ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಸೇರಿದಂತೆ ವರ್ಗಾವಣೆಯಲ್ಲಿ  ಭಾರಿ ಅಕ್ರಮ ನಡೆಯುತ್ತಿದೆ. ವರ್ಗಾವಣೆಯು ಲಕ್ಷ-ಕೋಟಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ರಾಜ್ಯದ ಪತ್ರಿಕೆಗಳು ಸುದ್ದಿ ಮಾಡುತ್ತಿವೆ.ವರ್ಗಾವಣೆಯ ಹಣ ನೇರವಾಗಿ ಸಂಘಪರಿವಾರದ ಕೇಶವ ಕೃಪಕ್ಕೆ ಸಂದಾಯವಾಗುತ್ತಿದೆ. ಕಲ್ಲಡ್ಕದ ಭಯೋತ್ಪಾದಕ ಒಬ್ರು ಹೇಳಿದ ಹಾಗೆ ವರ್ಗಾವಣೆ ನಡೆಯುತ್ತಿರುವುದು ದುರಂತ ಎಂದು ಆರ್ ಎಸ್ ಎಸ್ ನ ಕಲ್ಲಡ್ಕ ಪ್ರಭಾಕರ್ ಭಟ್ಟರ ಹೆಸರು ಹೇಳದೆ ಬಿಜೆಪಿ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಕಲಾಪದಲ್ಲಿ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ (BK Hariprasad) ವಾಗ್ದಾಳಿ ನಡೆಸಿದ್ದಾರೆ. 


COMMERCIAL BREAK
SCROLL TO CONTINUE READING

ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರುವ ಕುರಿತ ವಿಷಯದಲ್ಲಿ ನಿಯಮ 68ರ ಮೇಲಿನ ಚರ್ಚೆಯಲ್ಲಿ ಮಾತ್ನಾಡಿದ ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪೊಲೀಸ್ ಇಲಾಖೆಗಳ ಲಂಚ, ಭ್ರಷ್ಟಾಚಾರದ ಬಗ್ಗೆ ಧಾರವಾಹಿಗಳನ್ನ ಪ್ರಕಟಿಸುತ್ತಿದ್ದಾರೆ.ನೇಮಕಾತಿ, ವರ್ಗಾವಣೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ.ಸುಪ್ರೀಂ ಕೋರ್ಟ್ ನ ನಿಯಮಗಳನ್ನ ಗಾಳಿಗೆ ತೂರಿ ಸರ್ಕಾರ ವರ್ಗಾವಣೆ ನಡೆಸುತ್ತಿದೆ.ಹಣ ಕೊಟ್ಟು ವರ್ಗಾವಣೆ ಆದ ಅಧಿಕಾರಿಗಳು ಪೊಲೀಸ್ ಠಾಣೆಗಳಲ್ಲಿ ಲಂಚ ತೆಗೆದುಕೊಳ್ಳದೆ ಕೆಲಸಗಳನ್ನೇ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದರು.


ಇದನ್ನೂ ಓದಿ: Arecanut Price: ಕಾರವಾರ, ಶಿವಮೊಗ್ಗ & ತುಮಕೂರಿನಲ್ಲಿ ಇಂದಿನ ಅಡಿಕೆ ಧಾರಣೆ


ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಇನ್ಸೆಪೆಕ್ಟರ್ ಒಬ್ರು ಗೂಗಲ್ ಪೇ ಮೂಲಕ, ಫೋನ್ ಪೇ ಮೂಲಕ ಹಣ ತೆಗೆದುಕೊಳ್ಳುತ್ತಿದ್ದಾರೆ.ಪೊಲೀಸ್ ಕೂಡ ಅಪ್ಡೇಟ್ ಆಗಿ ಲಂಚ ಸ್ವೀಕರಿಸುತ್ತಿದ್ದಾರೆ.ಅಂತಹ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದೆ ಸರ್ಕಾರ ಕುಮ್ಮಕ್ಕು ನೀಡಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. 


ಪೊಲೀಸ್ ಅಧಿಕಾರಿಗಳನ್ನ ವರ್ಷಕ್ಕೊಮ್ಮೆ ವರ್ಗಾವಣೆಯನ್ನ ನಡೆಸುತ್ತಿರುವುದರ ಹಿಂದೆ ಲಕ್ಷ-ಕೋಟಿ ಲಂಚದ ಹಣ ಅಕ್ರಮ ನಡೆಯುತ್ತಿದೆ.ಸರ್ಕಾರ ಎಲ್ಲದಕ್ಕೂ ಸಾಕ್ಷಿ ಕೇಳುತ್ತಿದೆ ಹಾಗಾದ್ರೆ ಸರ್ಕಾರ ನಿಮ್ಮದೇ ಇರುವಾಗ ತನಿಖಾ ಏಜೆನ್ಸಿಗಳಿಂದ ತನಿಖೆ ನಡೆಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.


ಇದನ್ನೂ ಓದಿ: ಶಿವಮೊಗ್ಗ ರಂಗಾಯಣದಲ್ಲಿ ರಂಗಶಿಕ್ಷಣ ಸರ್ಟಿಫಿಕೇಟ್ ಕೋರ್ಸ್ ಆರಂಭ


ಇತ್ತೀಚೆಗೆ ಹಿಜಾಬ್ (Hijab Row) ವಿಷಯದಲ್ಲಿ ಹೈಕೋರ್ಟ್ 'ಕಾಣದ ಕೈಗಳು ಇಂತಹ ಘಟನೆಗಳನ್ನು ನಡೆಸುತ್ತಿದೆ" ಎಂಬ ಹೇಳಿಕೆ ನೀಡಿದೆ.ಅಂತಹ ಶಕ್ತಿಗಳು ಯಾವುದು ಎಂದು ಪತ್ತೆ ಹಚ್ಚಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.ರಾಜ್ಯದಲ್ಲಿ, ದೇಶದಲ್ಲಿ ನಿಮಿಷಕ್ಕೊಮ್ಮೆ, ಗಂಟೆಗೊಮ್ಮೆ, ದಿನಾಲು ದಲಿತರ ಮೇಲೆ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆಗಳು ನಡೆಯುತ್ತಲೇ ಇದೆ. ಬಹುತೇಕ ಪ್ರಕರಣಗಳು ಪೊಲೀಸ್ ಠಾಣೆಗೂ ಬರವುದಿಲ್ಲ, ಬರುವ ಪ್ರಕರಣಗಳು ಠಾಣೆಗಳಲ್ಲಿಯೇ ರಾಜೀ ಪಂಚಾಯಿತಿ ಮಾಡುವ ಕೆಲಸಗಳು ಹೆಚ್ಚಾಗುತ್ತಿದೆ. ಇದಕ್ಕೆ ಮೂಲ ಕಾರಣ ಪೊಲೀಸ್ ಇಲಾಖೆಗಳಲ್ಲಿ ಜಾತಿಯ ಆಧಾರದ ಮೇಲೆ, ಲಂಚದ ಮೇಲೆ, ಧರ್ಮದ ಆಧಾರದ ಮೇಲೆ ನಡೆಯುತ್ತಿರುವ ವರ್ಗಾವಣೆಯೇ ಕಾರಣ ಎಂದು ಬಿಕೆ ಹರಿಪ್ರಸಾದ್ ಕಿಡಿ ಕಾರಿದರು.


ನೇಮಕಾತಿಗಳಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಪಿಎಸ್ ಐ ಅಭ್ಯರ್ಥಿಗಳು ನೊಂದು ಕಾನೂನು ಹೋರಾಟ ನಡೆಸುತ್ತಿದ್ದಾರೆ. ಪತ್ರಿಕೆಯಲ್ಲಿ ಅದರ ಬಗ್ಗೆ ಸುದೀರ್ಘವಾಗಿ ದಾಖಲೆ ಸಮೇತ ಪ್ರಕಟ ಮಾಡಿದೆ. ಅಭ್ಯರ್ಥಿಗಳು ಉತ್ತರ ಪತ್ರಿಕೆ ಕೊಡಿ ಎಂದು ಅರ್ಜಿ ಸಲ್ಲಿಸಿ ಎಂದು ಗೃಹ ಸಚಿವರು ಹೇಳಿಕೆ ಕೊಡ್ತಾರೆ, ಆದ್ರೆ ಪೊಲೀಸ್ ಮಹಾ ನಿರ್ದೇಶಕರು ಉತ್ತರ ಪತ್ರಿಕೆ ಕೊಡಕ್ ಆಗಲ್ಲ ಅಂತಾರೆ. ಅಭ್ಯರ್ಥಿಗಳನ್ನ ಯಾಕೆ ಪೊಲೀಸ್ ಇಲಾಖೆ ದಿಕ್ಕು ತಪ್ಪಿಸುತ್ತಿದೆ ಎಂದು ಅವರು ಪ್ರಶ್ನಿಸಿದರು.


ಇದನ್ನೂ ಓದಿ: ‘ಟಿಪ್ಪು ಇಸ್ಲಾಂ ಸಾಮ್ರಾಜ್ಯದ ವಿಸ್ತಾರಕನಾಗಿದ್ದನೇ ಹೊರತು ಭಾರತಕ್ಕಾಗಿ ಬೆವರು ಸುರಿಸಿಲ್ಲ’


ಒಂದು ತಾಲೂಕಿನಲ್ಲೇ ಐವತ್ತಕ್ಕೂ ಹೆಚ್ಚು ‌ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆಂಬ ಆರೋಪವಿದೆ, ಇದರ ಸತ್ಯಾಸತ್ಯೆಗಳನ್ನ ರಾಜ್ಯದ ಜನರಿಗೆ ಅರ್ಥ ಮಾಡಲು ಇಲಾಖೆ ಸೋತಿದೆ. ನೇಮಕಾತಿಯಿಂದಲೇ ಅಕ್ರಮ, ಅನ್ಯಾಯ, ಭ್ರಷ್ಟಾಚಾರಗಳು ನಡೆಯುವಾಗ ರಾಜ್ಯದಲ್ಲಿ ಹೇಗೆ ಕಾನೂನು, ಸುವ್ಯವಸ್ಥೆ ಕಾಪಾಡುವುದಕ್ಕೆ ಸಾಧ್ಯ.ಭ್ರಷ್ಟಾಚಾರ ಪ್ರಕರಣಗಳು ಹೆಚ್ಚಾಗುವುದಕ್ಕೆ ಪೊಲೀಸರ ಸಂಬಳ ಕಡಿಮೆಯಾಗುವುದು ಕೂಡ ಕಾರಣ ಇರಬಹುದು.ಸರ್ಕಾರದ ಪ್ರಮುಖ ಇಲಾಖೆಯಲ್ಲಿಯೇ ಸುವ್ಯವಸ್ಥೆ ತರುವಲ್ಲಿ ಸರ್ಕಾರ ಸೋತಿದೆ ಎಂದು ಅವರು ದೂರಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.