೆ. ವೃತ್ತಿ ಆಧಾರಿತ ಸಮಾಜ ನಿರ್ಮಾಣವನ್ನು ಇತಿಹಾಸದಲ್ಲಿ ಕಂಡಿದ್ದೇವೆ. ಈ ಪ್ರಕೋಷ್ಟಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೆಲವೊಂದು ವೃತ್ತಿಯಲ್ಲಿ ಕೀಳರಿಮೆ ಇದ್ದು, ಅಂತಹ ವೃತ್ತಿಯಲ್ಲಿರುವವರನ್ನು ಭಾಜಪ ತನ್ನೊಂದಿಗೆ ಜೋಡಿಸಿಕೊಂಡು ಅವರಿಗೆ  ಆತ್ಮಸ್ಥೈರ್ಯ ತುಂಬುವ ಹಾಗೂ ವ್ಯಕ್ತಿತ್ವ ವಿಕಸನ ಮಾಡುವ ಕೆಲಸವನ್ನು ಮಾಡುತ್ತಿದೆ. ಪೊಲಿಟಿಕಲ್ ಸೈನ್ಸ್ ಜೊತೆಗೆ ಸೋಶಿಯಲ್ ಸೈನ್ಸ್ ಜೋಡಿಸುವ ಏಕೈಕ ಪಕ್ಷ ಭಾಜಪ. ಇದರಿಂದ ದೇಶವನ್ನು ಸುದೀರ್ಘ ಕಾಲದವರೆಗೆ ಸದೃಢವಾಗಿ ಬಲಿಷ್ಟವಾಗಿರಿಸಬಹುದಾಗಿದೆ ಎಂದರು.


ಇದನ್ನೂ ಓದಿ : Winter Session : ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋ ; ವಿಪಕ್ಷ ದಾರಿ ತಪ್ಪಿಸಿದ ಬಿಜೆಪಿ ಸರ್ಕಾರ?


ಕೆಲವು ಪಕ್ಷಗಳು ಅಧಿಕಾರಕ್ಕಾಗಿ ರಾಜಕಾರಣ ಮಾಡಿದರೆ, ಭಾಜಪ ಜನರ ಒಳಿತಿಗಾಗಿ ರಾಜಕಾರಣ ಮಾಡುತ್ತಿದೆ. ಆದ್ದರಿಂದ ಭಾಜಪ ವಿಶ್ವಕ್ಕೆ ಮಾದರಿಯಾಗಿದೆ. ವಿವಿಧ ವೃತ್ತಿ, ಆರ್ಥಿಕ, ಮಾಧ್ಯಮ , ಪ್ರಕಾಶನ ಹೀಗೆ ವಿವಿಧ ರಂಗಗಳ 24 ಪ್ರಕೋಷ್ಟಗಳ ರಾಜ್ಯಮಟ್ಟದ ಸಮ್ಮೇಳನ ಇಂದು ನಡೆಯುತ್ತಿದೆ. ಪ್ರಥಮ ಬಾರಿಗೆ ಇಂತಹ ಸಮಾವೇಶ ಕರ್ನಾಟಕದಲ್ಲಿ  ನಡೆಯುತ್ತಿರುವುದಕ್ಕೆ ಪಕ್ಷದ ವರಿಷ್ಟರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.


21 ನೇ ಶತಮಾನ ಜ್ಞಾನ ಮತ್ತು ಶ್ರಮದ ಶತಮಾನ. ಜ್ಞಾನವಿದ್ದವರು ಶಕ್ತಿ ಶಾಲಿಯಾಗುತ್ತಿರುವುದು ಈ ಶತಮಾನದಲ್ಲಿ. ಭಾಜಪ 2014 ರಲ್ಲಿನಧಿಕಾರಕ್ಕೆ ಬಂದ ನಂತರ ದೇಶದಲ್ಲಿ ದುಡಿಯುವ ವರ್ಗವನ್ನು ಗುರುತಿಸಲಾಗಿದೆ. ಅವರ ಕೌಶಲ್ಯ ವೃದ್ಧಿಗೊಳಿಸಿ ಉತ್ಪಾದನೆ ಹೆಚ್ಚಿಸಿ ಆ ವ್ಯಕ್ತಿ ಕುಟುಂಬದ ಉತ್ಪಾದನೆ ಹೆಚ್ಚು ಮಾಡಿ ಆ ಮೂಲಕ ಕೆಲಹಂತದಿಂದ ದೇಶವನ್ನು ಕಟ್ಟುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ಸ್ಕಿಲ್ ಇಂಡಿಯಾ ಕಾರ್ಯಕ್ರಮವನ್ನು ರೂಪಿಸಿದರು. ಪ್ರಥಮ ಬಾರಿ ದೇಶದ ಜನಸಂಖ್ಯೆಯ ವ್ಯಾಖ್ಯಾನವನ್ನು ಅವರು ಬದಲಾಯಿಸಿದ್ದಾರೆ. ದೂರದೃಷ್ಟಿಯುಳ್ಳ, ಸಕಾರಾತ್ಮಕ ಚಿಂತನೆ, ಆಡಳಿತ, ರಾಜಕಾರಣ ನೀಡಲು ಜನಸಂಖ್ಯೆಯ ಲಾಭವನ್ನು ದೇಶಕ್ಕೆ ನೀಡಬೇಕು.  ಶೇ 46 ರಷ್ಟಿರುವ ಯುವಶಕ್ತಿಯನ್ನು ಕೌಶಲ್ಯ ಯುತಗೊಳಿಸಿ ಪ್ರಬುದ್ಧವಾದ ದುಡಿಯುವ ವರ್ಗ ವನ್ನು ಸೃಷ್ಟಿ ಸಿದರೆ ಉತ್ಪಾದನೆ ಹೆಚ್ಚಿಸಿ ,ಆರ್ಥಿಕತೆ ಯನ್ನು ಹೆಚ್ಚಿಸಬಹುದು. ಮೇಕ್ ಇನ್ ಇಂಡಿಯಾ, ಮುದ್ರಾ ಯೋಜನೆ, ತಂತ್ರಜ್ಞಾನಕ್ಕೆ ಸ್ಕಿಲ್ ಇಂಡಿಯಾ, ರಕ್ಷಣಾ ಸಲಕರಣೆಗಳನ್ನು ನಮ್ಮಲ್ಲಿಯೇ ಉತ್ಪಾದನೆ ಮಾಡಲಾಗುತ್ತಿದೆ. ಎಲ್ಲ ರಂಗದಲ್ಲಿಯೂ ಜನಶಕ್ತಿ ಬಳಕೆಯಾಗುತ್ತಿದೆ ಎಂದರು. 


ಇದನ್ನೂ ಓದಿ : "ಯಾರು ಏನಾದರೂ ಪ್ರತಿಭಟನೆ ಮಾಡಲಿ, ನನ್ನ ಹೆಸರು ಪ್ರಚಾರ ಮಾಡಲಿ"


ಹಿಂದಿನವರು ದೇಶ ಕಟ್ಟುವ ಪರಿಯಲ್ಲಿಯೇ ದಾರಿ ತಪ್ಪಿದ್ದರು. ದೇಶದಲ್ಲಿ ಪ್ರಗತಿಯಾಗುತ್ತಿದ್ದರೆ ದುಡಿಯುವ ವರ್ಗದ ಶ್ರಮವೇ  ಕಾರಣ. ದುಡಿಯುವ ವರ್ಗಕ್ಕೆ ದೇಶ ಕಟ್ಟುವ ಕೆಲಸದಲ್ಲಿ ಅವಕಾಶ ಮಾಡಿಕೊಡುವ ಉದ್ದೇಶವಿದೆ. ಕರ್ನಾಟಕದಲ್ಲಿ ಕಳೆದ ಐದಾರು ವರ್ಷಗಳಿಂದ ನಿರಂತರವಾಗಿ ಸಂಘಟನೆ ಮಾಡಿ ರಾಜ್ಯ, ಜಿಲ್ಲಾ, ಮಂಡಳಿಗಳ ಮಟ್ಟದಲ್ಲಿ ಸಾಧ್ಯವಾಗಿದೆ. ಇನ್ನೂ ಕೆಳಹಂತಕ್ಕೆ  ಹೋಗುವ ವಿಚಾರ ನಮಗಿದೆ. ಸಮಾಜದಲ್ಲಿ ಮುಖ್ಯ ವಾಹಿನಿಗೆ ಸೇರಿಸುವ ಒಳ್ಳೆ ಕೆಲಸ ರಾಜ್ಯದಲ್ಲಿ ಆಗಿದೆ. 15 ಸಾವಿರ ಜನ ಇಲ್ಲಿ ಸೇರಿರುವುದೇ ಇದಕ್ಕೆ ಸಾಕ್ಷಿ. ಈ ಸಮವೇಶದಲ್ಲಿ ನಾವು ಕಲಿಯಬೇಕಾಗಿರುವುದು ಭಾಜಪ ದೇಶವನ್ನು ಸಧೃಢವಾಗಿ ಕಟ್ಟುವ ಕೆಲಸಕ್ಕೆ ನಮ್ಮನ್ನು ನಾವು ಸದೃಢ ವಾಗಿಸಿಕೊಳ್ಳಬೇಕು. ದೇಶಕ್ಕೆ  ದಿಕ್ಸೂಚಿ ದೊರೆತಿದೆ. ಇದು ಅಮೃತ ಕಾಲದ ಕನಸು ನನಸಾಗಲು ಆತ್ಮನಿರ್ಭರ್, ವಿಶ್ವ ಮಾನ್ಯ ಭಾರತ ಒಂದನೇ ಸ್ಥಾನಕ್ಕೆ ಬರುವ ಭಾರತ ನಮ್ಮದು ಎಂದರು. 


2023 ಮತ್ತು 2024ರ.ಲೋಕಸಭಾ ಚುನಾವಣೆಗೆ ಮನೆ ಮನೆಗೆ ಹೋಗಿ, ಮನಗಳನ್ನು ಗೆದ್ದು ಕಮಲವನ್ನು ಅರಳಿಸಿ ದೇಶ ಕಟ್ಟುವ ಕೆಲಸವನ್ನು ನಿರಂತರವಾಗಿ ಮಾಡಬೇಕು. ಎಲ್ಲ ವೃತ್ತಿಗಳ ಬಂಧುಗಳಲ್ಲಿ ಈ ವಾಗ್ದಾನ ಮಾಡುವ ಶಕ್ತಿಯ ಸಮಾವೇಶವಿದು ಎಂದು ತಿಳಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.